ಶ್ರೀ ಗೋವಿಂದಪ್ಪ ನಿವೃತ್ತಿ ಶಿಕ್ಷಕರಿಗೆ ಬೀಳ್ಕೊಡುಗೆ.
ಹೂಡೇಂ ಡಿಸೆಂಬರ್.20

ಕಾನಾ ಹೊಸಹಳ್ಳಿ ಸಮೀಪದ ಹೂಡೇಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಶ್ರೀ ಗೋವಿಂದಪ್ಪ ಅವರನ್ನು ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಶಿಕ್ಷಕರಾಗಿ 1988ರಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ್ದು ಇಂದು ಕರ್ತವ್ಯದಿಂದ ನಿವೃತ್ತಿ ಆಗಿರುತ್ತಾರೆ. 36 ವರ್ಷ ಸೇವೆ ಸಲ್ಲಿಸಿದರು. ಶ್ರೀ ಗೋವಿಂದಪ್ಪ ಅವರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯ ಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಮುಖ್ಯ ಗುರುಗಳು ನರಸಿಂಹ ರೆಡ್ಡಿ, ಕಂಬಳರಂಗ ಪ್ರೌಢಶಾಲೆ ಮುಖ್ಯ ಗುರುಗಳು ಅಜ್ಜಪ್ಪ, ಹುರುಳಿಹಾಳ್ ಹೊನ್ನಾಂಬಿಕಾ ಪ್ರೌಢಶಾಲೆಯ ಮುಖ್ಯ ಗುರುಗಳು ಕರಿಬಸಪ್ಪ, ಶಿಕ್ಷಕರಾದ ಮಚ್ಚೇಂದ್ರಪ್ಪ, ಅನ್ನಪೂರ್ಣಮ್ಮ, ಮಂಜುಳಾ, ಶಾಂತಕುಮಾರಿ, ನಿವೃತ್ತಿ ಶಿಕ್ಷಕರಾದ ಕಾಮಯ್ಯ, ನಾಗರಾಜ್, ಜಂಬಣ್ಣ, ಗ್ರಾ.ಪಂ ಸದಸ್ಯರಾದ ಅಜ್ಜಣ್ಣ, ಎಲ್ಲಪ್ಪ, ಊರಿನ ಮುಖಂಡರಾದ ಜಿ ಬಸಯ್ಯ, ಪಾಪಣ್ಣ ಬಿ ಎಸ್, ಕೆ ರಾಜಶೇಖರ್, ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ನಿವೃತ್ತಿ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ