05 ರಂದು ಹರೀಶ್.ಹೆಚ್ ಇವರನ್ನು ತಾಲೂಕ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆ.
ಕೊಟ್ಟೂರು ಅ.05

ಜಿ. ಮಲ್ಲಿಕಾರ್ಜುನಗೌಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗೂ ಬಿ ದೊಡ್ಡ ಬಸಪ್ಪರೆಡ್ಡಿ ಮಾಜಿ ಗ್ರಾಮ ಆಡಳಿತ ಅಧಿಕಾರಿಗಳ ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ ಇಂದು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಸಮಕ್ಷಮದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಎಲ್ಲರ ಒಮ್ಮತದ ಅಭಿಪ್ರಾಯದಿಂದ ಗ್ರಾಮ ಆಡಳಿತ ಅಧಿಕಾರಿಯಾದ ಹರೀಶ್ ಹೆಚ್. ಇವರನ್ನು ಕೊಟ್ಟೂರು ತಾಲೂಕ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಅನ್ನದಾನೇಶ ಬಿ ಪತ್ತಾರ್, ಗೌರವಾಧ್ಯಕ್ಷರು. ಹನುಮಂತ, ಪ್ರಧಾನ ಕಾರ್ಯದರ್ಶಿ. ಹಾಲಸ್ವಾಮಿ ಎಸ್.ಎಂ, -ಖಜಾಂಚಿ. ರೇಖಾ ಎಸ್, ಉಪಾಧ್ಯಕ್ಷರು. ಎಸ್ ಎಂ ಗುರು ಬಸವರಾಜ, ಜಿಲ್ಲಾ ಪರಿಷತ್ ಸದಸ್ಯರು. ನವೀನ, ಸಂಘಟನಾ ಕಾರ್ಯದರ್ಶಿ. ಮಂಜುನಾಥ, ಜಂಟಿ ಕಾರ್ಯದರ್ಶಿ. ಶಿವಕುಮಾರ್ ಡಿ, ಆಂತರಿಕ ಲೆಕ್ಕ ಪರಿಶೋಧಕರು. ಇವರನ್ನು ಆಯ್ಕೆ ಮಾಡಲಾಯಿತು.ಈ ಸಮಯದಲ್ಲಿ ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಇವರು ನೌಕರರು ಸಂಘಟಿತರಾದರೆ ಮಾತ್ರ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಹಾಗೂ ಬಾಹ್ಯವಾಗಿ ಯಾವುದೇ ಶಕ್ತಿಗಳು ಎದುರಾದರೆ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆಯಾಗಿದ್ದು, ಸಂಘಟಿತರಾಗಲು ಸಂಘದ ಅವಶ್ಯಕತೆ ಇದೆ. ಕೊಟ್ಟೂರಿನಲ್ಲಿ ಕಂದಾಯ ಇಲಾಖೆ ಪದಾಧಿಕಾರಿಗಳು ಇಲ್ಲದೇ ಇರುವುದರಿಂದ ಈ ದಿನ ಆ ಕೊರತೆಯನ್ನು ಪೂರ್ಣ ಗೊಳಿಸಲಾಗಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭವನ್ನು ಕೋರುತ್ತಾ, ಮುಂದಿನ ವಾರದಿಂದ ನಡೆಯುವ ಸರ್ಕಾರಿ ನೌರರ ಸಂಘದ ಚುನಾವಣೆಗೂ ಸಹಾ ಇದೇ ರೀತಿ ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಇಲಾಖೆಯ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸ ಬೇಕೆಂದು ಕಿವಿಮಾತು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು