ಗಣಿ ಅಧಿಕಾರಿ ಪುಷ್ಪಲತಾರ ಕುಮ್ಮಕ್ಕಿನಿಂದ ರಾಜಾರೋಷವಾಗಿ ನಡೆಯುತ್ತೆ ಮರಳು ಸಾಗಣೆ.
ಮಾನ್ವಿ ಸ.30

ಖನಿಜ ಸಂಪತ್ತನ್ನು ರಕ್ಷಣೆ ಮಾಡಿ ಕಾನೂನು ಏನೆಂದು ಖದೀಮರಿಗೆ ತೋರಿಸ ಬೇಕಾದ ಕೆಲಸ ಗಣಿ ಅಧಿಕಾರಿಗಳ ಕೆಲಸ. ಆದರೆ, ರಾಯಚೂರು ಗಣಿ ಅಧಿಕಾರಿ ಪುಷ್ಪಲತಾ ಮೇಡಂ ನಿದ್ರೆಗೆ ಜಾರಿದ್ದರಿಂದ ಮಾನ್ವಿ ತಾಲೂಕಿನ ಚೀಕಲಪರ್ವಿ ಸ್ಟಾಕ್ ಯಾರ್ಡ್ ನಿಂದ ರಾಯಲ್ಟಿ ಇಲ್ಲದೆ ಟಿಪ್ಪರ್ ಗಳಲ್ಲಿ ಮರಳು ಸಾಗಣೆಯಾದರು ಕಾನೂನು ಅನ್ನೋದು ಇಲ್ಲಿ ಇದೇನಾ ಅಥವಾ ಸತ್ತೋಗಿದೆನಾ ಎಂಬುದು ತಿಳಿಯದಾಗಿದೆ.

ಹಟ್ಟಿ ಚಿನ್ನದಗಣಿ ಕಂಪನಿ ಯಿಂದ ಮರಳನ್ನು ರಾಯಲ್ಟಿ ಮತ್ತು ಕಾನೂನು ಮಾಪನ ಪ್ರಕಾರ ಟಿಪ್ಪರ್ ಗಲ್ಲಿ ಸಾಗಣೆ ಮಾಡಬೇಕು. ಆದರೆ ನಮ್ಮನ್ನು ಯಾರು ಕೇಳುತ್ತಾರೆಂದು ಅನಾಮಧೇಯ ವ್ಯಕ್ತಿಗಳು ಸ್ಟಾಕ್ ಯಾರ್ಡ್ ನಲ್ಲಿ ಕುಳಿತು ಕೊಂಡು ಅಕ್ರಮವಾಗಿ ಹಗಲು ಮತ್ತು ರಾತ್ರಿ ಸಾಗಣೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಪರಿಸರವಾದಿಗಳ ಆರೋಪವಾಗಿದೆ.ಚೀಕಲಪರ್ವಿ ಸ್ಟಾಕ್ ಯಾರ್ಡ್ ನಲ್ಲಿರುವ ಸಿಸಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದ ಕಾರಣ ಅಕ್ರಮ ಮರಳು ಸಾಗಣೆಗೆ ಪ್ರಮುಖ ಕಾರಣವಾದರೆ,

ಗಣಿ ಅಧಿಕಾರಿ ಪುಷ್ಪಲತಾ ಮೇಡಂ ಯಾಕೆ ಮೌನ ತಾಳಿದ್ದಾರೆಂದು ತಿಳಿಯದಾಗಿದೆ.ಒಂದೇ ರಾಯಲ್ಟಿಯಲ್ಲಿ ಹತ್ತಾರು ಟ್ರಿಪ್ ಮರಳು ಸಾಗಣೆ ಮಾಡುವ ದಂಧೆ ಚೀಕಲಪರ್ವಿ ಸ್ಟಾಕ್ ಯಾರ್ಡ್ ನಿಂದ ನಡೆಯುತ್ತೆ. ಆದರೆ ಈ ಬಗ್ಗೆ ಕ್ರಮ ಜರುಗಿಸ ಬೇಕಾದ ಗಣಿ ಅಧಿಕಾರಿ ಪುಷ್ಪಲತಾ ಕಾನೂನು ಪಾಲನೆ ಮಾಡುವರೋ ಅಥವಾ ನಮಗ್ಯಾಕೆ ಬೇಕು ಯಾರಾದರು ಖನಿಜ ಸಂಪತ್ತು ಲೂಟಿ ಮಾಡಲಿ ಎಂದು ಸರಕಾರದ ಸಂಬಳ ತಿನ್ನುತ್ತ ಕೂರುವರೋ ಎಂದು ಸಾರ್ವಜನಿಕರ ಆಕ್ರೋಶವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ