ಕೂಡ್ಲಿಗಿ:ಮತ ಯಂತ್ರಗಳ ಮಾಹಿತಿ ಹಾಗೂ ಚುನಾವಣಾ ಜಾಗೃತಿ ಅಭಿಯಾನ.
ಕೂಡ್ಲಿಗಿ ಡಿಸೆಂಬರ್.27

ಡಿ.27 ರಂದು ಮತಗಟ್ಟೆ ಸಂಖ್ಯೆ 40 ಮತ್ತು 41ರ, 96 ಕೂಡ್ಲಿಗಿ ವಿಧಾನ ಸಭೆಯ ಕ್ಷೇತ್ರದ ಸೆಕ್ಟರ್ 5 ರ ವ್ಯಾಪ್ತಿಯಲ್ಲಿ. 2024.ರ ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ, ಮತದಾರರು ಹಾಗೂ ಸಾರ್ವಜನಿಕರಿಗೆ. ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಮಾಹಿತಿ, ಮತ್ತು (EVM) ಮತದಾನದ ಬಗ್ಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸೆಕ್ಟರ್ ಅಧಿಕಾರಿ ಗೊಲ್ಲರ ರಾಮಚಂದ್ರಪ್ಪ, ಮತಗಟ್ಟೆ ಅಧಿಕಾರಿ ಶ್ರೀಮತಿ ವಿ. ಗೀತಾ. ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಅಧಿಕಾರಿ, ಶ್ರೀಮತಿ ಶಶಿಕಲಾ ಮತ್ತು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮಹಿಳಾ ಮತದಾರರು ಸಾರ್ವಜನಿಕರು, ಹಾಗೂ ಮತಗಟ್ಟೆ ವ್ಯಾಪ್ತಿಯ ಅನೇಕ ಮತದಾರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ