ಬಡ ಜನಗಳ ಹಿತ ಕಾಪಾಡುವಂತ ಶಾಸಕರಿಗೆ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ. ಇಡೀ ರಾಜ್ಯಕ್ಕೆ ಅವರ ಅವಿರತ ಸೇವೆ ಸಲ್ಲಿಸು ವಂತಾಗಬೇಕೆಂದು ಮೊಳಕಾಲ್ಮುರು ಕ್ಷೇತ್ರದ ಮತದಾರರ ಹೆಬ್ಬಯಕೆಯಾಗಿದೆ
ಮೊಳಕಾಲ್ಮುರು ನವೆಂಬರ್.22

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣ ವ್ಯಾಪ್ತಿಗೆ ಸಂಬಂಧಿಸಿದ ಪಿ.ಡಬ್ಲ್ಯೂ.ಡಿ ಇಲಾಖೆಯ ಸಿದ್ದಯ್ಯನ ಕೋಟೆ ಇಂದ ರಾಯಪುರ ಗೇಟ್ ಗೆ ಹೋಗುವ ರಸ್ತೆ ಮತ್ತು ಇನ್ನು ಅನೇಕ ರಸ್ತೆಗಳು ಸುಮಾರು ಹತ್ತು ವರ್ಷಗಳಿಂದ ರಿಪೇರಿ ಕಾಣದೆ ರಸ್ತೆಗಳಾಗಿವೆ ಮತ್ತು ಬರಿ ಗುಂಡಿಗಳು ಕಾಣುತ್ತವೆ ರಸ್ತೆಯಲ್ಲಿ ವಾಹನಗಳ ಚಲಿಸುವಾಗ ಎದ್ನೋ ಬಿದ್ನೋ ಹಾಗೆ ಚಲಿಸುವಂತೆ ಹೋಗ ಬೇಕಾಗುತ್ತದೆ ಅದೇ ರೀತಿಯಾಗಿ ಹಿಂದೆ ಇರುವ ಶಾಸಕರು ರಸ್ತೆಗಳ ಬಗ್ಗೆ ಗಮನ ಹರಿಸಿದೆ ಮತ್ತು ಗ್ರಾಮಗಳಲ್ಲಿ ಯಾವುದೇ ರೀತಿಯಾಗಿ ಮೂಲಭೂತ ಸೌಕರ್ಯಗಳು ಸಹ ಕಂಡಿರುವುದಿಲ್ಲ ರೈತಾಪಿ ಬಡ ವರ್ಗದ ರೈತರನ್ನು ಕಾಪಾಡುವಲ್ಲಿ ವಿಫಲರಾಗಿರುತ್ತಾರೆ ಈ 2023 ಚುನಾವಣೆಯಲ್ಲಿ ಗೆದ್ದು ಜನನಾಯಕ ಎನಿಸಿಕೊಂಡ ಜನಪ್ರಿಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಒಳ್ಳೆ ಆಡಳಿತ ಮತ್ತು ರಸ್ತೆಗಳ ಬಗ್ಗೆ ಗಮನ ಹರಿಸಿ ಎಲ್ಲಾ ವರ್ಗದ ಬಡ ಜನಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡುವಂತ ಶಾಸಕರು ಎನ್ ವೈ ಗೋಪಾಲಕೃಷ್ಣ ಇವರು ಸುಮಾರು 20 ವರ್ಷದಿಂದ ಹಿಂದೆ ಮೊಳಕಾಲ್ಮ ಕ್ಷೇತ್ರದ ಶಾಸಕರಾಗಿದ್ದಾಗ ರಂಗಯ್ಯನದುರ್ಗ ಜಲಾಶಯವನ್ನು ಯೋಜನೆ ರೂಪಿಸಿದಂತ ಶಾಸಕರು ಈ ಜಲಾಶಯದಿಂದ ಮೊಳಕಾಲ್ಮುರು ಪಟ್ಟಣಕ್ಕೆ ನೀರು ಹರಿಸಿ ನೀರಿನ ದಾಹ ನೀಗಿಸಿದಂತಹ ಶಾಸಕರು ಮೊಳಕಾಲ್ಮುರು ಪಟ್ಟಣದ ರಸ್ತೆಗಳಾಗಲಿ ಮೂಲಭೂತ ಸೌಕರ್ಯಗಳಾಗಲಿ ಆರೋಗ್ಯದ ಬಗ್ಗೆ ಆಗಲಿ ಸಾರ್ವಜನಿಕರ ಹಿತ ಕಾಪಾಡುವಂತ ಶಾಸಕರು ಮತ್ತು ಈ ರಂಗಯ್ಯನ ದುರ್ಗಾ ಜಲಾಶಯದಿಂದ ಸುಮಾರು 15 20 ಹಳ್ಳಿ ರೈತರ ಜಮೀನಿನಲ್ಲಿ ಬೆಳೆ ಬೆಳೆಯಲಿಕ್ಕೆ ಶಕ್ತಿ ಕೊಟ್ಟಂತ ಶಾಸಕರು ಹಿರೇಕೆರಳ್ಳಿ ತಳವಾರಳ್ಳಿ ಬೊಮ್ಮಲಿಂಗನಹಳ್ಳಿ ಬಟ್ರಳ್ಳಿ ನಾಗಸಂದ್ರ ಚಿಕ್ಕೇರಳ್ಳಿ ಅಮಕುಂದಿ ಇನ್ನು ಅನೇಕ ಹಳ್ಳಿಗಳು ಈ ಜಲಾಶಯದ ನೀರನ್ನು ಉಪಯೋಗಿಸಿ ಕೊಂಡು ಬೆಳೆ ಬೆಳೆಯುತ್ತಾರೆ.

ರೈತರು ಗಂಗೆ ಮಾತೆ ಒಲಿದರೆ ಧರ್ಮದ ಹಾದಿಯಲ್ಲಿ ನಡೆಯುವಂತ ವ್ಯಕ್ತಿಗೆ ಮಾತ್ರ ಗಂಗೆ ಒಲಿಯುತ್ತಾಳೆ ಆದರೆ ಕೂಡ್ಲಿಗಿ ತಾಲೂಕಿನಲ್ಲಿ 74 ಕೆರೆಗಳಿಗೆ 800 ಕೋಟಿ ವೆಚ್ಚದ ಅನುದಾನ ಬಿಡುಗಡೆ ಮಾಡಿಸಿ ಯೋಜನೆ ರೂಪಿಸಿದಂತ ಶಾಸಕರು ಎನ್ ವೈ ಗೋಪಾಲಕೃಷ್ಣ ಇವರು ಯಾವುದೇ ಯೋಜನೆ ರೂಪಿಸಿದರೆ ಎಲ್ಲಾ ಸಾರ್ವಜನಿಕರಿಗೆ ಬೇಕಾಗುವಂತ ಯೋಜನೆ ಮಾತ್ರ ರೂಪಿಸುತ್ತಾರೆ ಆದರೆ ಸುಮಾರು ಆರು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಜಯಗಳಿಸುತ್ತಾರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕಾರಣಾಂತರಗಳಿಂದ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಗೆದ್ದು ಕೂಡ್ಲಿಗಿ ಕ್ಷೇತ್ರವನ್ನು ಕೊಳಕನ್ನು ತೊಳೆದು ಹಸನು ಮಾಡಿದ ಶಾಸಕರು ಆದರೆ ಈಗ ಮೊಳಕಾಲ್ಮೂರು ಕ್ಷೇತ್ರಕ್ಕೆ ಒಳ್ಳೆ ಯೋಜನೆಗಳು ಮತ್ತು ಅಭಿವೃದ್ಧಿಗಳು ರೂಪಿಸಬೇಕೆಂದು ಶಾಸಕರ ಮನಸ್ಸು ಆಗಿರುತ್ತದೆ ಆದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಒಂದು ಕ್ಷೇತ್ರ ಸೀಮಿತವಾಗಿರುವುದು ನಿಜ ಅನಿಸುತ್ತದೆ ಆದರೆ ಈ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕ್ಯಾಬಿನೆಟ್ ಸಚಿವ ಸ್ಥಾನ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಸ್ಥಾನ ಕೊಟ್ಟು ರಾಜ್ಯಕ್ಕೆ ಬಡ ಜನಗಳ ಹಿತ ಕಾಪಾಡುವಂತೆ ಶಕ್ತಿ ತುಂಬ ಬೇಕಾಗಿತ್ತು ಇಂತಹ ಒಬ್ಬ ಒಳ್ಳೆ ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರಿಗೆ ಏಳು ಬಾರಿ ಶಾಸಕರಾದರೆ ಯಾವ ದುರಾಡಳಿತನು ಇಲ್ಲ ಇಂತಹ ಶಾಸಕರಿಗೆ ಸಚಿವ ಸ್ಥಾನ ಏಕೆ ಕೊಡಲಿಲ್ಲವೆಂಬುವುದು ಕಾರಣ ತಿಳಿದಂತಾಗಿದೆ ಧರ್ಮವು ಮತ್ತು ಕರ್ಮವೂ ಏನು ತಿಳಿದಂತಾಗಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಜನ ಮತದಾರರು ಅಂದು ಕೊಳ್ಳುತ್ತಾರೆಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಿಳೆ. ಮೊಳಕಾಲ್ಮುರು