ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಿ – ಯಶವಂತರಾಯಗೌಡ ಪಾಟೀಲ.
ಇಂಡಿ ಜೂನ್.13

ಇಂಡಿ ನಾಡಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು ಮತ್ತು ಮಾನವೀಯ ಸಂಬಂಧಗಳನ್ನು ಸದೃಡಗೊಳಿಸಿ ಮನುಕುಲವನ್ನು ಗೌರವಿಸಲು ದೇವರು ಅನುಗ್ರಹ ನೀಡುವಂತೆ ಹಜ್ ಯಾತ್ರಿಕರು ಪ್ರಾರ್ಥಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಅವರು ಪಟ್ಟಣದಲ್ಲಿ ಹೊಸುರ ಕುಟುಂಬದ ವತಿಯಿಂದ ಹಜ್ ಯಾತ್ರಿಕರಿಗೆ ಹಮ್ಮಿಕೊಂಡ ಶುಭ ಹಾರೈಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಸನ್ಮಾನ ಮಾಡಿ ಗೌರವ ನೀಡುತ್ತಾ ಬಂದಿದ್ದು ಕೊರೂನಾದಿಂದ ಕೆಲವು ವರ್ಷಗಳ ಕಾಲ ಯಾತ್ರೆ ರದ್ದು ಆಗಿದ್ದರಿಂದ ಈ ಬಾರಿ ಮತ್ತೆ ಇಂಡಿ ಪಟ್ಟಣದಿಂದ ಹಲವಾರು ಜನರು ಯಾತ್ರೆಗೆ ತೆರಳುತ್ತಿದ್ದಾರೆ.ಅವರೆಲ್ಲರಿಗೂ ಸನ್ಮಾನಿಸಿ,ಗೌರವಿಸಿದ್ದು ನಮ್ಮ ಸೌಭಾಗ್ಯ ಎಂದು ಹೇಳಿದರು. ಮುಸ್ಲಿಮರು ಹೃದಯಪೂರ್ವಕ ಪ್ರಾರ್ಥನೆ ಸಲ್ಲಿಸಲು ಮೆಕ್ಕಾಗೆ ಪ್ರಯಾಣಿಸುವ ಹಜ್ ಯಾತ್ರೆ ಜಗತ್ತಿನಲ್ಲಿ ಪ್ರತಿವರ್ಷ ನಡೆಯುವ ಮಹಾನ್ ಯಾತ್ರೆ. ಪ್ರತಿಯೊಬ್ಬ ಸಂಪ್ರದಾಯವಾದಿ ಮುಸ್ಲಿಮರು ಹಜ್ ಯಾತ್ರೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕಾದ ಕರ್ತವ್ಯವಾಗಿದೆ. ಮುಸ್ಲಿಂ ಜನರ ಒಗ್ಗಟ್ಟಿನ ಸಂಕೇತ ಮತ್ತು ಅಲ್ಲಾಗೆ ಅವರ ಅರ್ಪಣೆ ಹಜ್ ಯಾತ್ರೆಯಾಗಿದೆ.ದೇಶದಲ್ಲಿ ಕೋಮು ಸೌಹಾರ್ದತೆ ಇರಲು ಎಲ್ಲಾ ಯಾತ್ರಿಗಳು ಪ್ರಾರ್ಥನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಮೌಲಾನಾ ಶಾಕಿರಹುಸೇನ ಕಾಸ್ಮಿ, ಅಬುತಾಲಿಬ ಹೊಸೂರ,ಜಿಓಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಲ್ಲಾಬಕ್ಷ ವಾಲಿಕಾರ,ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅರ್ಜುನ ಲಮಾಣಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ, ಅಸ್ಲಂ ಪಟೇಲ, ಖಲಿಲ್ ಅತ್ತಾರ, ಬಾಶಾ ಕುಮಸಗಿ, ಬಂದೆನವಾಜ್ ಹುಸೆನ ಟೇಲರ್, ಹಸನ ಮುಜಾವರ, ಬಾಶಾ ಬೋರಾಮಣಿ, ಇಬ್ರಾಹಿಂ ಮಕಾನದಾರ, ಶಫೀಕ್ ಗಾಲಿಬಗೋಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.