ರೈತರ ನಷ್ಟಕ್ಕೆ ಕಾರಣರಾದ ಕಂಪನಿಗಳ ವಿರುದ್ಧ – ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ.
ರಾಯಚೂರು ಅ.24

ಮಾನ್ವಿ ತಾಲೂಕಿನ ವಿವಿಧ ಹಳ್ಳಿಗಳ ರೈತರಿಗೆ ನಕಲಿ ಮತ್ತು ಕಳಪೆ ಗುಣಮಟ್ಟದ ಬತ್ತದ ಬೀಜ ಮಾರಾಟವಾದ ಪರಿಣಾಮ ಸಾವಿರಾರು ರೈತರು ಬೆಳೆ ನಷ್ಟದ ಭೀತಿಯಲ್ಲಿ ಬದುಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ದಲಿತ ಸೇನೆ ಮತ್ತು ಜನಸೇವಾ ಫೌಂಡೇಶನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಡಾ, ಜಾವೀದ್ ಖಾನ್ ಅವರು ಹೇಳಿದರು.

“ನೀಲಕಂಠೇಶ್ವರ ಸೀಡ್ಸ್ ಕಾರ್ಪೊರೇಷನ್ನ ಕಳಪೆ ಬತ್ತದ ಬೀಜಗಳಿಂದ ರೈತರಿಗೆ ನಷ್ಟ ಉಂಟಾಗಿದೆ. ಇಂತಹ ನಕಲಿ ಬೀಜ ಮಾರಾಟಕ್ಕೆ ಕಾರಣರಾದ ಕಂಪನಿಗಳ ಪರವಾನಗಿ ರದ್ದು ಪಡಿಸಿ, ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ತನಿಖೆ ಮಾಡಬೇಕು. ರೈತರ ನಷ್ಟಕ್ಕೆ ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕು,” ಎಂದು ಆಗ್ರಹಿಸಿದರು.ಜನಸೇವಾ ಫೌಂಡೇಶನ್ ಮಾನ್ವಿ ತಾಲೂಕು ಅಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ ಮಾತನಾಡಿ.
“ಮಾನ್ವಿ ತಾಲೂಕಿನ 2000 ಎಕರೆ ನೀರಾವರಿ ಭತ್ತದ ಹೊಲಗಳಿಗೆ ಕಳಪೆ ಬೀಜ ವಿತರಣೆ ಆಗಿದ್ದು, ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳು ಮೌನ ವಹಿಸಿರುವುದು ಖಂಡನೀಯ. ರೈತರ ಹಿತಕ್ಕಾಗಿ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಯಲಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು, ಬಾಬು ರಾವ್, ರಾಜಾಸಾಬ್ ನೀರಮಾನ್ವಿ, ಸಿದ್ದರೆಡ್ಡಿ, ಪ್ರೊ, ಚಂದ್ರಶೇಖರ, ಕೃಷ್ಣ ಮಾರ್ಷಲ್, ಸುರೇಶ ಚಕ್ಕಸುಗೂರು, ಮೌಲ, ಆಜೀತ್, ಗೊಕುಲ್ ಸೇರಿದಂತೆ ದಲಿತ ಸೇನೆ ಹಾಗೂ ಜನಸೇವಾ ಫೌಂಡೇಶನ್ ಕಾರ್ಯಕರ್ತರು, ರೈತರು ಹಾಗೂ ಸಂಘಟನೆಯ ನಾಯಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

