ಗಾನ ಗಂಧರ್ವ ಗಾನ ಕೋಗಿಲೆ ಸಿ.ಎಚ್ ಉಮೇಶ್ ಅವರನ್ನು – ಡಾ, ವಾಸುದೇವ ಮೇಟಿ ಮುಕ್ತ ಮನಸ್ಸಿನಿಂದ ಹೊಗಳಿ ಶುಭ ಹಾರೈಸಿದರು.
ದಾವಣಗೆರೆ ನ.11

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಡಾ, ವಾಸುದೇವ ಮೇಟಿ ಬಣ ಇವರ ವತಿಯಿಂದ ರೈತ ಸಂಘದ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಕಲಾವಿದರಾದ ಉಮೇಶ್ ನಾಯಕ್ ಚಿನ್ನಸಮುದ್ರ ರೈತ ಗೀತೆ ಹೋರಾಟ ಗೀತೆ ಕ್ರಾಂತಿ ಗೀತೆ ಹಾಡಿ ರೈತರು ಖುಷಿಪಟ್ಟು ಚಪ್ಪಾಳೆ ಪ್ರೋತ್ಸಾಹ ನೀಡಿದರು.

ವಾಸುದೇವ ಮೇಟಿ ಅವರು ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚಿನದಾಗಿ ಗಾಯನ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಲೆಯನ್ನು ಉಳಿಸಿ ಬೆಳೆಸುವ ಪ್ರೋತ್ಸಾಹ ಮಾಡುತ್ತಿದ್ದಾರೆ. ಉಮೇಶ್ ನಾಯಕ್ ಅವರಿಗೆ ಸರ್ಕಾರ ಜಾನಪದ ಅಕಾಡೆಮಿ ರಿಜಿಸ್ಟರ್ ಪ್ರೋತ್ಸಾಹ ನೀಡಬೇಕೆಂದು ಶುಭ ನುಡಿದರು.

ಅದೇ ರೀತಿ ಜಿಲ್ಲಾಧ್ಯಕ್ಷರಾದ ಗುಮ್ಮನೂರ್ ಬಸವರಾಜ್ ನೀರ್ ತಡಿ ಲೋಕೇಶ್ ರೈತ ಸಂಘದ ಹಿರಿಯರು ಹೋರಾಟಗಾರರು ಸದಸ್ಯರು ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

