ಗಾಂಧಿ ಸ್ಮೃತಿ ಹಾಗೂ ನವ ಜೀವನ ಸದಸ್ಯರ ಅಭಿನಂದನಾ ಕಾರ್ಯಕ್ರಮ.
ಹೊಸಪೇಟೆ ಅ.06

ನಗರದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1&2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಶಿವಪ್ಪ ಕಾವಲಿ, ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರು ಕೂಡಿ ಕೊಂಡು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ಈ ಭೂಮಿಯ ಮೇಲೆ ಪ್ರತಿಯೊಂದು ಜೀವಿಯು ಕೂಡ ತಾಯಿ ಗರ್ಭದಿಂದ ಜನಿಸಿ ಬರುತ್ತದೆ. ಬಂದಂತಹ ಆ ಮಗುವಿಗೆ ಒಳ್ಳೆಯ ಸಂಸ್ಕಾರ, ಸಚ್ಚಾರಿತ್ರ್ಯ, ಒಳ್ಳೆಯ ನಡೆ ನುಡಿಗಳು ಹಾಗೂ ನೀತಿ ಪಾಠಗಳನ್ನು ಹೇಳಿ ಕೊಟ್ಟರೆ ಮುಂದೆ ಆ ಮಗು ಸಮಾಜಕ್ಕೆ ಒಳ್ಳೆಯ ಕಲ್ಪವೃಕ್ಷ ಆಗಬಹುದು ಎಂದು ತಿಳಿಸಿದರು. ಧರ್ಮಸ್ಥಳ ಸಂಸ್ಥೆಯು ಕೇವಲ ಸಾಲ ಕೊಡಿಸುವ ಸಂಸ್ಥೆಯಲ್ಲ ಬದಲಾಗಿ ಸಮಾಜಕ್ಕೆ ಅನಿವಾರ್ಯವಾದ ನೂರಾರು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಂತಹ ಶ್ರೇಷ್ಠ ಸಂಸ್ಥೆಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಪರಶುರಾಮ್ ಅವರು ಮಾತನಾಡಿ ಜಿಲ್ಲಾ ಜನಜಾಗೃತಿ ವೇದಿಕೆಯು ರಾಜ್ಯಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ನಾವು ಕೂಡ ಆ ಕಾರ್ಯಕ್ರಮಗಳ ಭಾಗವಾಗಿದ್ದು ನಮ್ಮ ಪುಣ್ಯ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಶಿವಪ್ಪ ಕಾವಲಿ ಅವರು ಮಾತನಾಡಿ ಪರಮ ಪೂಜ್ಯ ವೀರೇಂದ್ರ ಹೆಗಡೆಯವರ ದೂರ ದೃಷ್ಟಿಯಿಂದ ನಾವೆಲ್ಲರೂ ಇವತ್ತು ಸ್ವಯಂ ಪ್ರೇರಿತರಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಿದಾಗ ಇನ್ನಷ್ಟು ಬಲ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿಗಳಾದ ಶ್ರೀ ಪ್ರಕಾಶ್ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಯು ವೆಂಕಟೇಶ್ ಶ್ರೀ ಹಿರಿಯಣ್ಣ, ಯೋಜನಾಧಿಕಾರಿಗಳಾದ ಮಾರುತಿ ಎಸ್ ಗೌಡ, ಶ್ರೀ ರಾಘವೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಈರಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶ್ರೀ ಮಾರುತಿ ಎಸ್ ಗೌಡ ಅವರು ನಿರೂಪಣೆ ಮಾಡಿದರು. ಇನ್ನೋರ್ವ ಯೋಜನಾಧಿಕಾರಿಗಳಾದ ಶ್ರೀ ರಾಘವೇಂದ್ರ ಅವರು ಸ್ವಾಗತಿಸಿದರು ಕೃಷಿ ಅಧಿಕಾರಿ ಶ್ರೀ ಚನ್ನಪ್ಪ ವಂದಿಸಿದರು ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಶ್ರೀಮತಿ ಭಾಗ್ಯ,ವಿನೂತ, ಶ್ರೀ ಶರಣಬಸವ,ಮಂಜುನಾಥ, ಮಾರುತಿ ಹಾಗೂ ಸೇವಾ ಪ್ರತಿ ನಿಧಿಗಳು ಉಪಸ್ಥಿತರಿದ್ದರು.ವಿಶೇಷತೆ ನಮ್ಮ ಜೀವನ ಸದಸ್ಯರನ್ನು ಅಭಿನಂದಿಸಲಾಯಿತು ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ವಿಕಲ ಚೇತನರಿಗೆ ಸಲಕರಣೆ ವಿತರಿಸಲಾಯಿತು ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶದ ಪ್ರತಿಯನ್ನು ಹಸ್ತಾಂತರಿ ಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ