ಸೈನ್ಯಕ್ಕೆ ಸೇರಲು ಯುವಕರು ಮುಂದಾಗಬೇಕು – ಬಸವರಾಜ ಮುಷ್ಟೂರ ಕರೆ.

ಮಾನ್ವಿ ಜು.29

ಕಾರ್ಗಿಲ್ ತಾವು ಅಂದುಕೊಂಡ ಹಾಗೆ ಆರಾಮದಾಯಕ ಗಡಿ ರಕ್ಷಣೆಯ ಸ್ಥಳವಲ್ಲ ಇಲ್ಲಿನ ಆಳ ಪ್ರಪಾತಗಳು ಜೂನ್ ಜುಲೈ ತಿಂಗಳ ವಿಪರೀತ ಶೀತದ ಚಳಿ ಇದರ ಮದ್ಯೆ ದ್ರೋಹ ಬಗೆದ ಗಡಿತಾಗಿದ ದೇಶ ಪಾಪಿ ಪಾಕಿಸ್ತಾನಿಗಳು ನಮ್ಮ ಬಂಕರ್ ಹತ್ತಿ ನಮ್ಮ ಮೇಲೆ ಗುಂಡಾರಿಸುವ ಅನುಭವ ಕಾರ್ಗಿಲ್ ನಲ್ಲಿ ನಾ ಕಂಡಿದ್ದೇನೆ ರಾಷ್ಟ್ರ ರಕ್ಷಣೆಗೆ ನಾವು ಸದಾ ಸಿದ್ದತೆಯೊಂದಿಗೆ ಬದುಕುವುದು ಸರ್ವೆ ಸಮಾನ್ಯವಾಗಿತ್ತು ಎಂದು ಮಾಜಿ ಸೈನಿಕ ಬಸವರಾಜ ಮುಷ್ಟೂರ ಹೇಳಿದರು.

ಸ್ವಾಭಿಮಾನಿ ಯುವ ಬಳಗ ಮಾನವಿ ಮತ್ತು ವಂದೇ ಮಾತರಂ ಯುವ ಸಂಘ (ರಿ) ಮದ್ಲಾಪುರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಮಾನವಿಯ ದಿ. ಮಂಜುನಾಥ ಪುತ್ಥಳಿ ಕಾರ್ಯಕ್ರಮ ಯಲ್ಲಿ ಮಾಡಿ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ಮೌನಾಚಣೆ ಮಾಡಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಸವರಾಜ ಮುಸ್ಟೂರ, ಆಂಜನೇಯ ಜಲ್ಲಿ ನೀರಮಾನವಿ ಮತ್ತು ಹಾಲಿ ಅಗ್ನಿವೀರ ಆರ್ಮಿ ಅಮರೇಶ ಮದ್ಲಾಪುರ ರವರುಗಳಿಗೆ ಸನ್ಮಾನಿಸಲಾಯಿತು.

ಪ್ರಾಸ್ತಾವಿಕದಲ್ಲಿ ವಂದೇ ಮಾತರಂ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ ಮಾತನಾಡಿ “ಸಂವಿಧಾನದಲ್ಲಿನ ನಮಗೆ ಹಕ್ಕು ಎಷ್ಟು ಮುಖ್ಯನೋ, ಹುತಾತ್ಮ ಯೋಧರನ್ನು ಸ್ಮರಿಸುವ ಕರ್ತವ್ಯ ಅಷ್ಟೇ ಮುಖ್ಯ. ಈ ವಿಜಯೋತ್ಸವಕ್ಕೆ ಕಾರಣಿಕರ್ತರು ಯೋಧರು, ನಮ್ಮ ದೇಶದ ಗಡಿ ರಕ್ಷಕರು ನಮ್ಮನ್ನು ಕಾಪಾಡುತ್ತಿದ್ದಾರೆ, ಯುವಕರು ಸೈನಿಕ ವೃತ್ತಿಗೆ ಸೇರುವ ಉತ್ಸಾಹಿಗಳಾಗಲಿ ಸಾದ್ಯವಾಗದಿದ್ದರೂ ದೇಶದ ಒಳಗಡೆ ಸಮಾಜದ ಸೈನಿಕರಾಗೋಣ ಹಲವಾರು ಬದಲಾವಣೆ ತರುವುದು ಅವಶ್ಯಕತೆ ಇದೆ ಭ್ರಷ್ಟಾಚಾರ, ಮೂಢನಂಬಿಕೆ, ಜಾತೀಯತೆ, ಅನೈತಿಕ ಚಟುವಟಿಕೆಗಳು ಮತ್ತು ದುಶ್ಚಟಗಳುನ್ನು ಬೇರು ಸಮೇತ ಕಿತ್ತಬೇಕಿದೆ” ಎಂದರು.

ಮಾಜಿ ಯೋಧ ಆಂಜನೇಯ ಜಲ್ಲಿ ಮಾತನಾಡುತ್ತಾ “ಗಡಿಯಲ್ಲಿ ಸೈನಿಕರಾಗದಿದ್ದರೂ ದೇಶದ ಒಳಗಡೆ ಎಷ್ಟೋ ಕೆಟ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಕಾಣುತ್ತಿದ್ದರೆ ನಮಗೆ ಗಡಿಯೇ ಲೇಸು ಎಂದೆನಿಸುತ್ತದೆ. ಸೈನಿಕರ ಬಗೆಗಿನ ನಿಶಕಾಳಜಿ ಸರ್ಕಲ್ ಜೀರ್ಣೋದ್ದಾರ ಇಲ್ಲ, ಜಯಂತಿಗಳಿಗೆ ಇದ್ದ ಬೆಲೆ ರಾಷ್ಟ್ರ ರಕ್ಷಕ ಸೈನಿಕನಿಗೆ ಯುವಕರು ಕೊಡುವಷ್ಟು ಗೌರವ ನಾಯಕರು ಮುಖಂಡರು ನೀಡುತ್ತಿಲ್ಲ ಎಂದು ಬೇಸರ” ಎಂದರು.

ಅಗ್ನಿವೀರ್ ಅಮರೇಶ ಮದ್ಲಾಪುರ ಮಾತನಾಡುತ್ತಾ “ಇವತ್ತಿನ ಯುವಕರು ಮೊಬೈಲ್ ಅಡಿಕ್ಷನ್, ಬೆಟ್ಟಿಂಗ್, ದುಶ್ಚಟಗಳಿಗೆ ಬಲಿ” ಯಾಗುತ್ತಿರುವುದು ದುರಂತ ನಾನು ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತದರಲ್ಲಿ ಗೌರವ ಮತ್ತು ಆಪರೇಷನ್ ಸಿಂಧೂರ್ ನಲ್ಲಿ ಶತ್ರುಗಳ ಮೇಲೆ ಗುಂಡಾರಿಸಿದೆ ಎಂಬ ತೃಪ್ತಿ ಇದೆ.

ಬದುಕು ಹೇಗಾದರೂ ಆಗಬಾರದು ಅನ್ಕೊಂಡಿರೋ ಹಾಗೆ ಸಾಗಬೇಕು ನಮ್ಮ ಸಾವಿಗೆ ಸರ್ಕಾರ ರಾಷ್ಟ್ರ ಧ್ವಜ ಹಾಕಿ ಸರ್ಕಾರಿ ಮಾರ್ಯಾದೆಯೊಂದಿಗೆ ಸೆಲ್ಯೂಟ್ ಮಾಡಬೇಕು ಈ ಜೀವನಕ್ಕೆ ನಾವೆಲ್ಲ ಪಾಲುಗಾರರಾಗೋಣ ಎಂದರು.

ಬಳಗ ಮತ್ತು ಸಂಘದ ಮಹೇಶ್ ನಾಯಕ ಬೆಟ್ಟದೂರು, ಎಚ್.ಬಿ.ಎಂ. ಭಾಷ, ಕೆ.ಎಂ. ಭಾಷ, ಮದ್ಲಾಪೂರಿನ ಬಾಲಪ್ಪ, ಸ್ವಾಮಿ, ಸಂದೀಪ್, ವಿಶ್ವನಾಥ್, ವೆಂಕಟೇಶ್ ಮುಸ್ತಾಕ್ ಗುರು, ವೀರೇಶ್ ನಾಯಕ, ನರಸಿಂಹ, ಜಗ್ಗು ಸಿ, ವಿಜಯ್ ಹೂಗಾರ್ ಮತ್ತು ಸ್ನೇಹಿತರು ಹಾಗೂ ಯುವಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button