ಯಲಗೋಡಕ್ಕೆ ಇಂದಿನಿಂದ ನೂತನ ಬಸ್ ಪ್ರಾರಂಭ.
ಯಲಗೋಡ ಜನೇವರಿ.18

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ದಿಂದ ವಿಜಯಪುರಕ್ಕ ಬೆಳಿಗ್ಗೆ ಏಳು ಘಂಟೆಗೆ ಇಂದಿನಿಂದ ಹೊಸ ಬಸ್ ಪ್ರಾರಂಭವಾಗಿದೆ, ಬಹುತೇಕ ದಿನಗಳಿಂದ ಬೇಡಿಕೆಯನ್ನು ಇಂದು ಪೂರೈಸಿದರು ನಮ್ಮ ಗ್ರಾಮಕ್ಕೆ ಬಸ್ ಸಲುವಾಗಿ ಸತತವಾಗಿ ಪ್ರಯತ್ನವನ್ನು ಮಾಡುತ್ತಿದ್ದೇವೆ ಇನ್ನೂ ಶಹಪೂರ ಟು ವಿಜಯಪುರ ವಾಯಾ ಕರವಿನಾಳ,ಖಾನಾಪೂರ, ವಂದಾಲ ಯಲಗೋಡ ಹಂದಿಗನೂರ,ದೇವರಹಿಪ್ಪರಗಿ ಮಾರ್ಗವಾಗಿ ವಿಜಯಪುರಕ್ಕೆ ಒಂದು ಬಸ್ ಬೇಡಿಕೆ ಇಟ್ಟಿದ್ದೇವೆ, ಇನ್ನೂ ಕೆಲವು ದಿನಗಳಲ್ಲಿ ಪ್ರಾರಂಭವಾಗುತ್ತದೆ, ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಮಶ್ಯಾಕಸಾಬ ಚೌಧರಿ ಹೇಳಿದರು, ಹಾಗೂ ವೇದಮೂರ್ತಿ ಶ್ರೀ ಶ್ರೀ ರಾಜಶೇಖರಾಯ್ಯ ಹಿರೇಮಠ ಇವರಿಂದ ಬಸ್ ಗೆ ಪೂಜೆ ಮಾಡಿದರು,ಹಾಗೂ. ಡ್ರೈವರ್, ಕಂಡಕ್ಟರಗೆ ವಿಶೇಷ ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ರಪೀಕ ಕಣಮೇಶ್ವರ, ಶರಣಪ್ಪ ಚಬನೂರ,ಮಡಿವಾಳಪ್ಪ ಹಿಕ್ಕನಗುತ್ತಿ,ದೇವಪ್ಪ ಮಾದರ ಮಾಂತೇಶ ತಳ್ಳೋಳ್ಳಿ,ಸದಾನಂದ, ಪತ್ತಾರ, ಶಂಕರನಂದ, ಶಾಸ್ತ್ರ, ಸಾಹೇಬ್ ಪಟೇಲ್ ಕುರಿಕಾಯಿ, ರಾಗು ಅನಿವಾರ, ಯವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ ದೇವರ ಹಿಪ್ಪರಗಿ,