“ಚೌ ಚೌ ಬಾತ್ ಪ್ರಬಂಧ ಸಂಕಲನದ ಪುಸ್ತಕ ಪರಿಚಯ”.

ಕಲ್ಲಿನಲಿ ಶಿಲೆಯನ್ನು ಕಡೆಯುವುದು ಸಹಜವೇ ಮೆಲ್ಲನೆಯೆ ಭಾವನೆಯ ತಿಳಿಯುತಿರಲು ಸಲ್ಲಿಸುತ್ತ ದೇವರಿಗೆ ಪ್ರಾರ್ಥನೆ ಮಾಡುತಲಿ ಚೆಲ್ಲದಿರು ಆಹಾರ ಲಕ್ಷ್ಮಿ ದೇವಿ….. ಕಲ್ಲನ್ನು ಶಿಲೆಯಾಗಿ ಮಾಡುವುದು ಶಿಲ್ಪಿ. ಅದು ಎಲ್ಲರಿಗೂ ತಿಳಿದಂತಹ ವಿಷಯವೇ. ಯಾವುದೇ ವ್ಯಕ್ತಿಯ ಮನಸ್ಸಿನಲ್ಲಿನ ಭಾವನೆಯನ್ನು ಮೆಲ್ಲನೆ ತಿಳಿದುಕೊಳ್ಳುವುದು ಸಹಜವೇ. ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾ. ಆ ದೇವರ ಪ್ರಸಾದವನ್ನು ಯಾವುದೇ ರೀತಿ ವ್ಯರ್ಥವಾಗುವಂತೆ ಮಾಡದೆ. ಬೇಕಾದವರಿಗೆ ಕೊಟ್ಟರೆ ಒಳಿತು. ಅದೇ ರೀತಿ ಎಲ್ಲದರ ಸಮಾಗಮ ಪ್ರಬಂಧ ಸಂಕಲನ. ಲೇಖಕಿ ಸರ್ವ ಮಂಗಳ ರವರ ಈ ಪುಸ್ತಕವು 2023ರ ಆವೃತ್ತಿಯಾಗಿದ್ದು. ಒಟ್ಟು 204 ಪುಟಗಳನ್ನು ಒಳಗೊಂಡಿದೆ. ಇದರ ಬೆಲೆ ರೂ.225 ಆಗಿದೆ. ಲೇಖಕಿಯ ಪುಸ್ತಕದ ಮುನ್ನುಡಿಯನ್ನು ಹರಿ ನರಸಿಂಹ ಉಪಾಧ್ಯಾಯ ( ವಿಹಾರಿ) ರವರು ಬರೆದಿದ್ದು ಬಹಳ ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿದೆ. ಮುನ್ನುಡಿಯನ್ನು ಓದಿದರೆ ಸಾಕು ಪುಸ್ತಕದ ಎಲ್ಲಾ ಅಂಶಗಳನ್ನು ತಿಳಿಯಬಹುದು. ಅಷ್ಟು ಅಚ್ಚುಕಟ್ಟಾಗಿ ಬರೆದಿದ್ದಾರೆ. ನಂತರ ಲೇಖಕಿಯ ನುಡಿಯಲ್ಲಿ ಅವರ ಮನದಾಳದ ಭಾವನೆಯನ್ನು ವ್ಯಕ್ತಪಡಿಸುತ್ತಾ ಎಲ್ಲರಿಗೂ ತಮ್ಮ ಅನುಭವವನ್ನು ಪ್ರಬಂಧದ ರೂಪದಲ್ಲಿ ಓದುಗರಿಗೆ ತಿಳಿಸಿದ್ದಾರೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ನಂತರದಲ್ಲಿ ಪುಸ್ತಕದಲ್ಲಿ ಪರಿವಿಡಿಯನ್ನು ನೋಡುತ್ತೇವೆ. ಆ ಪರಿವಿಡಿಯಲ್ಲಿ ಒಟ್ಟು 52 ಪ್ರಬಂಧಗಳನ್ನು ಕಾಣಬಹುದು. ಮೊದಲನೇ ಪ್ರಬಂಧವಾದ ಅಂತಹ “ಕಣ್ಣಿಗೆ ಕಾಣುವ ಹೂಗಳೆಲ್ಲ” ಇಲ್ಲಿ ಹೂ ಗಳೆಂದರೆ ಬಹಳ ಸಂತೋಷವನ್ನು ನೀಡುವಂತಹ ಸುಮಧುರವಾದಂತಹ ಅನುಭವಗಳನ್ನು ಮತ್ತು ಸಂತಸವನ್ನು ಮೂಡಿಸುವ ಕಲ್ಪನೆ ಎಂದು ತಿಳಿಸಿದ್ದಾರೆ ತಾನು ಬೆಳಗ್ಗೆ ಅರಳಿ ಬಾಡಿ ಹೋಗುವುದು ಅರಳಿದಾಗ ತನ್ನ ಸೌಂದರ್ಯವನ್ನು ಎಲ್ಲೆಡೆ ತೋರುವುದು ಎಂದು ತಿಳಿಸಿದ್ದಾರೆ . ಅದೇ ರೀತಿ ಮುಂದುವರೆದಂತೆ “ಸೋಲೇ ಗೆಲುವಿನ ಸೋಪಾನ” ಎಂಬ ಪ್ರಬಂಧವು ತನ್ನ ಶಾಲೆಯಲ್ಲಿ ಓದುತ್ತಿದ್ದ ಒಂದು ಹೆಣ್ಣು ಮಗಳಾದಂತಹ ಸೌಮ್ಯ ಎಂಬ ವಿದ್ಯಾರ್ಥಿನಿಯ ಛಲವನ್ನು ಮತ್ತು ಆಕೆ ಪರೀಕ್ಷೆಯಲ್ಲಿ ತನ್ನ ತಂದೆಯನ್ನು ಕಳೆದುಕೊಂಡು ಸೋತರು ಕಷ್ಟಪಟ್ಟು ಓದಿ ಯಾವ ರೀತಿಯಾಗಿ ಮುಂದೆ ಫಲಿತಾಂಶದಲ್ಲಿ ಯಶಸ್ವಿಯನ್ನು ಪಡೆಯುತ್ತಾಳೆ ಎಂಬುದನ್ನು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಬರೆದಿದ್ದಾರೆ. ಸೌಮ್ಯಳ ತಂದೆಯ ಸಾವಿನ ಸೋಲು ಪರೀಕ್ಷೆಯಲ್ಲಿನ ಹೆಚ್ಚಿನ ಅಂಕ ಪಡೆದು ಗೆಲ್ಲುತ್ತಾಳೆ ಎಂಬುದನ್ನು ತಿಳಿಸಿದ್ದಾರೆ. ಆನಂತರದಲ್ಲಿ “ಚೌ ಚೌ ಬಾತ್” ಎಂಬ ಪ್ರಬಂಧದಲ್ಲಂತೂ ಚೌ ಚೌ ಬಾತ್ ಎಂದರೇನು? ಅದು ಖಾರಬಾತ್ ಮತ್ತು ಕೇಸರಿ ಬಾತ್ ನ ಮಿಶ್ರಣ ಎಂಬುದನ್ನು ತಿಳಿಸಿದ್ದಾರೆ. ಆಹಾರ ಪದ್ಧತಿಗಳಲ್ಲಿ ಕೆಲವು ತಿನಿಸುಗಳಿಗೆ ಕೆಲವು ತಿನಿಸು ಇದ್ದರೆ ಮಾತ್ರ ಚಂದ ಎಂಬುದನ್ನು ತಿಳಿಸಿದ್ದಾರೆ. ವಿವಿಧ ರೀತಿಯ ಭಕ್ಷ ಭೋಜನಗಳನ್ನು ಸೇವಿಸಿದಾಗ ಉಂಟಾಗುವ ಆತ್ಮತೃಪ್ತಿಯಂತೆ ಹಲವಾರು ಅನುಭವಗಳು ಮಾನಸಿಕ ತೃಪ್ತಿ ನೀಡುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆನಂತರದಲ್ಲಿ ಬರೆದಿರುವಂತಹ ಪ್ರಬಂಧ ವೆಂದರೆ ” ಮಿಕ್ಸಿ ಆನ್ ಮಾಡಿದಾಗ ” ತಮ್ಮ ಮಕ್ಕಳ ಹುಟ್ಟು ಹಬ್ಬದ ಆಚರಣೆಯಲ್ಲಿ ಆದಂತಹ ಒಂದು ಹಾಸ್ಯದ ಘಟನೆಯನ್ನು ಓದು ಗರ ಮೊಗದಲ್ಲಿ ನಗುವು ಮೂಡುವಂತೆ ಬರೆದಿದ್ದಾರೆ. ಅಡಿಗೆ ಮಾಡುವಾಗ ತನ್ನ ಮಗು ಬಂದು ಮಿಕ್ಸಿ ಆನ್ ಮಾಡಿದಾಗ ಮುಖಕ್ಕೆ ಖಾರ ಎಲ್ಲ ಆಗಿ ಯಾವ ರೀತಿ ಹಾಸ್ಯಸ್ಪದವಾಗಿತ್ತು ಎಂದು ಈ ಪುಟ್ಟ ಪ್ರಬಂಧಲ್ಲಿ ತಿಳಿಸಿದ್ದಾರೆ . “ಬೆರಕೆ ಸೊಪ್ಪು” ಈ ಪ್ರಬಂಧವನ್ನು ಓದುತ್ತಾ ಹೋದರೆ ಸೊಪ್ಪುಗಳಲ್ಲಿ ಇರುವಂತಹ ವಿಧಾನಗಳನ್ನು ತಿಳಿಯಬಹುದು.

ಬಹಳಷ್ಟು ಪ್ರಕಾರಗಳು ಇದ್ದರೂ ಸಹ ಯಾರು ಸಹ ಈ ಸೊಪ್ಪುಗಳನ್ನು ಬಳಸುತ್ತಿಲ್ಲ. ಸೊಪ್ಪುಗಳ ಹೆಸರನ್ನು ಕೇಳಿಯೇ ಇಲ್ಲ ಎಂಬುದು ಪ್ರಸ್ತುತ ದಿನಮಾನಗಳಲ್ಲಿ ಸೊಪ್ಪುಗಳ ಹೆಸರು ತಿಳಿದಿಲ್ಲ. ಆರೋಗ್ಯವನ್ನು ನೀಡುವಂತಹ ಸೊಪ್ಪಿನ ಬಗ್ಗೆ ಚರ್ಚೆ ಮಾಡಿದಾಗ ಗೊತ್ತಾಗುತ್ತೆ. ಈ ಸೊಪ್ಪಿಗಳ ಮಹತ್ವವನ್ನು ಇಲ್ಲಿ ತಿಳಿಸಿದ್ದಾರೆ. ಹೀಗೆ ಮುಂದುವರೆಯುತ್ತಾ ಹೋದರೆ ಹಲವಾರು ಪ್ರಬಂಧಗಳನ್ನು ಉಪಯುಕ್ತವಾಗಿ ಬರೆದಿದ್ದಾರೆ . ಅವುಗಳಲ್ಲಿ “ತಾಳ್ಮೆ ಇಲ್ಲದ ಜೀವನ” ಇಂದಿನ ಹದಿಹರೆಯದ ಮಕ್ಕಳಲ್ಲಿ ತಾಳ್ಮೆ ಎಂಬುದು ಇಲ್ಲ ಎಂಬುದನ್ನು ತಿಳಿಸಿದ್ದಾರೆ ಅಂದರೆ ಆಫ್ರಿ ನಳ ಪ್ರಸಂಗ ಒಂದು ಘಟನೆಯಾಗಿ ತಿಳಿಸಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಒಲವನ್ನು ನೀಡಿ ಅವರ ಬೆಳವಣಿಗೆಗೆ ಸಹಕಾರ ನೀಡುವಂತೆ ಆಗಬೇಕು. ಒಳ್ಳೆಯ ಸಂಸ್ಕಾರ ನೀಡುವಂತ ಕೆಲಸಗಳನ್ನು ಪೋಷಕರು ಮಾಡಬೇಕಿದೆ ಎಂಬುದನ್ನು ತಿಳಿಸಿದ್ದಾರೆ. ಪ್ರಬಂಧಗಳಲ್ಲಿ “ಆಪತ್ಬಾಂಧವ” ಎಂಬ ಪ್ರಬಂಧವು ಒಂದು ಹೆಣ್ಣು ಮಗುವಿನ ಜೀವ ಉಳಿಸಿದ ವಿಚಾರವನ್ನು ಫೋನ್ ಕರೆಗಳ ಸಂಭಾಷಣೆಯನ್ನು ತಿಳಿಸಿದ್ದಾರೆ. ಬದಲಾದ ಜೀವನ ಶೈಲಿ ಎಂಬ ಪ್ರಬಂಧದಲ್ಲಿ ಹಿಂದೆ ಇದ್ದಂತಹ ಆರೋಗ್ಯದ ಸಮಸ್ಯೆಗಳು ಇಲ್ಲದಂತೆ ಬಾಳಿದಂತಹ ಇಂದು ಆರೋಗ್ಯ ಸಮಸ್ಯೆಗಳಲ್ಲಿ ಬಳಲುತ್ತಿರುವಂತಹ ವ್ಯತ್ಯಾಸಗಳನ್ನು ತಿಳಿಸಿದ್ದಾರೆ.” ಅನುಭವವು ಪ್ರಬಂಧವಾಗಿ ಬರಹದಲ್ಲಿ ಬರದೆಹೇನು ಓದುತಲಿ ತಿಳಿಯಿರಿ ಜೀವನದ ಕೆಲ ಅಂಶಗಳ ಬಹಳ ರೀತಿಯ ಕಷ್ಟಗಳ ಕಂಡಿಹರು ಅರಿತು ನೀವು ಬದಲಾಗುತಿರಿ ನೋವು ಯಾರಿಗೆ ನೀಡದಂತೆ ” ಈ ರೀತಿ ಕವನದ ಅಂಶಗಳನ್ನು ಬರಹದಲ್ಲಿ ಅಳವಡಿಸಿಗೊಂಡಿದ್ದಾರೆ. ಹೀಗೆ ಮುಂದುವರೆಯುತ್ತಾ ಹೋದರೆ ತೆರೆದ ಶೌಚಾಲಯದ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಮೌಲ್ಯಯುತವಾದ ಶಿಕ್ಷಣದ ಬಗ್ಗೆ ತಿಳಿಸಿದ್ದಾರೆ. ನಿತ್ಯ ಒಂದು ಒಳ್ಳೆ ಕೆಲಸವನ್ನು ಮಾಡಬೇಕೆಂಬುದನ್ನು ತಿಳಿಸಿದ್ದಾರೆ. ಅವರ ಅನುಭವಗಳನ್ನು ಒಳಗೊಂಡಂತಹ “ಅನ್ನದ ಋಣ” ಎಂಬ ಪ್ರಬಂಧದಲ್ಲಿ ಯಾವ ಸಮಯದಲ್ಲಿ ಎಲ್ಲಿ ಯಾವ ರೀತಿಯಾಗಿ ಅನ್ನದ ಋಣ ಇರುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ ಅದನ್ನು ಅವರ ಕೆಲಸದಲ್ಲಿ ಆದ ಅನುಭವವನ್ನು ತಿಳಿಸಿದ್ದಾರೆ. ಸುವರ್ಣ ಗೆಡ್ಡೆಯ ರುಚಿಯ ಬಗ್ಗೆ ಅದರ ಉಪಯುಕ್ತದ ಬಗ್ಗೆ ತಿಳಿಸಿದ್ದಾರೆ. ಆನಂತರದಲ್ಲಿ ಕಟ್ಟಕಡೆಯದಾದಂತಹ ದೆಹಲಿಯ ಸುತ್ತಮುತ್ತ ಅವರ ಪ್ರವಾಸದ ಅನುಭವಗಳನ್ನು ಎಳೆ ಎಳೆಯಾಗಿ ತಿಳಿಸಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಸರ್ವ ಮಂಗಳ ಜಯರಾಮ್ ರವರು ವೃತ್ತಿಯಲ್ಲಿ ಶಿಕ್ಷಕಿಯಾದರು ಪ್ರವೃತ್ತಿಯಲ್ಲಿ ಲೇಖಕಿಯಾಗಿ ತಮ್ಮ ಅನುಭವಗಳನ್ನು ಪ್ರಬಂಧಗಳ ರೂಪದಲ್ಲಿ ಓದುಗರ ಮನಮುಟ್ಟುವಂತೆ ಮಾಡಿದ್ದಾರೆ. ಹಲವಾರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿರುವ ಇವರು ಹೀಗೆ ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಾ ಸಾಹಿತ್ಯ ಲೋಕಕ್ಕೆ ಹಲವಾರು ಪುಸ್ತಕಗಳನ್ನು ಲೋಫರ್ಪಣೆ ಮಾಡಲೆಂದು ಕೇಳಿಕೊಳ್ಳುತ್ತಾ ಇವರ ಭವಿಷ್ಯ ಉಜ್ವಲವಾಗಿರಲಿ ಇಂದು ಆಶಿಸುತ್ತಾ ಶುಭವಾಗಲಿ ಎಂದು ಕೋರುತ್ತೇನೆ. ಜೈ ಹಿಂದ್ ಜೈ ಭಾರತ್ ಮಾತೆ.
ಶ್ರೀಮತಿ ಹೆಚ್ ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.