ಆಸ್ಕಿಹಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ಲಾಸ್ಟಿಕ್ ಡಬ್ಬಿಗಳಿಂದ – ಪಕ್ಷಿಗಳಿಗೆ ಕಾಳು ಮತ್ತು ನೀರಿನ ಅರವಟ್ಟಿಗೆ.
ಆಸ್ಕಿಹಾಳ ಫೆ.18

ರಾಯಚೂರು ನಗರದ ಆಸ್ಕಿಹಾಳ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಸರಕಾರಿ ಪ್ರೌಢ ಶಾಲೆ ಆಸ್ಕಿಹಾಳ ಯುಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಭೂಮಿಯ ಮೇಲಿನ ನಿರುಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಪಕ್ಷಿಗಳಿಗೆ ನೀರು ಮತ್ತು ಕಾಳು ಇರಿಸುವ “ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮ” ವನ್ನು ಹಮ್ಮಿಕೊಳ್ಳಲಾಯಿತು.ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ವಿಜಯ ಲಕ್ಷ್ಮಿ ಮಾತನಾಡಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ದಾಹವನ್ನು ನೀಗಿಸಲು ಪ್ರತಿಯೊಬ್ಬರೂ ಸಹಕರಿಸ ಬೇಕು ಹಾಗೂ ಪ್ರತಿ ವರ್ಷ ವನಸಿರಿ ತಂಡ ಏಪ್ರಿಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಆಚರಿಸುತ್ತಿ ರುವುದು ತುಂಬಾ ಒಳ್ಳೆಯ ಕಾರ್ಯ ಎಂದು ವನಸಿರಿ ತಂಡದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ ಎಪ್ರೀಲ್ ಗೂ ಮೊದಲೇ ಆಚರಿಸಲಾಗುತ್ತಿದೆ. ಯಾಕಂದರೆ ಬೇಸಿಗೆ ಬಿಸಿಲು ಈಗಿನಿಂದಲೇ ಚುರುಕು ಗೊಳ್ಳುತ್ತಿರುವುದರಿಂದ ಭೂಮಿಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿ ಪ್ರಾಣಿ ಪಕ್ಷಿಗಳಿಗೆ ನೀರಿನ ಹಾಹಾಕಾರ ಉಂಟಾಗಿದೆ ಆದ್ದರಿಂದ ಈವಾಗಿ ನಿಂದಲೇ ಪ್ರಾಣಿ ಪಕ್ಷಿಗಳಿಗೆ ನಿರುಣಿಸುವ ಕಾರ್ಯ ಪ್ರಾರಂಭಿಸಿದ್ದಾರೆ. ಆದರೆ ಅದಕ್ಕೆ ಬೇಕಾದ ಮಣ್ಣಿನ ಮಡಿಕೆಗಳನ್ನು ಇನ್ನೂ ತಯಾರಿಸುತ್ತಿರು ವುದರಿಂದ ಸದ್ಯ ಈ ಭೂಮಿಯ ಮೇಲೆ ನಿರೂಪಯುಕ್ತ ವಸ್ತುಗಳನ್ನು ಬಳಸಿ ಕೊಂಡು ಈ ಪ್ಲಾಸ್ಟಿಕ್ ಡಬ್ಬಿಗಳಿಂದ ಅರವಟ್ಟಿಗೆಗಳನ್ನು ಕಟ್ಟಲಾಗುತ್ತಿದೆ ಮುಂದಿನ ದಿನಗಳಲ್ಲಿ ಮಣ್ಣಿನ ಅರವಟ್ಟಿಗೆ ಕಟ್ಟುವ ಮೂಲಕ ಇದೇ ಕಾರ್ಯಕ್ರಮವನ್ನು ಇನ್ನಷ್ಟು ಪಕ್ಷಿಗಳಿಗೆ ಕಾಳು ನೀರು ಇರಿಸುವ ಕಾರ್ಯಕ್ಕೆ ನಮ್ಮ ಶಾಲೆ ಮುಂದಾಗಲಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ವನಸಿರಿ ಫೌಂಡೇಶನ್ ದೇವದುರ್ಗ ತಾಲೂಕ ಅಧ್ಯಕ್ಷರಾದ ಪ್ರಕಾಶ ಪಾಟೀಲ್ ಶಾವಂತಗೇರಾ ಕಾರ್ಯದರ್ಶಿ ಯಾದ ಸುನಿಲ ಜಾಡಲ್ದಿನ್ನಿ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳು ಮತ್ತು ಭಾಗವಸಿದ್ದರು.