ಬಿಜೆಪಿ ಬೆಂಬಲಿತ 6ಜನ ಸದಸ್ಯರು ಕಾಂಗ್ರೇಸ್ ಗೆ ಸೇರ್ಪಡೆ — ಅಮರಾವತಿ ಗ್ರಾಮ ಪಂಚಾಯತ ಕೈ ಮಡಿಲಿಗೆ.
ಅಮರಾವತಿ ಆಗಷ್ಟ. 3

ಹುನಗುಂದ ತಾಲೂಕಿನ ಸಮೀಪದ ಅಮರಾವತಿ ಗ್ರಾಮ ಪಂಚಾಯತಿಯ ೨ನೆಯ ಅವಧಿಯ ನೂತನ ಅಧ್ಯಕ್ಷರಾಗಿ ಬಸವರಾಜ ವೀರಭದ್ರಪ್ಪ ಕಮತರ ಉಪಾಧ್ಯಕ್ಷರಾಗಿ ನಾಗರತ್ನಾ ಆಸಂಗೆಪ್ಪ ಮಾದರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಜೆಪಿಯಲ್ಲಿ ಸ್ಪಷ್ಟ ಬಹುಮತವಿದ್ದರೂ ಕೂಡಾ ೬ ಜನ ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್ ಪಕ್ಷವನ್ನು ಸೇರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿರೋದು ವಿಶೇಷ.ಅಮರಾವತಿ ಗ್ರಾ.ಪಂಯಲ್ಲಿ ೧೧ ಬೆಜಿಪಿ ಬೆಂಬಲಿತ ಸದಸ್ಯರು ೩ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು.೨ನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮೀಸಲಿದ್ದರೇ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಕ್ಕೆ ಮೀಸಲಾಗಿತ್ತು.ಮೊದಲ ಅವಧಿಯಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಮಾಡಿದ್ದರೂ ಸಧ್ಯ ತಿಮ್ಮಾಪೂರದ ೩ ಜನ ಸದಸ್ಯರು ಮತ್ತು ಅಮರಾವತಿಯ ೩ ಸದಸ್ಯರು ಏಕಾಏಕಿಯಾಗಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಈ ಬಾರಿ ಅಮರಾವತಿ ಗ್ರಾ.ಪಂ ಕಾಂಗ್ರೆಸ್ ಮಡಿಲಿಗೆ ಹೋಗಿದೆ.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಸವರಾಜ ಕಮತರ ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನಾ ಮಾದರ ನಾಮಪತ್ರ ಸಲ್ಲಿಸಿದರು.ಇವರ ವಿರುದ್ದ ಯಾವದೇ ನಾಮಪತ್ರ ಸಲ್ಲಿಕೆಯಾಗದೇ ಇರೋದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.ಸಂಭ್ರಮಾಚರಣೆ-ಕಾಂಗ್ರೆಸ್ ಬೆಂಬಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿನಂದನೆಗಳನ್ನು ಸಲ್ಲಿಸಿ ಸಿಹಿ ಹಂಚಿ,ಪರಸ್ಪರರು ಗುಲಾಲು ಎರಚಿ,ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಈ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,ಮುಖಂಡರಾದ ಮೃತ್ಯುಂಜಯ ಕೊಪರದ ಬಸವರಾಜ ಗೌಡರ,ಮಹಾಂತೇಶ ಭೋವಿ,ಸೋಮಣ್ಣ ಗೌಡರ,ಹುಲ್ಲಪ್ಪ ಹೊಸಮನಿ,ಶ್ರೀಕಾಂತ ಭಜಂತ್ರಿ,ಕುಮಾರ ತೋಪಲಕಟ್ಟಿ,ಮಹಾಂತೇಶ ಹಳೇಮನಿ,ಮಾರುತಿ ಚಲವಾದಿ,ಈಶ್ವರಗೌಡ ಗೌಡರ,ಆಸಂಗೆಪ್ಪ ಮಾದರ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ