ಗೌರವದ ಬಳೆ…..

ಸುಮ್ಮನಲ್ಲ ತೋಡುವ ಬಳೆ,
ತಿಳಿ ನೀ ಹಿರಿದಿದೆ ಅದರ ಬೆಲೆ,
ಹೀಯಾಳಿಸಿದರೆ ಸುರಿವುದು ಕಷ್ಟಗಳ
ಸುರಿಮಳೆ.
ಹೀಯಾಳಿಸಿ ಕಡೆ ಗಣಿಸಬೇಡ
ನೀನದಕ್ಕೆ ಅಗೌರವ ತೋರಬೇಡ,
ಶಕ್ತಿಯ ರೂಪ ಅದು ನೀ ಮರಿಬೇಡ.
ಆ ಬಳೆ ಇಲ್ಲದೆ ನೀ ಜನಿಸಿಲ್ಲ,
ಅದರ ಸದ್ದಿಲ್ಲದೆ ನೀ ಬೆಳೆದಿಲ್ಲ,
ಕಷ್ಟದಲ್ಲಿ ಅದು ನಿನ್ನ ಕೈ ಬಿಟ್ಟಿಲ್ಲ.
ಬದುಕಲ್ಲಿ ಬಳೆಗೆ ನೀ ಗೌರವ ತೋರು,
ಕೊನೆವರೆಗೂ ನಿನಗೆ ಶ್ರೀ ರಕ್ಷೆಯಾಗಿ
ಕಾಯುವುದು,
ಇಲ್ಲ ನೆನಪಿಟ್ಟುಕೊ ನಿನಗದೆ ಮಹಾ
ಮಾರಿಯಾಗುವುದು…
✍️ಕು|| ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ
ಕಲಬುರ್ಗಿಯ ವಿದ್ಯಾರ್ಥಿನಿ