ಎನ್.ಪಿ.ಎಸ್ ನೌಕರ ಸಂಘದ ಚಿಂತನ ಮಂಥನ ಸಭೆ.
ಇಲಕಲ್ಲ ಜನೇವರಿ.21

ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಹಕ್ಕೊತ್ತಾಯ ಕಾರ್ಯಕ್ರಮವು ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಸರ್ವ ಇಲಾಖೆಗಳ ನೌಕರರ ಸಮ್ಮುಖದಲ್ಲಿ ಚಿಂತನ ಮಂಥನ ಸಭೆಯು ಜರುಗಿತು.ರಾಷ್ಟಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷರಾದ ಸಂಗಮೇಶ ಪಾಟೀಲ ಚಾಲನೆ ನೀಡಿದರು.

ತೊಲಗಲಿ ತೊಲಗಲಿ ಎನ್.ಪಿ.ಎಸ್ ತೊಲಗಲಿ ಹಾಗೂ ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಘೋಷಣೆಗಳೊಂದಿಗೆ ನೌಕರರು ಮಠದಲ್ಲಿ ಸೇರಿ ಚಿಂತನ ಮಂಥನ ಸಭೆಯಲ್ಲಿ ಎಲ್ಲಾ ನೌಕರರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡು ಹಳೆ ಪಿಂಚಣಿ ಯೋಜನೆ (ಒ.ಪಿ.ಎಸ್) ಜಾರಿಗೆ ತರಲು ಹಕ್ಕೊತ್ತಾಯ ಮಾಡಿದರು.ಈ ಒಂದು ಸಭೆಯಲ್ಲಿ ಅವಳಿ ತಾಲೂಕಿನ ಸರ್ವ ಇಲಾಖೆ ನೌಕರರು ಹಾಗೂ ಸರ್ವ ಸಂಘದ ಪದಾಧಿಕಾರಿಗಳು ಎನ್.ಪಿ.ಎಸ್ ತೊಲಗಿಸುವ ನಿಟ್ಟಿನಲ್ಲಿ ಸಹಕಾರ ಹಾಗೂ ಬೆಂಬಲವನ್ನು ನೀಡಿದರು.

ಇದೆ ಸಂದರ್ಭದಲ್ಲಿ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷರಾದ ಸಂಗಮೇಶ ಪಾಟೀಲ ಮಾತನಾಡಿ ಈಗಾಗಲೆ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಓ.ಪಿ.ಎಸ್ ಜಾರಿಯಾಗಲು ಸರ್ಕಾರದ ಹಂತದಲ್ಲಿದ್ದು ಶೀಘ್ರದಲ್ಲಿ ಓ.ಪಿ.ಎಸ್ ಯನ್ನು ಪಡೆಯುತ್ತೇವೆ ಎಂದು ಸಂತಸದ ಮಾತುಗಳನ್ನು ವ್ಯಕ್ತಪಡಿಸಿದರು. ಎನ್.ಪಿ.ಎಸ್ ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು, ಅವಳಿ ತಾಲೂಕಿನ ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಮಸ್ತ ನೌಕರ ಬಾಂಧವರು, ನಿವೃತ್ತ ನೌಕರ ಬಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್