“ಚುಕ್ಕಿ ಸಂಭ್ರಮ” ಕವನ ಸಂಕಲನ – ಕೃತಿ ಲೋಕಾರ್ಪಣೆ.
ಕೂಡ್ಲಿಗಿ ಜು.28

ಯಾಂತ್ರಿಕ ಬದುಕಿನ ಧಾವಂತದಲ್ಲಿ ಪುಸ್ತಕ ಬಿಡುಗಡೆ ಮಾಡುವುದು ಸಮಾಜಕ್ಕೆ ಹಿತವಾದ ಮೌಲ್ಯ ಎಂದು ಅವಿಭಜಿತ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ್ಯ ಡಾ, ನಿಷ್ಠಿ ರುದ್ರಪ್ಪ ಹೇಳಿದರು.
ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದ ಆಂಗ್ಲ ಮಾಧ್ಯಮ ವೈಭವ ಶಾಲೆಯ ಆವರಣದಲ್ಲಿ ಭಾನುವಾರ ನಡೆದ “ಚುಕ್ಕಿ ಸಂಭ್ರಮ” ಕವನ ಸಂಕಲನ ಕೃತಿ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಡಿಜಿಟಲ್ ಪರದೆಗಳ ಬಳಕೆಯಿಂದ ಪುಸ್ತಕ ಹಿಡಿಯುವ ಆಸಕ್ತಿ ಮತ್ತು ಏಕಾಲಹರಣ ಕಡಿಮೆ ಯಾಗುತ್ತಿದೆ.
ಅನೇಕ ಸಾಹಿತ್ಯ ಆಸಕ್ತರು ಹೆಚ್ಚಾಗಿರುವ ಕಾನಾ ಹೊಸಹಳ್ಳಿ ಜನರ ಬಗ್ಗೆ ಕವನ ಸಂಕಲನದಲ್ಲಿ ಕೃತಿ ರಚನೆಕಾರ ಕೆ ಎಂ ಮಧುಸೂಧನ ರಚಿಸಿದ್ದಾರೆ. ಪುಸ್ತಕ ಬಿಡುಗಡೆ ಎಂದರೆ, ಒತ್ತಡದ ಮತ್ತು ಡಿಜಿಟಲ್ ಗಜಿ ಬಿಜಿಯ ಜೀವನದ ನಡುವೆಯೂ ಹೊಸ ಸಾಹಿತ್ಯ ಲೋಕವೊಂದರ ಸೃಷ್ಟಿ ಹಾಗೂ ಸಮಾಜಕ್ಕೆ ಹಿತವಾದ ಮೌಲ್ಯಗಳನ್ನು ನೀಡುವ ಆಶಾಕಿರಣವಾಗಿದೆ.
ಪುಸ್ತಕ ಬಿಡುಗಡೆ ಸುಲಭದ ಮಾತಲ್ಲ ಸಾಹಿತ್ಯ ಮೂಲಕ ಸುಮದುರ ಜೀವನ ಶೈಲಿಗಳ ಸಂಗ್ರಹವೇ ಕೃತಿ ಆಗಿದೆ. ಚುಕ್ಕಿ ಸಂಭ್ರಮ ಕವನ ಸಂಕಲನವು ಪ್ರೀತಿ- ಪ್ರೇಮ ಕುರಿತಾದ ಕವನ, ಹನಿಗವನಗಳ ಸಂಗ್ರಹವಿದೆ. ಮಾನವೀಯ ಮೌಲ್ಯಗಳನ್ನು ಬೆಳಸಿ ಕೊಳ್ಳುವ ಬಗ್ಗೆ ತಿಳಿಸಿದರು.
28 ನೇ. ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಬೇಕಿದ್ದು ಆದರೆ ಕಾರ್ಯಕ್ರಮಕ್ಕೆ ಕೆಲವಾರು ಕಾರಣಗಳಿಂದ ಕಾರ್ಯಕ್ರಮದ ತಯಾರಿಗೆ ಸ್ವಲ್ಪ ಹಿನ್ನೆಡೆಯಾಗಿದೆ ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯುವುದು ಖಂಡಿತ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ದಾವಣಗೆರೆ ವಿ.ವಿ ಸಿಂಡಿಕೇಟ್ ಸದಸ್ಯರು ಹಾಗೂ ಪಟ್ಟಸಾಲೆ ಸಮುದಾಯದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಕವಿ ಮಧುಸೂದನ್ ರಚನೆಯ ಲೆಟರ್ ಎನ್ನುವ ಕವನ ಬಹಳಷ್ಟು ಅದ್ಬುತ ಕಲ್ಪನೆಯಿಂದ ಕೂಡಿದೆ ಬಡತನವೆಂದರೆ ಎನ್ನುವ ಇನ್ನೊಂದು ಕವನ ಕಷ್ಟಕೋಟೆಗಳ ಮೆಟ್ಟಿ ನಿಂತು ಜೀವನ ಗೆಲ್ಲುವ ಪರಿ ಬಗ್ಗೆ ತಿಳಿಸುತ್ತದೆ.
ಒಬ್ಬ ಕವಿಗೆ ಬೇಕಾದದ್ದು ಉತ್ತಮ ಪರಿಸರವಾಗಿದೆ ಇದರಂತೆ ಅನೇಕ ಜೀವನ ಶೈಲಿಯ ಬರವಣಿಗೆಯ ಚುಕ್ಕಿ ಸಂಭ್ರಮ ಕವನ ಸಂಕಲನ ಬದುಕಿನ ಚುಕ್ಕಿಗೆ ಹತ್ತಿರವಾಗಿದೆ. ಇದು ಬರೀ ಪುಸ್ತಕವಲ್ಲ ಬದುಕಿನ ಭಂಡಾರವಾಗಿದೆ. ಕರ್ತವ್ಯದ ಒತ್ತಡದ ಬದುಕಿನ ನಡುವೆ ಉತ್ತಮ ಪುಸ್ತಕ ರಚನೆಯ ಚುಕ್ಕಿ ಸಂಭ್ರಮ ಲೋಕಾರ್ಪಣೆಯಾಗಿದೆ ಎಂದು ತಿಳಿಸಿದರು.
ಕೃತಿ ಕುರಿತು ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ ಮಗಳ ಪ್ರೀತಿಯಲ್ಲಿ ಹುಟ್ಟಿದ ಕವಿತೆ ಚುಕ್ಕಿ ಸಂಭ್ರಮಕ್ಕೆ ಪುಸ್ತಕದ ರಚನೆಗೆ ಕಾರಣವಾಗಿದೆ. ಗದ್ಯ, ಪದ್ಯ ಗಪದ್ಯ ಈ ಪುಸ್ತಕದ ರಚನೆಯಲ್ಲಿದೆ ಕವನಗಳನ್ನು ಓದುವ ಮೂಲಕ ಜನರ ಮನಸ್ಸು ಮುಟ್ಟುವಂತಿವೆ ಚಿಕ್ಕದಾದ ಹನಿಗವನಗಳು ಸಹ ಅರ್ಥಪೂರ್ಣ ಹಾಗೂ ಪ್ರಸ್ತುತ ದಿನಮಾನಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದರು.
ಕೃತಿ ರಚನಾಕಾರರಾದ ಹಗರಿಬೊಮ್ಮನಹಳ್ಳಿ ಅರಣ್ಯ ಉಪ ವಲಯ ಆರಣ್ಯಾಧಿಕಾರಿ ಕೆ ಎಂ ಮಧುಸೂದನ್ ಪ್ರಾಸ್ತವಿಕವಾಗಿ ಮಾತನಾಡಿ ಸಾಕ್ಷಿ ಎನ್ನುವ ಎರಡನೇ ತರಗತಿ ವಿದ್ಯಾರ್ಥಿನಿ ರಚಿಸಿದ ಬುಕ್ ನೋಡಿ ಮಾದರಿಯಾದ ನಾನು ಒಂದು ಕವನ ಸಂಕಲನದ ಪುಸ್ತಕ ತಯಾರು ಮಾಡಿದೆ.

ಎನ್ ಎಂ ರವಿಕುಮಾರ್ ಹಾಗೂ ಇತರರ ಸಾಹಿತಿಗಳು ಪುಸ್ತಕ ಬಿಡುಗಡೆ ಹಂತಕ್ಕೆ ಬರಲು ಎಲ್ಲಾರೂ ಸಹಕಾರ ಇದೆ. ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಲು ಎಲ್ಲಾರೂ ಬೆನ್ನು ತಟ್ಟಿದ್ದಾರೆ.
ಕವನ ಹನಿಗವನಗಳನ್ನು ಸಂಗ್ರಹವಾಗಿರುವ ಕವನ ಸಂಕಲನ ಇದಾಗಿದೆ, ಸಾಹಿತ್ಯದಿಂದ ಪ್ರೇರಣೆ, ಸಮಾಧಾನ ಇದೆ, ಸಮಾಜದ ಬದಲಾವಣೆಗೆ ಬಸವಣ್ಣ ಸೇರಿದಂತೆ ಅನೇಕ ವಚನಗಳು, ಪಕ್ಕದ ಆಂಧ್ರ ದ್ರಪ್ರದೇಶದ ಗದ್ದರ್ ಅವರ ಕ್ರಾಂತಿ ಗೀತೆಗಳು ಸಾಕ್ಷಿಯಾಗಿವೆ ಸಾಹಿತ್ಯಕ್ಕೆ ಸಮಾಜ ಬದಲಾವಣೆ ಉತ್ತಮ ಮಾರ್ಗವಾಗಿ ಕೊಂಡೋಯ್ಯುವ ಶಕ್ತಿ ಇದೆ. ತಮ್ಮ ಜೀವನದಲ್ಲಿ ಕಂಡುಂಡ ಕೆಲವು ಘಟನೆಗಳನ್ನು ಕವನ ಸಂಕಲನ ವಾಗಿ ಹೊರ ಬಂದಿದೆ.
ಕಾರ್ಯಕ್ರಮದಲ್ಲಿ ಐಮಡಿ ಶರಣಾರ್ಯರು ಸಾನಿಧ್ಯವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಎನ್ ಎಂ ರವಿಕುಮಾರ್, ತಾ ಪಂ ಮಾಜಿ ಸದಸ್ಯ ನಾಗೇಂದ್ರಪ್ಪ, ಸಾಹಿತಿ ಜಗನ್ನಾಥ, ಇತರರು ಮಾತನಾಡಿದರು.
ಆಂಗ್ಲ ಮಾಧ್ಯಮ ವೈಭವ ಶಾಲೆಯ ಮುಖ್ಯಗುರುಗಳಾದ ಪ್ರಕಾಶಗೌಡ, ಡಾ ಕರಿಬಸಪ್ಪ, ಡಾ, ಟಿ.ಓಂಕಾರಪ್ಪ, ಚುಟುಕು ಸಾಹಿತಿ ಯು ನಾಗೇಶ (ರಾಜು), ಶರಣಪ್ಪ, ಶರಣನಗೌಡ, ಉಜ್ಜಿನಿ ಭೀಮಣ್ಣ, ಆನಂದಪ್ಪ ನಾಗೇಶ್ ಎನ್ ಟಿ, ಸಾಹಿತಿ, ಸಿದ್ದಲಿಂಗಮೂರ್ತಿ, ಸುನೀಲ್ ಕುಮಾರ, ಆಲೂರು ಲೋಕೇಶ, ಸುರೇಶ, ಇಂಜಿನಿಯರ್ ಸಚಿನ್, ಕೆ ನಾಗರಾಜ ಶಿಕ್ಷಕರು, ಶಿಕ್ಷಕಿ ಶಾರದಮ್ಮ, ತಿಪ್ಪಿರಮ್ಮ ಸಕಲಪುರದ ಹಟ್ಟಿ, ಮಂಜಣ್ಣ ಶಿಕ್ಷಕರು, ಇಂದು ಕಾಲೇಜಿನ ಜಾತಪ್ಪ, ಮಹಾಂತೇಶ್, ವಾರ್ಡನ್ ಸುಮಾ, ಯು ಜಿ ತಿಪ್ಪೇಶ, ಪೊಲೀಸ್ ವಿಜಯಕುಮಾರ್, ಜನಾರ್ದನ, ಹಾಗೂ ಇತರರು ಭಾಗವಹಿಸಿದ್ದರು. ಶಿಕ್ಷಕ ನಾಗರಾಜ ಸ್ವಾಗತಿಸಿದರು, ಕೊಟ್ರೇಶ ನಿರೂಪಿಸಿದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ.ಹೊಸಹಳ್ಳಿ

