75 ನೆಯ ಗಣ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ – ನಿಂಗಪ್ಪ ಬಿರಾದಾರ.
ಹುನಗುಂದ ಜನೇವರಿ.20

ಜ. 26 ರಂದು 75 ನೆಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಪಟ್ಟಣದ ಟಿಸಿಎಚ್ ಕಾಲೇಜು ಮೈದಾನದಲ್ಲಿ ಆಚರಿಸಲು ತಿರ್ಮಾನಿಸಲಾಗಿದ್ದು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಶನಿವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 75 ನೆಯ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಪ್ರತಿಯೊಂದು ಇಲಾಖೆಯಲ್ಲಿ ಜ. 26 ರ ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಬೆಳಗ್ಗೆ 9 ಗಂಟೆಗೆ ತಾಲೂಕಾಡಳಿತದ ವತಿಯಿಂದ ಜರಗುವ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕು.ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಎನ್‌ಸಿಸಿ,ಸ್ಕೌಟ್ ಮತ್ತು ಗೈಡ್ಸ್ ಧ್ವಜ ವಂದನೆಯ ಪಥ ಸಂಚಲನ ನಡೆಲಾಗುವುದು.ವಿವಿಧ ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಇಲಾಖೆಯ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಗುವುದು ಎಂದರು.ಈ ಸಂದರ್ಬದಲ್ಲಿ ಬಿಇಓ ಜಸ್ಮೀನಾ ಕಿಲ್ಲೇದಾರ,ಸಮಾಜ ಕಲ್ಯಾಣ ಅಧಿಕಾರಿ ಎಂ.ಎಚ್.ಕಟ್ಟಿಮನಿ,ತಾ.ಪಂ ಎಡಿ ಮಹಾಂತೇಶ ಕೋಟಿ, ಇಳಕಲ್ಲ ಗ್ರೇಡ್2 ತಹಶೀಲ್ದಾರ ಈಶ್ವರ ಗಡ್ಡಿ,ಇಳಕಲ್ಲ ನಗರ ಠಾಣಿಯ ಪಿಎಸ್‌ಐ ಎಸ್.ಆರ್.ನಾಯಕ,ಅಮೀನಗಡ ಪಿಎಸ್‌ಐ ವೀರಪಾಕ್ಷ ಗೌಡರ, ಶಿರಸ್ತೆದಾರ ಶ್ರವಣಕುಮಾರ ಮುಂಡೆವಾಡಿ,ನಾಗರಾಜ ಹೊಸೂರ,ಶಿಕ್ಷಕ ಎಸ್.ಕೆ.ಕೊನೆಸಾಗರ,ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಸೇರಿದ್ದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ