“ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ತಡೆಗೆ” – ಆರೋಗ್ಯ ಅರಿವು ಜಾಗೃತಿ.
ಶಿರೂರು ಆ.24

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಮನ್ನಿಕಟ್ಟಿ ಗ್ರಾಮದಲ್ಲಿ “ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಅರಿವು ಜಾಗೃತಿ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, “ಆರೋಗ್ಯದ ಸಿರಿತನಕ್ಕೆ ಮುಂಜಾಗ್ರತೆ ಅರಿವು ಇರಲಿ” ಸ್ವಚ್ಛತೆ ಶುದ್ಧತೆ ಮುಂಜಾಗ್ರತೆ ಆರೋಗ್ಯವಂತ ಕುಟುಂಬ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ, ಆನೆಕಾಲು ರೋಗ ಮೆದುಳು ಜ್ವರ ಡೆಂಗ್ಯೂ, ಚಿಕೂನ್ ಗುನ್ಯಾ, ಝಿಕಾ ಮಾರಣಾಂತಿಕ ರೋಗಗಳ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವುವು. ಸೊಳ್ಳೆಗಳ ಉತ್ಪತ್ತಿ ತಾಣಗಳಾದ ತಗ್ಗು ಪ್ರದೇಶ, ಚರಂಡಿ ನೀರು ನಿಲ್ಲದಂತೆ, ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಒಡೆದ ಬಾಟಲ್ ಟೈರ್ ಟ್ಯೂಬ್ ಟೆಂಗಿನ ಚಿಪ್ಪು. ಕಸ ವಿಲೇವಾರಿ ಮಾಡಬೇಕು ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಬೇಕು.

ಸೊಳ್ಳೆ ಪರದೆ ನಿರೋಧಕ ಬಳಸಬೇಕು ಮೈತುಂಬ ಬಟ್ಟೆ ಧರಿಸ ಬೇಕು ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿರಿ. ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ ಆರೋಗ್ಯ ಸಮಸ್ಯೆಗಳಿಗೆ 104 ಕರೆ ಮಾಡಿ ಪರಿಹಾರ ಪಡೆದು ಕೊಳ್ಳಬಹುದು. ಆರೋಗ್ಯ ಅಧಿಕಾರಿಗಳು ಆಶಾ ಸ್ವಯಂ ಸೇವಕರು ತಮ್ಮ ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸ ಬೇಕು ಆರೋಗ್ಯ ಇಲಾಖೆಯ ಸವಲತ್ತುಗಳ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.”ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಅರಿವು ಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುದಿಯಪ್ಪ ಬೇನಾಳ, ಮನೋಹರ ಶಿ ಡಪಳಿ, ಬರ್ಮಪ್ಪ ಹ ಗೌಡರ, ಸಂಗಪ್ಪ ಮೈ ಹುಣಶೀಕಟ್ಟಿ, ಸಂಗಪ್ಪ ರೇ ಜುಮನಾಳ, ಮಲ್ಲಪ್ಪ ಗು ಕಾಮನಕೇರಿ ಮುಖಂಡರು ಯುವಕರು ಭಾಗವಹಿಸಿದ್ದರು.