ಸಂಘಟನ್ ಸೃಜನ್ ಅಭಿಯಾನ ಅಂಗವಾಗಿ ಮೊಳಕಾಲ್ಮೂರು ಕ್ಷೇತ್ರದ – ವಿಶೇಷ ಸಭೆ ನಡೆಸಿದ ಶಾಸಕರು.

ಮೊಳಕಾಲ್ಮೂರು ಜು.29

ವಿಧಾನ ಸಭಾ ಕ್ಷೇತ್ರದ ದೇವಸಮುದ್ರದ ಶ್ರೀ ಶರಣ ಪರಮೇಶ್ವರ ತಾತನವರ ಮಠದ ಸಭಾಂಗಣದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ವತಿಯಿಂದ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ “ಸಂಘಟನ್ ಸೃಜನ್ ಅಭಿಯಾನ” ಅಂಗವಾಗಿ ವಿಶೇಷ ಸಭೆ ನಡೆಯಿತು.

ಸಭೆಯಲ್ಲಿ AICC ವೀಕ್ಷಕರಾದ ಶ್ರೀ ರಿಪುನ್ ಬೋರ, KPCC ವೀಕ್ಷಕರಾದ ಶ್ರೀ ವಿ. ಎಸ್. ಉಗ್ರಪ್ಪ ಹಾಗೂ DCC ಅಧ್ಯಕ್ಷರಾದ ಶ್ರೀ ತಾಜ್ ಪೀರ್ ಅವರು ಭಾಗವಹಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್. ವೈ. ಗೋಪಾಲಕೃಷ್ಣ ಅವರು ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಶ್ರೀ ಎನ್. ವೈ. ಗೋಪಾಲಕೃಷ್ಣ ಅವರು, ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಮತ್ತಷ್ಟು ಸದೃಢ ಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಪ್ರತಿಯೊಬ್ಬ ಕಾರ್ಯಕರ್ತರು ತಮ್ಮದೇ ಚುನಾವಣೆ ಎಂಬ ಮನೋಭಾವದಿಂದ ಸ್ವೀಕರಿಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಸಂಘಟನೆಯೇ ಪಕ್ಷದ ಶಕ್ತಿ ಎಂಬುದನ್ನು ಮನಗಂಡು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ ಎಂದು ಅವರು ಹೇಳಿದರು.

ಸಭೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ‌ ‌ ‌ ‌ ‌ ‌ ‌ ‌ ‌ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button