ನಾದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟಕ್ಕೆ ಮಸಾಲಾ ರೈಸ್, ಜಾಮೂನ್,ಪಾಪಡ್ ವಿತರಣೆ.
ನಾದ ಬಿ.ಕೆ ಡಿಸೆಂಬರ್.20

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಸೋಮಯ್ಯ ಮಠಪತಿ ಹಾಗೂ ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಚ್.ಜೆ.ಹಿಳ್ಳಿಹಾಗೂ ಸಿಬ್ಬಂದಿಯವರ ,ಸಹಭಾಗಿತ್ವದಲ್ಲಿ ಇಂದು ಮಧ್ಯಾಹ್ನ ಅವಧಿಯ ಊಟಕ್ಕೆ ಸವಿ-ರುಚಿಯಾದ ಉತ್ತಮ ಗುಣಮಟ್ಟದ ಆಹಾರ ಶಾಲಾ ಮಕ್ಕಳಿಗೆ ಸಾಲಾಗಿ ಕೂಡಿಸಿ, ಮಸಾಲಾ ರೈಸ್, ಜಾಮೂನ್, ಪಾಪಡ್,ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಖುಷಿ -ಖುಷಿಯಾಗಿ ಊಟ ಮಾಡಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ