ಭಾರಿ ಮಳೆಗೆ ನಾಲವತ್ತು ಟನ ಪಪ್ಪಾಯಿ ಬೆಳೆ ನಾಶ ರೈತ ಶಿವಣ್ಣ ಕಂಗಾಲು.
ಬೆಣ್ಣಿಕಲ್ಲು ಏಪ್ರಿಲ್.24

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಮ ಪಂಚಾಯತಿಯ ಬೆಣ್ಣಿಕಲ್ಲು ಗ್ರಾಮದಲ್ಲಿ ಸೋಮವಾರ ರಂದು ಸುಮಾರು 4.50 ರ ಸಮಯದಲ್ಲಿ ಭಾರಿ ಗಾಳಿ ಹಾಗೂ ಮಳೆಗೆ ಬೆಣ್ಣಿಕಲ್ಲು ಗ್ರಾಮದ ರೈತ ಮಲ್ಲಾಪುರದ ಶಿವಣ್ಣ ಈ ರೈತ ತನ್ನ ಜಮೀನು ಸರ್ವೆ ನಂಬರ್ 92 ಮತ್ತು 93 ಹೊಲದಲ್ಲಿ ಸರಿ ಸುಮಾರು ಎರಡು ಸರ್ವೆ ನಂಬರಿನ ಒಟ್ಟು ಜಮೀನು 5 ಎಕ್ಕರೆ 80 ಸೆಂಟ್ಸ್ ನಲ್ಲಿ 4000 ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳನ್ನು ನಾಟಿ ಮಾಡಿದ್ದು ಈ ಫಲಕ್ಕೆ ಖರ್ಚುನ್ನು ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಸಾಲ ಸೂಲ ಮಾಡಿ ಬಂಡವಾಳ ಬೆಳೆಯ ಮೇಲೆ ಹಾಕಿ ಪಸಲು ಕೈಗೆ ಸಿಗುವ ಸಂದರ್ಭದಲ್ಲಿ ಸೋಮವಾರ ರಂದು ಭಾರಿ ಗಾಳಿ ಮಳೆಗೆ ಸರಿ ಸುಮಾರು ಏಳು ನೂರು ಗಿಡಗಳು ನಾಶವಾಗಿವೆ ಹಾಗೂ 40 ಟನ್ ಪಪಾಯಿ ಕಾಯಿ ನೆಲ್ಕೂರುಳಿವೆ, ಹಾಗೂ ಕಟ್ಟಾವ್ ಗೆ ಬಂದ ಫಲವು ಮಳೆಯ ರಬಸಕ್ಕೆ ಪಪಾಯಿ ಕಾಯಿಯ ಮೇಲೆ ಬಿದ್ದ ಮಳೆ ರಬಸಕ್ಕೆ ಸಂಪೂರ್ಣವಾಗಿ ಫಲ ಬಂದ ಕಾಯಿಯಿಂದ ಹಾಲು ಸೋರಿ ಕಾಯಿ ಮಾರಾಟಕ್ಕೂ ಬರದೇ ಸಂಪೂರ್ಣ ನಷ್ಟ ಹೊಂದಿವೇ ಎಂದು ರೈತ ಶಿವಣ್ಣ ತಮ್ಮ ಅಳಲನ್ನು ನಮ್ಮ ವಾಹಿನಿಗೆ ಹಂಚಿ ಕೊಂಡಿದ್ದಾನೆ.

ಈ ರೈತನ ಗೋಳನ್ನು ಮಾನ್ಯ ಜಿಲ್ಲಾಧಿಕಾರಿಗಳು ವಿಜಯನಗರ, ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಾ ದಂಡಾಧಿಕಾರಿಗಳು,ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು,ಮತ್ತು ಮಾನ್ಯ ಶಾಸಕರಾದ ನೇಮರಾಜ್ ನಾಯ್ಕ್ ರವರು ಇವರ ಪ್ರಕೃತಿಯ ವಿಕೋಪದ ಅಡಿಯಲ್ಲಿ ಗಾಳಿ ಮಳೆಗೆ ಹಾನಿ ಯಾಗಿರುವಂತಹ ಬೆಳೆ ನಷ್ಟ ಸರ್ಕಾರವು ಬರಿಸಲಿ ಎಂದು ರೈತ ಶಿವಣ್ಣ ಗೋಳುಗೆ ಸರ್ಕಾರವು ತಾನು ಹಾಕಿದಂತ ಬಂಡವಾಳವಾದರು ಸಿಗಲಿ ಎನ್ನುವುದು ನಮ್ಮ ವಾಹಿನಿಯ ಉದ್ದೇಶವಾಗಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ