ಅಪಾರ ಪ್ರಮಾಣದ ಬೆಳೆ ಹಾನಿ ಮತ್ತು ಗ್ರಾಮಸ್ಥರ ಮನೆಗಳ ಹಾನಿ ಬಗ್ಗೆ – ತ್ವರಿತ ಕ್ರಮಕ್ಕೆ ರೈತರಿಂದ ಆಗ್ರಹ.
ತಾರಪುರ ಸ.20





ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಬೆಳೆ ಮತ್ತು ಮನೆಗಳು ನೀರಿನಿಂದ ಹಾಳಾಗಿದ್ದು ಮನೆಯೊಳಗೆ ನೀರು ನುಗ್ಗಿರುವ ಕಾರಣ ಎಷ್ಟೋ ಮನೆಗಳು ಕುಸಿದು ಬಿದ್ದಿರುತ್ತವೆ. ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆ ರೈತರಿಗೂ ಹಾಗೂ ಗ್ರಾಮಸ್ಥರಿಗೂ ನೆಮ್ಮದಿಯನ್ನು ಕೆಡಿಸಿದಂತಾಗಿದೆ.

ಇದರಿಂದ ಭೀಮಾ ನದಿ ತೀರದ ಗ್ರಾಮಗಳ ಜನರಿಗೆ ಬಹಳ ತೊಂದರೆ ಯಾಗುತ್ತಿದ್ದು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತಿರು ವುದರಿಂದ ಭೀಮಾ ನದಿಗೆ ಉಜ್ಜನಿ ಡ್ಯಾಮಿನಿಂದ ನೀರು ಬಿಡಬಹುದು ಎಂಬ ಆತಂಕ ಒಂದು ಕಡೆಯಾದರೆ ಸ್ವತಃ ವಾಗಿ ಭಾರೀ ಮಳೆಯಾಗುತ್ತಿರುವ ಭಯ ಇನ್ನೊಂದೆಡೆ. ವರ್ಷ ಇಡೀ ಭೀಮಾ ತೀರದ ಜನತೆ ಭಯದಿಂದ ಬದುಕುವಂತ ಪರಿಸ್ಥಿತಿ ಎದುರಾಗುತ್ತಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸ ಬೇಕೆಂದು ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಚಿದಾನಂದ.ಬಿ ಉಪ್ಪಾರ.ಸಿಂದಗಿ