ಅಂತರ್ ಏಕಲವ್ಯ ಕ್ರಾಸ್ ಕಂಟ್ರಿ ಪಂದ್ಯಾವಳಿ – ಕ್ರೀಡೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ.
ಹುನಗುಂದ ಡಿಸೆಂಬರ್.20

ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರ ಕಾಲೇಜು ಏಕಲವ್ಯ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ (ಕ್ರಾಸ್ ಕಂಟ್ರಿ) ಪಂದ್ಯಾವಳಿ ಆಯ್ಕೆ ಪ್ರಕ್ರಿಯೆ ಸಮಾರೋಪ ಸಮಾರಂಭ ಹಾಗೂ ಹೆಚ್ಚುವರಿ ಬೋಧನಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಬರುವ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ.ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ನಮ್ಮಿಂದ ಆಗೋದಿಲ್ಲ ಎನ್ನುವ ಖಿನ್ನತೆಯ ಮನೋಭಾವನೆ ಬೇಡ ನಾನು ಭಾಗವಹಿಸುತ್ತೇನೆ ಗೆದ್ದೇ ಗೆಲ್ಲುತ್ತೇನೆ ಎನ್ನುವ ಛಲ,ಆತ್ಮ ಸ್ಥೆರ್ಯ,ವಿಶ್ವಾಸವನ್ನು ಹೊಂದಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ.ಸರ್ಕಾರಿ ಕಾಲೇಜುಗಳು ಯಾವದೇ ಖಾಸಗಿ ಕಾಲೇಜುಗಳಿಗಿಂತ ಕಡಿಮೆಯಿಲ್ಲ.ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಕ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳ ಸದುಪಯೋಗ ಪಡಿದುಕೊಳ್ಳಬೇಕು ಎಂದರು.ಬಾಗಲಕೋಟಿ ವಿಶ್ವವಿದ್ಯಾಲಯದ ಕ್ರೀಡಾ ಸಂಯೋಜಕ ಕೆ.ಎಂ.ಶಿರಹಟ್ಟಿ ಮಾತನಾಡಿ ಅಂತರ ಕಾಲೇಜು ಏಕವಲಯ ಗುಡ್ಡಗಾಡು ಓಟ ಸ್ಪರ್ಧೆ ಹುನಗುಂದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದು ಯಶಸ್ವಿಯಾಗಿದೆ ಎಂದರು.ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿದರು.ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಏಕಲವ್ಯ ಮಹಿಳಾ ಮತ್ತು ಪುರಷರ ಗುಡ್ಡುಗಾಡು ಓಟದ ಫಲಿತಾಂಶ-ನಕುಶಾ ಮಂಗಳಕರ್ (ಜಿ.ಎಸ್.ಎಸ್.ಕಾಲೇಜು ಬೆಳಗಾವಿ),ಮಲ್ಲೇಶ್ವರಿ ರಾಥೋಡ (ಎಸ್.ಪಿ.ಎಂ. ಬಿ.ಪಿ.ಈಡಿ ಕಾಲೇಜು ರಾಯಬಾಗ),ಶೃತಿ ಪಾಟೀಲ (ಬಿ.ಕೆ. ಕಾಲೇಜು ಬೆಳಗಾವಿ),ಮೀನಾಕ್ಷಿ ಕದಂ (ಜಿ.ಎಫ್.ಜಿ. ಸಿ. ಕೊಕಟನೂರ),ರೇಣುಕಾ ರೇವಣ್ಣವರ (ಎಸ್.ಎಸ್.ಎನ್. ಹುಕ್ಕೇರಿ),ಭಾಗ್ಯಶ್ರೀ ಹವಲ್ದಾರ್ (ಬಿ.ಎಲ್.ಡಿ ಬೆಳಗಾವಿ),ವಿಜಯ ಸಾವರ್ತಕರ್(ಲಿಂಗರಾಜ ಕಾಲೇಜು ಬೆಳಗಾವಿ),ಸಾಹಿಲ್ ಕೂಡ್ಲೆ(ಲಿಂಗರಾಜ ಕಾಲೇಜು ಬೆಳಗಾವಿ),ಚೇತನ್ ಕೋಲ್ಕಾರ್ (ಮರಾಠಾ ಮಂಡಲ ಖಾನಾಪೂರ),ಅಜೀತ್ ಪಾಟೀಲ (ಎಸ್.ಪಿ.ಎಂ ಹಾರೋಗೇರ),ವಿನೋದ ಕಾರಿ(ಎಸ್.ಎಸ್.ಎನ್ ಹುಕ್ಕೇರಿ),ಸುನೀಲ ದಂಡಾಯಿ(ಲಿAಗರಾಜ ಕಾಲೇಜು ಬೆಳಗಾವಿ) ಆಯ್ಕೆ ಮಾಡಲಾಯಿತು.ಇನ್ನೂ ಬಾಗಲಕೋಟ ವಿಶ್ವವಿದ್ಯಾಲಯದ ಏಕಲವ್ಯ ಪುರಷರ ಮತ್ತು ಮಹಿಳಾ ಗುಡ್ಡುಗಾಡು ಓಟದ ಫಲಿತಾಂಶ-ಹುಲ್ಲಪ್ಪ ತಮ್ಮಣ್ಣವರ(ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ),ಪ್ರಶಾಂತ(ಬಿ.ವಿ.ವಿ. ಎಸ್.ಬಿ.ಪಿ.ಈಡಿ ಬಾಗಲಕೋಟ),ಮುಕುಂದ ತೇಲಿ(ಬಿ.ಎಲ್.ಡಿ. ಇ.ಎಸ್ ಜಮಖಂಡಿ), ಬಸವರಾಜ ಕಣ್ಣೋಳ್ಳಿ (ಎಸ್.ಆರ್.ಕಂಠಿ ಕಾಲೇಜು ಮುಧೋಳ),ಸಿದ್ಧಾರ್ಥ ಸಂಗಣ್ಣವರ (ಸರ್ಕಾರಿ ಪ್ರಥಮ ದರ್ಜೆ ಹುನ್ನೂರು),ಹನಮಂತ ಯಬಾನಿ (ಬಿ.ಎಲ್.ಡಿ.ಇ.ಎಸ್ ಜಮಖಂಡಿ,ಪೂಜಾ ಉಳ್ಳಾಗಡ್ಡಿ (ಎಸ್.ಟಿ.ಸಿ. ಬನಹಟ್ಟಿ),ನಾಗರತ್ನ ಹೂವಿನಬಾವಿ (ಎಸ್.ವಿ.ಎಂ. ಕಾಲೇಜು ಇಳಕಲ್),ಸಾವಿತ್ರಿ ಆವಿನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ),ಸುಶ್ಮೀತಾ ಕವಡಿಮಟ್ಟಿ (ಎಸ್.ವಿ.ಎಂ. ಕಾಲೇಜು ಇಳಕಲ್),ಕಾವ್ಯ ಮಂಕಣ (ಭಂಡಾರಿ ಪದವಿ ಕಾಲೇಜು ಗುಳೇದಗುಡ್ಡ),ಕೀರ್ತನಾ ಗೊಂದಿ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆರೂರು) ಆಯ್ಕೆ ಮಾಡಿ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಪ್ಪ ಬಿರಾದಾರ,ತಾ.ಪಂ ಇಓ ಮುರಳಿಧರ ದೇಶಪಾಂಡೆ,ಪಿಎಸ್‌ಐ ಚನ್ನಯ್ಯ ದೇವೂರ,ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಎಸ್.ಜಿ.ಎಮ್ಮಿ,ಸಿ.ಜಿ.ಹವಲ್ದಾರ,ಬಿ.ಎಂ.ಲೈನದ,ರಾಜಶೇಖರ ಬ್ಯಾಳಿ,ದೇವು ಡಂಬಳ,ಸಾವಿತ್ರಿ ತಪೇಲಿ,ಎ.ಜಿ.ಹುಚನೂರ,ಭೀಮಪ್ಪ ಕೊಡಗಾನೂರ,ರಾಣ ತೋಪಲಕಟ್ಟಿ,ಹನಮಂತ ನಡುವಿನಮನಿ,ಬಸವರಾಜ ಗೊನ್ನಾಗರ,ಪ್ಯಾರಾ ಓಲಂಪಿಕ್ ಅಥ್ಲೀಟ್ ಭೀಮಪ್ಪ ಪೂಜಾರ,ದೈಹಿಕ ನಿರ್ದೇಶಕ ಬಿ.ವಾಯ್ ಆಲೂರ ಸೇರಿದಂತೆ ಅನೇಕರು ಇದ್ದರು.ಪ್ರಾಚಾರ್ಯ ಡಾ.ಸುರೇಶ ಎಚ್.ಎನ್ ಸ್ವಾಗತಿಸಿದರು.ಮುರ್ತುಜಾ ಒಂಟಿ ನಿರೂಪಿಸಿದರು,
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ