ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳು ಯುವ ಜನಾಂಗಕ್ಕೆ ಸ್ಪೂರ್ತಿ – ಎಸ್.ಕೆ.ಮಠ.
ಹುನಗುಂದ ಜನೇವರಿ.16

ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳು ಯುವ ಜನಾಂಗಕ್ಕೆ ಸ್ಪೂರ್ತಿದಾಯಕವಾಗಿವೆ ಎಂದು ಪ್ರಾಚಾರ್ಯ ಪ್ರೊ.ಎಸ್.ಕೆ.ಮಠ ಹೇಳಿದರು.ಪಟ್ಟಣದ ವಿ.ಎಂ.ಕೆ.ಎಸ್.ಆರ್.ವಸ್ತೃದ ಕಲಾ,ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾ ವಿದ್ಯಾಲಯದ ಆಯ್‌ಕ್ಯೂಎಎಸ್ ಮತ್ತು ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಷ್ಟೀಯ ಯುವ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ವಿದೇಶಿಯದಲ್ಲಿ ಬಿತ್ತರಿಸಿದ ಮಹಾನ್ ಸನ್ಯಾಸಿ.ಯುವಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ,ಅವರ ವ್ಯಕ್ತಿತ್ವ ಎಲ್ಲಾ ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಯುವಶಕ್ತಿಗಳಿಗೆ ಶಕ್ತಿ ಸಂಜೀವಿನಿಯನ್ನು ಬೋಧಿಸಿದ್ದಾರೆ ಎಂದರು.ಡಾ.ಎಸ್.ಆರ್.ಗೋಲಗೊಂಡ ಮುಖ್ಯ ಅತಿಥಗಳಾಗಿ ಮಾತನಾಡಿ ವಿದೇಶಿ ನೆಲದಲ್ಲಿ ನಿಂತು ಭಾರತವು ತತ್ವಜ್ಞಾನಿಗಳ ದೇಶ ಎಂದು ಹೇಳಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.ಭಾರತದ ಪರಂಪರೆ ವಿಶ್ವಕ್ಕೆ ಪರಿಚಯಿಸಿ ಅದನ್ನು ಅನುಕರಿಸುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು. ಪೂರ್ವದ ವಿಶಾಲ ಆಧ್ಯಾತ್ಮೀಕ ಚಿಂತನೆ ಮತ್ತು ಪಶ್ಚಿಮದ ಸಂಕಲ್ಪ ಶಕ್ತಿ ಸಂಕೇತವಾಗಿ ನಿಂತ ಮೇರು ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಆದರ್ಶಪ್ರಾಯರು.ಏಳಿ,ಎದ್ದೇಳಿ ಗುರಿ ಮುಟ್ಟುವರಿಗೂ ನಿಲ್ಲದಿರಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮುಖ್ಯ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಸಂಘ ಹುನಗುಂದ ಇದರ ಅಧ್ಯಕ್ಷರಾದ ಪ್ರೊ.ಎನ್.ವಿ.ಪಾಟೀಲ ಇವರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ ಬುಕ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಚಿತ್ರ ಪ್ರದರ್ಶಿಸಿದರು.ಕು.ಪಾರ್ವತಿ ಬೇವನೂರಮಠ ಹಾಗೂ ಸಂಗಡಿಗರು ವಚನ ಗಾಯನ ಮಾಡಿದರು,ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ.ಬಿ.ಎ.ಕಂಠಿ ಸ್ವಾಗತಿಸಿದರು,ಕು.ಸುವರ್ಣ ಹೊಸಹಳ್ಳಿ ನಿರೂಪಿಸಿದರು,ಡಾ.ಪರಶುರಾಮ.ಸಿ ವಂದಿಸಿದರು,ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ