ಎ.ಐ.ಯು.ಟಿ.ಯು.ಸಿ ಸಂಘಟನೆಯಿಂದ ಪ್ರತಿಭಟನೆ.

ಇಂಡಿ ಡಿಸೆಂಬರ್.20

ಒಳ್ಳೆಯ ದಿನಗಳನ್ನು ಕೊಡುವುದಾಗಿ ನಂಬಿಸಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇಲ್ಲಿಯವರೆಗೆ ದಿನಗೂಲಿ ನೌಕರರನ್ನು ಖಾಯಂ ಮಾಡಿಲ್ಲ, ಸಂಬಳವನ್ನೂ ಹೆಚ್ಚಿಸಿಲ್ಲ. ಇನ್ನು ಮೇಲಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಸೋಮವಾರ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ ಸಂಘಟನೆಯ ನೂರಾರು ಜನ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು, ವಸತಿ ನಿಲಯದ ಕಾರ್ಮಿಕರು ಮುಂತಾದ ಕೆಲಸಗಾರರು ಎಸಿ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಕೊಡುವುದಕ್ಕಿಂತ ಮುಂಚಿತವಾಗಿ ಕೆಲಕಾಲ ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಸತ್ಯಂ ಹಡಪದ ಮಾತನಾಡಿ, ಎಲ್ಲರಿಗೂ ಖಾಯಂ ಉದ್ಯೋಗವನ್ನು ಒದಗಿಸಿ, “ಉದ್ಯೋಗದ ಹಕ್ಕನ್ನು” ಸಂವಿಧಾನದ ಹಕ್ಕನ್ನಾಗಿ ಮಾಡಿ, ಎಲ್ಲಾ ಪಿಂಚಣಿದಾರರಿಗೆ ಬೆಲೆ ಏರಿಕೆಯ ಸೂಚ್ಯಂಕದ ಅನುಗುಣವಾಗಿ ಪಿಂಚಣಿಯನ್ನು ಖಾತ್ರಿ ಪಡಿಸಿ, ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗಧಿಗೊಳಿಸಿ, ಬೆಲೆ ಏರಿಕೆಯನ್ನು ನಿಯಂತ್ರಿಸಿ, ಆಹಾರದಂತಹ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹಿಂಪಡೆಯಿರಿ, ಔಷಧ, ಪೆಟ್ರೋಲ್ ಮುಂತಾದವುಗಳ ಬೆಲೆ ಇಳಿಸಿ, ಎಲ್ಲಾ ಗುತ್ತಿಗೆದಾರರ ಸೇವೆಯನ್ನು ಖಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತನ್ನಿ, ಐಎಲ್ಸಿಯ 45ನೇ ಮತ್ತು 46ನೇ ಶಿಫಾರಸುಗಳನ್ನು ಜಾರಿಗೆ ತನ್ನಿ, ಹೊಸ ಪಿಂಚಣಿ ವ್ಯವಸ್ಥೆ ಹಿಂಪಡೆದು ಕೊಳ್ಳಿ ಮತ್ತು ಪಿಂಚಣಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಎನ್ನುವ ಮುಂತಾದ 24 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಭಾಗ್ಯಶ್ರೀ ಕುರ್ತಳ್ಳಿ, ಭಾಗ್ಯಶ್ರೀ ಮೆಡೇದಾರ, ರಿಯಾನಾ ಬಗಲೂರ, ಸರೂಬಾಯಿ ರಾಠೋಡ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಆಶಾ ರಾಠೋಡ, ಭಾರತಿ ಪವಾರ, ಸುರೇಖಾ ದೊಡಮನಿ, ಗೀತಾ ಜಾಧವ, ಶೋಭಾ ಕಾಲೇಬಾಗ, ಜಗು ವಾಲಿ, ಸವಿತಾ ರಾಠೋಡ, ಶಶಿಕಲಾ ಕಮತಿ, ಭುವನೇಶ್ವರಿ ಮಾವಿನಹಳ್ಳಿ, ಆರತಿ ಕುಂಟೋಜಿ, ಸಾವಿತ್ರಿ ಕುಂಬಾರ, ಲತಾ ಕಟ್ಟೀಮನಿ, ಗೀತಾ ಹಂಜಗಿ, ಸರಸ್ವತಿ ಜ್ಯೋಶಿ, ರೇಣುಕಾ ಹೆಳವರ, ಅಕ್ಕವ್ವ ಹಲಸಂಗಿ, ಕವಿತಾ ಕಟ್ಟೀಮನಿ, ಕಲಾವತಿ ಹೂಗಾರ ವಹಿಸಿಕೊಂಡಿದ್ದರು. ಇಂಡಿ.ಪಟ್ಟಣದ ಮಿನಿವಿಧಾನ ಸೌಧದ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ, ಎಐಯುಟಿಯುಐ ಪ್ರತಿಭಟನೆ ಮಾಡಿ, ಎಸಿ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button