ಕರುನಾಡಿದು ಚೆಂದ…..

ನನ್ನಯ ಕರುನಾಡಿದು ಅಂದ




ಹೇಳುವೆ ಕೇಳೊ ಕಂದ
ಹೇಳುವೆ ಕೇಳೊ ನೀ ಕನ್ನಡದ ಕಂದ
ಶರಣರಿದ್ದ ನಾಡಿದು
ಅವರು ಬೆಳೆದೊದ ತವರೂರಿದು
ಕಲ್ಪವತರು ನಾಡಿದು
ನನ್ನ ಹೆಮ್ಮೆಯ ಕರುನಾಡಿದು
ಮಲೆನಾಡ ಸೊಬಗಿನ ನಾಡಿದು
ಜೋಗವು ಧುಮುಕುವ ಬೀಡಿದು
ಕವಿಪುಂಗವರ ನಾಡಿದು
ನನ್ನ ಹೃದಯವನ್ನಾವರಿಸಿದ ಬೀಡಿದು
ಸಂಸ್ಕೃತಿಯ ತವರೂರಿದು
ವೈಭವದ ನಾಡಿದು
ಹೊನ್ನಿನ ಗಣಿಯಿದು
ನನ್ನುಸಿರಲಿ ಬೆರೆತ ನಾಡಿದು
ಕರುನಾಡಿದು ಚೆಂದ……
✍🏻 ತ್ರಿವೇಣಿ. ಆರ್. ಹಾಲ್ಕರ್
ಗೊಬ್ಬರವಾಡಿ, ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ ಕಲಬುರ್ಗಿ