ಮಾಕನಡುಕು ಗ್ರಾಮದ ಐತಿಹಾಸಿಕ ಓಬಳೇಶ್ವರ ಲಕ್ಷ್ಮೀ ನರಸಿಂಹ ಸ್ವಾಮಿಯ ಗುಗ್ಗರಿ ಹಬ್ಬ.
ಮಾಕನಡುಕು ಫೆಬ್ರುವರಿ.28

ಕಾನ ಹೊಸಹಳ್ಳಿ ಸಮೀಪದ ಮಾಕನಡುಕು ಗ್ರಾಮದ ಐತಿಹಾಸಿಕ ಶ್ರೀ ಕಂಚೋ ಓಬಳೇಶ್ವರ ಲಕ್ಷ್ಮೀ ನರಸಿಂಹ ಸ್ವಾಮಿಯ ವರ್ಷಕ್ಕೊಮ್ಮೆ ಜರುಗುವ ಬುಡಕಟ್ಟು ಸಂಸ್ಕೃತಿಯ ಗುಗ್ಗರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು. ಸುತ್ತ ಮುತ್ತಲಿನ ರಾಜ್ಯ ಜಿಲ್ಲೆಯ ಅಣ್ಣ ತಮ್ಮಂದಿರ ಗುಡಿಕಟ್ಟಿಗೆ ಸೇರಿದ ಅಣ್ಣ ತಮ್ಮಂದಿರು ಈ ಗುಗ್ಗರಿ ಹಬ್ಬವನ್ನು ಆಚರಿಸುತ್ತಾರೆ. ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಮೊದಲು ಗೋಪೂಜೆ, ನಂತರ ಬನ್ನಿ ಮುಡಿಯುವ ಕಾರ್ಯಕ್ರಮ, ಬಳಿಕ ದೀಪೋತ್ಸವ, ಅವರೆಗುಗ್ರಿ, ಬಾಳೆಹಣ್ಣಿನ ಎಡೆ ಕಾರ್ಯಕ್ರಮ, ಕೊನೆಯಲ್ಲಿ ದೇವರ ಎತ್ತುಗಳಿಗೆ ಪೂಜೆ ಸಲ್ಲಿಸುವ ವಿಶೇಷ ಕಾರ್ಯವಿರುತ್ತದೆ. ವಿಶೇಷವೆಂದರೆ ಮಾಕನಡುಕಿನ ದೇವಸ್ಥಾನದಲ್ಲಿ ಶೈವ, ವೈಷ್ಣವ ಪಂಥಗಳ ಎರಡೂ ದೇವರು ಪೂಜಿಸಲ್ಪಡುತ್ತದೆ. ಮೂಲ 7 ಜನ ಪಾಳೆಗಾರರು ಜರಿಮಲೆ, ಗುಡೇಕೋಟೆಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ, ಮಾಕನಡುಕಿನ ದೇವಸ್ಥಾನವನ್ನು ಸ್ಥಾಪಿಸಿದರೆಂದು ತಿಳಿದು ಬಂದಿದೆ. ಇವರಲ್ಲಿ ಜರಿಮಲೆ ಹಾಗೂ ಪಾಳೆಗಾರರ ವಂಶಸ್ಥರು ಪ್ರತಿ ವರ್ಷವೂ ಮಾಕನಡುಕಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ಆಂಧ್ರ, ಕರ್ನಾಟಕದ ಉದ್ದಗಲಕ್ಕೂ ಭಕ್ತರಿದ್ದು, ಪ್ರತಿ ವರ್ಷ ಫೆಬ್ರವರಿ ತಿಂಗಳ ಭಾರತ ಹುಣ್ಣಿಮೆಯಂದು ನಡೆಯುವ ಜಾತ್ರೆಯಲ್ಲಿ ನೂರಾರು ಭಕ್ತರ ಪಾಲ್ಗೊಳ್ಳುತ್ತಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ