6. ಜನ ಸದಸ್ಯ ರಿಂದ ನಡೆದ ಸಾಮಾನ್ಯ ಸಭೆ – ಹಲವು ವಿಷಯಗಳಿಗೆ ಅನುಮೋದನೆ.
ಮರಿಯಮ್ಮನಹಳ್ಳಿ ಡಿ.09

ಪಟ್ಟಣ ಪಂಚಾಯಿತಿಯ ಕಾರ್ಯಾಲಯದ ಸಭಾಂಗಣದಲ್ಲಿ ಆದಿಮನಿ ಹುಸೇನ್ ಭಾಷಾ ಅಧ್ಯಕ್ಷತೆಯಲ್ಲಿ ಎರಡನೇ ಬಾರಿಗೆ ಸಾಮಾನ್ಯ ಸಾಧಾರಣ ಸಭೆ ನಡೆಯಿತು. ಪಟ್ಟಣದ 18 ವಾರ್ಡ್ ನ 18 ಸದಸ್ಯರಲ್ಲಿ ಕೇವಲ ಆರು ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದು. ಸಭೆಯ ನೋಟಿಸಿನ ಪ್ರಕಾರ 10:30ಕ್ಕೆ ಆರಂಭವಾಗ ಬೇಕಿದ್ದ ಸಭೆ 12:30 ಕ್ಕೆ ಆರಂಭವಾಯಿತು. ಸದಸ್ಯರ ಆಗಮನಕ್ಕಾಗಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಮತ್ತು ಸದಸ್ಯರು 2 ಘಂಟೆಗಳು ಕಾಯ ಬೇಕಾಯಿತು. ಆರು ಜನ ಸದಸ್ಯರನ್ನು ಬಿಟ್ಟು ಮಿಕ್ಕವರ್ಯಾರು ಪಂಚಾಯಿತಿ ಕಡೆ ತಲೆ ಹಾಕದರುವುದು ಕಂಡು ಬಂದಿತು. ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚೆಗೆ ತರಲಾಯಿತು.ಚರ್ಚಿಸಿದ ವಿಷಯಗಳು:-ಹಿಂದಿನ ಸಭೆಯಲ್ಲಿ ನಡೆದಿರುವ ನಡವಳಿಗಳನ್ನು ಓದಿ ಪ್ರಾರಂಭಿಸಲಾಯಿತು. ದಿನಾಂಕ 1.9.2024 ರಿಂದ 30.11.2024ರ ವರೆಗೆ ಯೋಜನೆಯ ವಿವರಗಳಿಗೆ ಪ್ರಾರಂಭಿಕ ಶುಲ್ಕ 428,69891, ಜಮಾ 100,83774, 5,29,53665, ಖರ್ಚು 156,89255 ಕೋಟಿ ಒಟ್ಟು ಆಗಿರುವ ಜಮಾ ಖರ್ಚುಗಳನ್ನು ಓದಿ ದೃಡೀಕರಿ ಸಲಾಯಿತು. ದಿನಾಂಕ 7.11.2024 ರಂದು ಕರೆದಿರುವ ಟೆಂಡರ್ ಕಾಮಗಾರಿಗಳನ್ನು ಟೆಂಡರ್ ಅಂತಿಮ ಗೊಳಿಸಿ ಅನುಮೋದನೆ ನೀಡಲಾಯಿತು. ಪಟ್ಟಣದ ಬಸ್ ನಿಲ್ದಾಣ ಹತ್ತಿರ ಮತ್ತು ನಾಡ ಕಚೇರಿ ಹತ್ತಿರ ಎಸ್.ಬಿ.ಎಮ್ -2. 0 ಯೋಜನಾ ಅಡಿಯಲ್ಲಿ ಪ.ಪಂ ವತಿಯಿಂದ ನಿರ್ಮಿಸುತ್ತಿರುವ ಸಾಮೂಹಿಕ ಸುಲಭ ಶೌಚಾಲಯವನ್ನು ಹಸ್ತಾಂತರಿಸುವ ಕುರಿತು ಅನುಮೋದಿಸಲಾಯಿತು. ಪಟ್ಟಣ ಪಂಚಾಯತಿಯ ಆರು ಮಳಿಗೆಗಳಿಗೆ ಮರು ಟೆಂಡರ್ ಕರೆಯಲು ತೀರ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿಗೆ ಕಾನೂನು ಸಲಹೆಗಾರರಾಗಿ ಶ್ರೀ ಅನಿಲ್ ಕುಮಾರ್ ವಕೀಲರು ಇವರನ್ನು ಅಂತಿಮ ಗೊಳಿಸಲಾಯಿತು. ಪ.ಪಂ ಹಿಂಭಾಗದಲ್ಲಿನ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಕ್ಲೀನಿಂಗ್ ಮಷೀನ್ ಅಳವಡಿಸಿ ಕಸವನ್ನು ವಿಲೇವಾರಿ ಮಾಡಲು ಅನುಮೋದಿಸಲಾಯಿತು. ಪಟ್ಟಣದ ಎಲ್ಲಾ ಆಸ್ತಿಗಳಿಗೆ ಜಿ.ಐ.ಎಸ್ ಸರ್ವೆ ಮಾಡಿಸಲು ಪ್ರಸ್ತಾವನೆ ಸಲ್ಲಿಸಲು ಕುರಿತು ತೀರ್ಮಾನಿಸಲಾಯಿತು. 2024 25 ನೇ. ಸಾಲಿನ ಪ.ಪಂ ನಿಧಿಯಲ್ಲಿ ಎಸ್. ಎಫ್.ಸಿ ಶೇ 24.10, ಶೇ 7.25 ಮತ್ತು ಶೇ 5 ರ ಅನುದಾನದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು. ಎಸ್.ಬಿ.ಎಂ 2.0 ಯೋಜನೆ ಅಡಿಯಲ್ಲಿ 51 ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವ ಫಲಾನುಭವಿಗಳನ್ನು ಅಂತಿಮ ಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು. ಪಟ್ಟಣದ 18 ವಾರ್ಡುಗಳಲ್ಲಿ 4 ಮತ್ತು 5 ನೇ. ವಾರ್ಡ್ ಗಳನ್ನು ಬಿಟ್ಟು 16 ವಾರ್ಡುಗಳನ್ನು ಕೊಳಚೆ ಪ್ರದೇಶಕ್ಕೆ ಸೇರಿಸಲು ಅನುಮೋಧಿಸಲಾಯಿತು.ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚೆಗೆ ತಂದ ವಿಷಯಗಳು ಪಟ್ಟಣ ಸರ್ವೇ ನಂ.122/3 ರಲ್ಲಿ 119, 78, ಮತ್ತು 87 ರಲ್ಲಿ ನಿವೇಶನಗಳ ಹಂಚಿಕೆಯಾಗಿರುವ ಕುರಿತು ಪಾರಂ – 3 ವಿತರಿಸಲು ಧಾಖಲೆಗಳ ತೊಂದರೆಯಾಗಿದ್ದು ಪರಿಹಾರಕ್ಕಾಗಿ ಹೆಚ್ಚಿನ ಮಾಹಿತಿ ಕೋರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಕುರಿತು ಚರ್ಚೆ. ತುಂಗಭದ್ರ ನದಿಯಿಂದ ಕಟ್ಟೆ ನೇರವರಿಸುವ ಕುರಿತು ಚರ್ಚಿಸಲಾಯಿತು.ಅಧ್ಯಕ್ಷರು ಆದಿಮನಿ ಹುಸೇನ್ ಭಾಷಾ, ಉಪಾಧ್ಯಕ್ಷರು ಲಕ್ಷ್ಮೀ ಆರ್, ಸದಸ್ಯರು ಎಲ್. ವಸಂತ, ಬೆನಕಲ್ ಬಾಷ ಹಾಜರಿದ್ದರು. ಮುಖ್ಯಧಿಕಾರಿ ಎಂ. ಖಾಜಾ ಮೈನುದ್ದಿನ್, ಸಿಬ್ಬಂದಿ ಇಂಜಿನಿಯರ್ ಹನುಮಂತಪ್ಪ, ಹೊನ್ನೂರ್ ಬಾಷ, ನಾಗರಾಜ, ನವೀನ, ಭರ್ಮಪ್ಪ, ಸಮಾದೆಪ್ಪ, ಪಂಪಾಪತಿ, ಅರೋಗ್ಯ ಇಲಾಖೆಯ ವೈದ್ಯರಾದ ಡಾ, ಮಂಜುಳಾ ಅಂಗನವಾಡಿ ಯಿಂದ ರೇಣುಕಾ ಇತರರಿದ್ದರು.ಬಾಕ್ಸ್:ಇಂದು ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸದಸ್ಯರ ಚುನಾವಣೆ ಚಟುವಟಿಕೆ ನಡೆಯುತ್ತಿರುವುದರಿಂದ ಬಹುತೇಕ ಸದಸ್ಯರು ಅಲ್ಲಿ ಭಾಗಿಯಾಗಿದ್ದಾರೆ ಇನ್ನೂ ಕೆಲವರಿಗೆ ಅನಾನುಕೂಲ ಇರುವುದರಿಂದ ಭಾಗಿಯಾಗಲು ಸಾಧ್ಯವಾಗಿಲ್ಲ. ಆಂತರಿಕ ಸಮಸ್ಯೆ ಏನೇ ಇರಲಿ ಅದನ್ನು ಬಗೆಹರಿಸಿ ಕೊಳ್ಳುತ್ತೇವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ