ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳು ಪಾಲನೆಯಾಗಬೇಕು — ಶಾಸಕ ವಿಜಯಾನಂದ ಕಾಶಪ್ಪನವರ.
ಹುನಗುಂದ ಆಗಷ್ಟ.15

ಭಾರತದ ಮಹಾತ್ಮರು,ದಿಗ್ಗಜರು,ಯೋಧರ ತ್ಯಾಗ ಬಲಿದಾನದ ಪ್ರತಿಫಲದಿಂದ ಶತಶತಮಾನಗಳಿಂದ ನಮ್ಮ ದೇಶವನ್ನು ಆಳ್ವಿಕೆ ಮಾಡಿ ಈ ದೇಶದ ಸಂಪತ್ತನ್ನು ಲೋಟಿ ಮಾಡಿದ ಬ್ರಟಿಷ್‌ರನ್ನು ತೊಲಗಿಸಿ ಸ್ವಾತಂತ್ರ್ಯ ಭಾರತವನ್ನಾಗಿ ನಿರ್ಮಾಣ ಮಾಡಿದ ಸಂಭ್ರಮದ ದಿನವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಮಂಗಳವಾರ ಪಟ್ಟಣದ ಟಿಸಿಎಚ್ ಕಾಲೇಜ ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 77 ನೆಯ ಸ್ವಾತಂತ್ರೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತ್ಮಾತರಾದ ಮಹಾತ್ಮರನ್ನು ಸ್ಮರಿಸುವ ಪುಣ್ಯ ದಿನ.ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಸುದಿನ.ಸ್ವಾತಂತ್ರ್ಯದ ಜೊತೆಗೆ ಶಿಸ್ತು ಮತ್ತು ಬದ್ದತೆಯನ್ನು ಕಾಯ್ದುಕೊಳ್ಳಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ದೇಶದ ಪವಿತ್ರ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರ ನಿರ್ಮಾಣವಾಗಿದೆ.ಭಾರತ ಅನೇಕ ಧರ್ಮ,ಜಾತಿ,ಮತ,ಪಂಥ ಹಾಗೂ ವಿವಿಧ ಸಂಸ್ಕೃತಿ,ಸಂಪ್ರದಾಯಗಳಿಂದ ಕೂಡಿದ ವೈವಿಧ್ಯತೆಯಲ್ಲಿ ಐಕ್ಯತೆ ಮತ್ತು ಭಾವೈಕ್ಯತೆಯುಳ್ಳ ದೇಶವಾಗಿದೆ.ಜಾತಿ ಆಧಾರದ ಮೇಲೆ ಭಾರತ ನಿರ್ಮಾಣವಾಗಿಲ್ಲ ಜಾತ್ಯಾತೀತಯ ತತ್ವದಡಿಯಲ್ಲಿ ನಿರ್ಮಾಣವಾಗಿದೆ.ನಮ್ಮ ಸರ್ಕಾರ ನಾಡಿನ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.ತಹಶೀಲ್ದಾರ ನಿಂಗಪ್ಪ ಬಿರಾದಾರ ಧ್ವಜಾರೋಣವನ್ನು ನೆರವೇರಿಸಿ ಮಾತನಾಡಿ 1857 ರ ಸಿಪಾಯಿ ಧಂಗೆಯಿಂದ ಭಾರತ ಸ್ವಾತಂತ್ರ್ಯದ ಕಿಚ್ಚು ಜೋರಾಗಿ ದತ್ತು ಮಕ್ಕಳಿಗೆ ಇತಿಹಾಸದ ಹಕ್ಕಿಲ್ಲ ಎನ್ನುವ ಬ್ರಿಟಿಷ್‌ರ ಕಾಯ್ದೆ ಇಡೀ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಮಾಡಿತು.

ನಂತರ ಅನೇಕ ಚಳುವಳಿಗಳು ಮತ್ತು ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ.ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಕೊಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ನೀವೆಲ್ಲ ನಡೆದುಕೊಳ್ಳುತ್ತಿದ್ದೇವೋ ಅದೆಲ್ಲ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದರು.ಈ ಸಂದರ್ಭದಲ್ಲಿ ಪಿಎಸ್‌ಐ ಚನ್ನಯ್ಯ ದೇವೂರ ನೇತೃತ್ವದ ಪೊಲೀಸ ಪಡೆ ಮತ್ತು ವಿವಿಧ ಶಾಲಾ ಕಾಲೇಜುಗಳ ಎನ್‌ಸಿಸಿ ಘಟಕ ಹಾಗೂ ಸ್ಕೌಡ್ಸ ಮತ್ತು ಗೈಡ್ಸ್ ಪಡೆಯಿಂದ ಪಥಸಂಚಲನ ನಡೆಯಿತು.ನಂತರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ತಾಲೂಕಿನ ಕೀರ್ತಿಯನ್ನು ತಂದ ವಿದ್ಯಾರ್ಥಿಗಳಿಗೆ,ಹಿರಿಯ ನಾಗರಿಕರಿಗೆ,ದೇಶ ಸೇವೆಯನ್ನು ಮಾಡಿ ನಿವೃತ್ತಿ ಹೊಂದಿದ ಯೋಧರಿಗೆ,ಪತ್ರಕರ್ತರಿಗೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ವಿವಿಧ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಸಂಸ್ಕೃತಿಕ ನೃತ್ಯಗಳು ಜರುಗಿದವು.ವೇದಿಕೆಯಲ್ಲಿ ಪುರಸಭೆಯ ಉಪಾಧ್ಯಕ್ಷೆ ಶಾಂತಾ ಮೇಲಿನಮನಿ,ಸದಸ್ಯರಾದ ಶರಣು ಬೆಲ್ಲದ,ಮೈನು ಧನ್ನೂರ,ಬಸವರಾಜ ಗೊನ್ನಾಗರ,ಭಾಗ್ಯಶ್ರೀ ರೇವಡಿ,ರಾಜಮ್ಮ ಬದಾಮಿ,ಮುಖಂಡರಾದ ಮಹಾಂತೇಶ ಅವಾರಿ,ತಾ.ಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,ಯಮನಪ್ಪ ಬೆಣ್ಣಿ,ನೀಲಪ್ಪ ತಪೇಲಿ,ಮುತ್ತಣ್ಣ ಕಲಗೋಡಿ,ವಿಜಯಮಹಾಂತೇಶ ಗದ್ದನಕೇರಿ,ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಸೇರಿದಂತೆ ಅನೇಕರು ಇದ್ದರು.ಬಿಇಓ ವೆಂಕಟೇಶ ಕೊಂಕಲ್ ಸ್ವಾಗತಿಸಿ,ಆನಂದ ಗದ್ದನಕೇರಿ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ