2021 ರ ಜನಗಣತಿಯನ್ನು ಮುಂದೂಡಿದ ಭಾರತೀಯ ರೇಜಿಸ್ಟ್ರಾರ್ ಜನರಲ್ (RGI)….!

2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಈಗ 2024-25ಕ್ಕೆ ಮುಂದಿನ ಆದೇಶ ಬರುವವರೆಗೂ ಮುಂದೂಡಲಾಗಿದೆ.

ಈ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ , ವ್ಯಾಕ್ಸಿನ್‌ ಡ್ರೈವ್ ಲಾಕ್ ಡೌನ್ ಇತ್ಯಾದಿ ಕಾರಣಗಳಿಗಾಗಿ ಮುಂಜಾಗ್ರತಾ ಕ್ರಮವಾಗಿ ಜನಗಣತಿಯನ್ನು ಆರಂಭಿಸಲು ಸಾಧ್ಯವಾಗಿಲ್ಲ, ಅಲ್ಲದೆ ನಂತರದ ಜನಗಣತಿ ನಡೆಸುವ ಅವಧಿಯನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ಭಾರತೀಯ ರಿಜಿಸ್ಟ್ರಾರ್ ಜನರಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತೀಯ ಸಂವಿಧಾನದಲ್ಲಿ ಜನಗಣತಿ ನಿಯಮದ ಪ್ರಕಾರ , 1990 ರ ನಿಯಮ 8(iv) ರ ಪ್ರಕಾರ, ಜನಗಣತಿ ಆಯುಕ್ತರು ಸೂಚಿಸಿದ ದಿನಾಂಕದಿಂದ ಆಡಳಿತ ಘಟಕಗಳ ಗಡಿಗಳನ್ನು ನಿರ್ಧರಿಸಲಾಗುತ್ತದೆ. ಇದು ಜನಗಣತಿ ಉಲ್ಲೇಖ ದಿನಾಂಕದಿಂದ ಒಂದು ವರ್ಷಕ್ಕಿಂತ ಮುಂಚಿತವಾಗಿರಬಾರದು ಎಂಬ ನಿಯಮವಿದೆ. ಹಾಗಾಗಿ ಗಡಿಗಳ ನಿರ್ಧಾರವಾಗದೇ ಜನಗಣತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ರೆಜಿಸ್ಟರ್ ಜನರಲ್ ಹೇಳಿದೆ.

ಆದ್ದರಿಂದ ಜನಗಣತಿಗೂ ಮುಂಚೆಯೇ ಮಾಡಬೇಕಿರುವ ಆಡಳಿತಾತ್ಮಕ ಗಡಿಗಳನ್ನು ನಿರ್ದಿಷ್ಟೀಕರಿಸುವ ಕೆಲಸವನ್ನು ಭಾರತೀಯ ರಿಜಿಸ್ಟರ್ ಜನರಲ್ (RGI) ಕಚೇರಿಯು ಜೂನ್ 30, 2023 ರವರೆಗೆ ಜನಗಣತಿಯ ದಿನಾಂಕವನ್ನು ವಿಸ್ತರಿಸಿದೆ .

2023ರಲ್ಲಿ ಹಲವು ರಾಜ್ಯ ಚುನಾವಣೆಗಳಿವೆ. 2024ಕ್ಕೆ ಲೋಕಸಭಾ ಚುನಾವಣೆಯೂ ನಡೆಯಬೇಕಿದೆ. ಅಲ್ಲದೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮಾಡಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಜನಗಣತಿಯು ವಿಳಂಬವಾಗುತ್ತಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರವು NRC,CAA, ಮತ್ತು NPR ಮಾಡಲು ಮುಂದಾದಾಗ ಅದರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದವು. ಅದು ಸಹ ಜನಗಣತಿಗೆ ಮಾರಕವಾಗಿ ಪರಿಣಮಿಸಿದೆ . ಆದ್ದರಿಂದ ಈ ಎಲ್ಲಾ ಕಾರಣಗಳಿಂದಾಗಿ ಭಾರತೀಯ ರೆಜಿಸ್ಟರ್ ಜನರಲ್ ದಿನಾಂಕವನ್ನು ಮುದೂಡಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button