ಖೋಟಾ ನೋಟು ಖದೀಮರನ್ನ ಅಂಧರ್ ಹಾಕಿದ – ಅಗ್ನಿ ಕೆಂಚರೆಡ್ಡಿ.
ಮಾನ್ವಿ ಜೂ.06

ತಾಲೂಕಲ್ಲಿ ಖೋಟಾ ನೋಟು ಚಲಾವಣೆ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಇತ್ತು. ಆದರೆ ಈ ದೂರಿನ ಮೂಲಕ ಅಗ್ನಿ ಎಂದೇ ಹೆಸರು ವಾಸಿಯಾದ ಮಾನ್ವಿ ಪಿ.ಐ ಕೆಂಚರೆಡ್ಡಿ ಪತ್ತೆ ಹಚ್ಚುವ ಕೆಲಸ ಮಾಡಿದ್ದರಿಂದ 10 ಜನ ಖದೀಮರನ್ನು ಅಂಧರ್ ಹಾಕಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.

ಖೋಟಾ ನೋಟು ಖದೀಮರು ಮಾನ್ವಿ ಪಟ್ಟಣದ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ನ ಜಮಾ ಖಾತೆಯ ಎಟಿಎಂಗೆ ಅಸಲಿ ನೋಟಿನ ಜೊತೆಗೆ 18 ಸಾವಿರ ಖೋಟಾ ನೋಟು ಹಾಕಿದ್ದಾರೆ. ಆದರೆ ಮರು ದಿನ ನಮ್ಮ ಖಾತೆಗೆ ಹಣ ಜಮಾವಣೆಯಾಗಿಲ್ಲ ಎಂದು ಖದೀಮರ ತಿಳಿಸಿದಾಗ ಪರಿಶೀಲಣೆ ಯಿಂದ ಅಸಲಿಯಾಟ ಬಯಲಾಗಿದೆ.
ಅಸಲಿಯಾಟವನ್ನು ಮಾನ್ವಿ ಪಿ.ಐ ಅಗ್ನಿ ಕೆಂಚರೆಡ್ಡಿ ಅವರು ಪತ್ತೆ ಹಚ್ಚುತ್ತ ಸಾಗಿದಾಗ ಮಾನ್ವಿ ಸೇರಿದಂತೆ ನಾನಾ ತಾಲೂಕಿನ 10 ಜನ ಖೋಟಾ ನೋಟು ಖದೀಮರನ್ನು ಅಂಧರ್ ಹಾಕಿದ್ದರಿಂದ ಕೆಂಚರೆಡ್ಡಿ ಅವರನ್ನು ಸಂಘಟನಾಕಾರರು ಹಾಗೂ ಮಾನ್ವಿ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ