ಭೀಮಾನದಿಗೆ ನೀರು ಹರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರವರಿಗೆ ಮನವಿ.

ಇಂಡಿ ಮಾರ್ಚ್.27

ಪಟ್ಟಣ, ಚಡಚಣ ಮತ್ತು ಅಪಜಲಪುರ ತಾಲೂಕಿನಲ್ಲಿ ಹರಿಯುವ ಭೀಮಾ ನದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಇಂಡಿ ಶಾಖಾ ಕಾಲುವೆಯಿಂದ ಒಂದು ಟಿ.ಎಂ.ಸಿ ನೀರು ಬಿಡಬೇಕೆಂದು ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ಅಪಜಲಪುರ ಶಾಸಕ ಎಂ.ವೈ. ಪಾಟೀಲರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರಿಗೆ ಮನವಿ ಮಾಡಿದ್ದಾರೆ.ಪ್ರಸಕ್ತ ವರ್ಷ ಭೀಕರ ಬರಗಾಲ ಇರುವದರಿಂದ ನದಿ, ಕೆರೆ ಹಳ್ಳ ಕೊಳ್ಳಗಳು ಜಲಮೂಲಗಳು ಬತ್ತಿಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅತೀವ ತೊಂದರೆ ಯಾಗುತ್ತಿವೆ. ಹೀಗಾಗಿ ಐ.ಬಿ.ಸಿ ಮುಖಾಂತರ ಎಸ್ಕೇಪ್ ಕಿಮಿ ೯೩, ೧೧೮, ೧೩೩, ೧೪೩,೧೬೦, ೧೬೭ ಮುಖಾಂತರ ಸುಮಾರು ಪ್ರತಿದಿನ ೧೫೦ ಕ್ಯೂಸೆಕ್ಸ ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿದ್ದಾರೆ.ಮಹಾರಾಷ್ಟ್ರ ಸರಕಾರ ಪ್ರತಿ ವರ್ಷ ಬೇಸಿಗೆಯಲ್ಲಿ ಉಜನಿ ಆಣೆಕಟ್ಟಿನಿಂದ ಎರಡು ಟಿ.ಎಂ.ಸಿ ನೀರು ಬಿಡುತ್ತಿದ್ದರು. ಈ ಬಾರಿ ಬಿಟ್ಟಿಲ್ಲ. ಹೀಗಾಗಿ ಕರ್ನಾಟಕದ ನೀರಾವರಿ ಸರಕಾರದ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರಕಾರದ ನೀರಾವರಿ ಕಾರ್ಯದರ್ಶಿಗಳಿಗೆ ಪತ್ರ ಮುಖೇನ ಮತ್ತು ಫೋನು ಮೂಲಕ ಮಾತಾಡಿ ಇಲ್ಲಿಯ ಪರಿಸ್ಥಿತಿ ಮನವರಿಕೆ ಮಾಡಿ ಮಾನವೀಯ ಆಧಾರದ ಮೇಲೆ ನೀರು ಬಿಡಲು ವಿನಂತಿಸಿ ಕೊಳ್ಳಬೇಕು ಎಂದು ಯಶವಂತರಾಯಗೌಡ ಪಾಟೀಲರು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button