ಅನಾರೋಗ್ಯದ ಕಾರಣ ದಿಂದ ಆತ್ಮ ಹತ್ಯೆ.
ಲೊಟ್ಟನಕೇರಿ ಜು.07





ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಲೊಟ್ಟನಕೇರಿ ಗ್ರಾಮದಲ್ಲಿ ದಿನಾಂಕ 7 ಜುಲೈ 2024 ರಂದು ಆತ್ಮಹತ್ಯೆ ಪ್ರಕರಣ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ ಪ್ರಕಾಶ ತಂದೆ ಲೇಟ್ ರೇವಣಸಿದ್ದಪ್ಪ 43 ವರ್ಷ ವಾಗಿದ್ದು ಈತನು ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಚಿಕಿತ್ಸೆ ಪಡೆದರು ಗುಣವಾಗದ ಕಾರಣ ಹಗಲು ರಾತ್ರಿ ನಿದ್ದೆ ಇಲ್ಲದೆ ಜಿಗುಪ್ಸೆಗೊಂಡ ಈತನು ನನ್ನ ಸಾವಿಗೆ ನನ್ನ ಅನಾರೋಗ್ಯವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ತಮ್ಮ ಹೊಲದ ಬದುವಿನ ಹತ್ತಿರವಿರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ತನ್ನ ಅಣ್ಣನೇ ತಮ್ಮನ ಸಾವಿನ ಬಗ್ಗೆ ಯಾರ ಮೇಲೆ ಅನುಮಾನ ಇರುವುದಿಲ್ಲ ಎಂದು ಪ್ರಕರಣ ದಾಖಲಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.