ಜಿಲ್ಲೆಯಲ್ಲಿಯೇ ಹುನಗುಂದ, ಇಲಕಲ್ಲನಿಂದ ಸರ್ಕಾರಕ್ಕೆ ಹೆಚ್ಚಿನ ವಿದ್ಯುತ್ ತೆರಿಗೆ – ಶೀಘ್ರದಲ್ಲಿಯೇ 220 ಕೆವ್ಹಿ ಸ್ಟೇಶನ್ ಆರಂಭ.
ಹುನಗುಂದ ಮಾರ್ಚ್.10
ಹುನಗುಂದ ಪಟ್ಟಣಕ್ಕೆ ಹೆಸ್ಕಾಂ ವಿಭಾಗ ಕಚೇರಿಯನ್ನು ತರೆಯಲು ಸದನದಲ್ಲಿ ಮಾತಾನಾಡಿದ್ದೇನೆ ಮತ್ತು ವೈಯಕ್ತಿಕವಾಗಿ ಮುಖ್ಯಮಂತ್ರಿಗಳನ್ನು ಹಾಗೂ ಇಂಧನ ಇಲಾಖೆಯ ಸಚಿವರೊಂದಿಗೆ ಮನವಿ ಕೂಡಾ ಮಾಡಿದ್ದೇನೆ ನನಗೆ ವಿಶ್ವಾಸವಿದೆ. ಈ ವರ್ಷದ ಅಂತ್ಯಕ್ಕೆ ಹುನಗುಂದದಲ್ಲಿ ವಿಭಾಗ ಕಚೇರಿ ಆರಂಭಲಾಗುವುದು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಶನಿವಾರ ಪಟ್ಟಣದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಆವರಣದಲ್ಲಿ ಹುನಗುಂದ ಉಪ ವಿಭಾಗ ನೂತನ ಕಚೇರಿ ಕಟ್ಟಡ, 33 ಕೆವ್ಹಿ ಕರಡಿ ಉಪ ವಿದ್ಯುತ್ ವಿತರಣಾ ಕೇಂದ್ರ ಹೆಚ್ಚುವರಿ, 5 ಎಂವಿಎ ಪವರ್ ಟ್ರಾನ್ಸಫರ್ಮರ್ ಅಳವಡಿಕೆ ಹಾಗೂ ವಿದ್ಯುತ್ ಮಾಪಕ ಬಾಹ್ಯ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನಲ್ಲಿ ೧ ಲಕ್ಷ ೨೮ ಸಾವಿರ ಜನ ಗ್ರಾಹಕರಿದ್ದಾರೆ.ಬಾಗಲಕೋಟಿ ಜಿಲ್ಲೆಯಲ್ಲಿಯೇ ಸರ್ಕಾರಕ್ಕೆ ಅತೀ ಹೆಚ್ಚು ತೆರಿಗೆ ಕಟ್ಟುವ ಏಕೈಕ ತಾಲೂಕಗಳಾಗಿದ್ದು. ಹುನಗುಂದ ಪಟ್ಟಣಕ್ಕೆ ಬಹುದಿನದ ಬೇಡಿಕೆಯಾಗಿದ್ದ ಉಪ ವಿಭಾಗ ಕಚೇರಿ ಮತ್ತು ಕಟ್ಟಡವನ್ನು ನನ್ನ ಕಳೆದ ಅವಧಿಯಲ್ಲಿ ಮಂಜೂರು ಮಾಡಿಸಿ ಭೂಮಿ ಪೂಜೆ ಮತ್ತು ಅಡಿಗಲ್ಲು ಹಾಕಿದೆ ಮರಳಿ ನನ್ನಿಂದಲೇ ಉದ್ಘಾಟನೆ ಯಾಗುತ್ತಿರುವುದು ಸಂತಸ ತಂದಿದೆ.ಹುನಗುಂದ ಮತಕ್ಷೇತ್ರಕ್ಕೆ 220 ಕೆವ್ಹಿ ಸ್ಟೇಶನ್ ಅವಶ್ಯಕತೆ ಇದೆ.ಅದಕ್ಕಾಗಿ ಈಗಾಗಲೇ 20 ಎಕರೆ ಜಮೀನ ಕೂಡಾ ಖರೀದಿಯಾಗಿದೆ ಅದನ್ನು ಶೀಘ್ರದಲ್ಲಿಯೇ ಮಂಜೂರಾತಿಯಾಗುತ್ತೇ ಅದನ್ನು ಕೂಡಾ ಆರಂಭಿಸಲಾಗುವುದು.ಕಳೆದ ನನ್ನ ಅವಧಿಯಲ್ಲಿ ಕಂದಗಲ್ಲ ಗ್ರಾಮದಲ್ಲಿ 33 ಕೆವ್ಹಿ ಸ್ಟೇಶನ್ ಆರಂಭಿಸಲಾಗಿತ್ತು.ಸಧ್ಯ ಹಾವರಗಿ,ಹುಲಿಗಿನಾಳ,ಐಹೊಳೆ,ಮುಗನೂರಗಳಲ್ಲಿ 110 ಕೆವ್ಹಿ ಸ್ಟೇಶನ್ ಆಗಬೇಕು ಅಂತಾ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವಣೆಯನ್ನು ಸಲ್ಲಿಲಾಗಿದೆ.ಅದು ಕೂಡಾ ಸಧ್ಯದಲ್ಲಿಯೇ ಆರಂಭಗೊಳಲಿವೆ.ಸಧ್ಯ ನಮ್ಮ ಸರ್ಕಾರ ನೇಕಾರರಿಗೆ 10 ಎಚ್‌ಪಿ ಉಚಿತ ವಿದ್ಯುತ್,ರೈತರಿಗೆ 7 ತಾಸು ರೈತರಿಗೆ ಒದಗಿಸಲಾಗುತ್ತದೆ ಎಂದರು.ಬಾಗಲಕೋಟ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸುನೀಲ ಯಳಸಂಗಿ ಮತ್ತು ಹುನಗುಂದ ಹೆಸ್ಕಾಂ ಎಇಇ ಪ್ರಕಾಶ ಪೋಚಗುಂಡಿ ಮಾತನಾಡಿ ಹುನಗುಂದ ಪಟ್ಟಣಕ್ಕೆ ಉಪ ವಿಭಾಗ ಕಚೇರಿ ಬಹಳ ಅವಶ್ಯವಾಗಿತ್ತು. ಅದು ಇಂದು ಸಕಾರಗೊಂಡಿದೆ. ಆದರೆ ಹುನಗುಂದ ಪಟ್ಟಣಕ್ಕೆ ಒಂದು ವಿಭಾಗ ಕಚೇರಿ ಯಾಗುಬೇಕು ಅದು ನಮ್ಮ ಬೇಡಿಕೆಯಾಗಿದೆ. ಅದನ್ನು ನಮ್ಮ ಶಾಸಕರು ಈಡೇರಿಸುತ್ತಾರೆ ಎನ್ನುವ ಭರವಸೆ ನಮಗಿದೆ. ಸೌರ ಶಕ್ತಿ ವಿದ್ಯುತ್‌ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಾಲನೆಯನ್ನು ನೀಡುತ್ತಿದ್ದು.ಇನ್ನು ಮುಂದೆ ಬಾಗಲಕೋಟಿ ಜಿಲ್ಲೆಯ 17 ಸ್ಟೇಶನಿಂದ 61 ಪ್ಲೀಡರನಿಂದ ಕಾರ್ಯಾರಂಭವಾಗುತ್ತಿದೆ. ಈ ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆ ಯಾಗಬಹುದು. ಸಧ್ಯ ಸೋಲಾರ ವಿದ್ಯುತ್ ಅಳವಡಿಕೆ ಯಾಗುತ್ತಿರುವುದರಿಂದ ಮುಂದಿನ ಬೇಸಿಗೆ ವಿದ್ಯುತ್ ಸಮಸ್ಯೆ ಯಾಗುವುದಿಲ್ಲ ಎಂದರು.ಪವರ್ ಮ್ಯಾನ್ ದಿನಾಚರಣೆಯ ನಿಮಿತ್ಯ ಬಾಗಲಕೋಟಿ ಜಿಲ್ಲೆಯ ಎಲ್ಲಾ ಶಾಖೆಗಳ ಪವರ್ ಮ್ಯಾನ್( ಶಕ್ತಿಮಿತ್ರರು) ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಹುಬ್ಬಳ್ಳಿ ಹೆಸ್ಕಾಂ ನಿರ್ದೇಶಕ ಮತ್ತು ಆರ್ಥಿಕ ಅಧಿಕಾರಿ ಪ್ರಕಾಶ ಪಾಟೀಲ,ತಾ.ಪಂ ಇ.ಓ ಮುರಳೀಧರ ದೇಶಪಾಂಡೆ, ಹೆಸ್ಕಾಂ ಎಇಇ ಬಾಲಾಜಿಸಿಂಗ್, ಇಳಕಲ್ಲ ಎಇಇ ಚೇತನ ಹಾದಿಮನಿ, ಶಾಖಾಧಿಕಾರಿ ದತ್ತಾತ್ರೇಯ ದಾಯಿಗುಡಿ, ಮೇಘರಾಜ ಮಡಿವಾಳ, ಇಬ್ರಾಹಿಂ ಮ್ಯಾಗೇರ, ಗೋಪಾಲ ಪೂಜಾರಿ, ರಮೇಶ ನಾಯಕ, ಮುಖಂಡರಾದ ಶಿವಾನಂದ ಕಂಠಿ, ಮಹಾಂತೇಶ ಅವಾರಿ, ರವಿ ಹುಚನೂರ, ಸಂಗಣ್ಣ ಗಂಜೀಹಾಳ ಸೇರಿದ್ದಂತೆ ಕೆಇಬಿ ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಮಹಾಂತೇಶ ಬಣ್ಣಾಕದಿನಿ ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ