ಯತ್ನಾಳ ವಿರುದ್ಧ ಏಕವಚನದಲ್ಲಿ ಗುಡುಗಿದ – ಕಾಶಪ್ಪನವರ.
ಹುನಗುಂದ ಏಪ್ರಿಲ್.24

ಅಖಂಡ ವಿಜಯಪುರ ಜಿಲ್ಲಾದಾಗ ಒಂದು ಗೊಡ್ಡು ಎಮ್ಮಿ ಐತಿ ಗೊತೈತಿಲ್ಲ. ಸೂಟ್ ಬೂಟ್,ಕೇಸರಿ ಶಾಲು ಹಾಕೊಂಡು ಅಡ್ಡಾಡ್ತಾನಾ. ಎಲ್ಲಾ ಜಾತಿಗೂ ಬೈಯ್ತಾನಾ ಅಂವಾ, ಯಾರನ್ನೂ ಬಿಟ್ಟಿಲ್ಲ. ಹಾಲುಮತ, ಪಂಚಮಸಾಲಿ, ಅಲ್ಪ ಸಂಖ್ಯಾತರಿಗೆ ಓಟ್ ಹಾಕಬೇಡ ಅಂತಾ ಬಾಯಿಗೆ ಬಂದಂತೆ ಒದರಕೊಂತ ಅಡ್ಡಾಡುತ್ತಿದ್ದಾನೆ. ಇದೇ ರೀತಿ ಒದರಕೊಂತ ಹೋದರೆ ಈಶ್ವರಪ್ಪಗೆ ಆದ ಗತಿ ನಿನಗೆ ಆಗುತ್ತದೆ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.ಪಟ್ಟಣದ ವಿ.ಮ.ಸರ್ಕಲ್‌ದಲ್ಲಿ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಡಿಯಲ್ಲಿ ನಡೆದ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ನೀನೇನು ಪಂಚಮಸಾಲಿಗೆ ನಿನ್ನೊಬ್ಬನೇ ಹುಟ್ಟಿಲ್ಲ, ನಿನ್ನ ಹಿಂದೆ ಪಂಚಮಸಾಲಿ ಸಮಾಜ ನಿಂತಿಲ್ಲ. ನಿಂದ್ರೋದು ಇಲ್ಲ, ಬಾಯಿ ಬಂದ್ ಮಾಡಿದ್ರೇ ಬಹಳ ಚೋಲೋ, ಇದೇ ರೀತಿ ಒದರಿದಿ ಅಂದ್ರ ಈಶ್ವರಪ್ಪಗಾದ ಗತಿ ನಿನಗೂ ಆಗುತ್ತೇ. ನೀನು ಜೆಡಿಎಸ್‌ನಲ್ಲಿ ಇದ್ದಾಗ ಟಿಪ್ಪು ಸುಲ್ತಾನ ಟೊಪ್ಪಿಗೆ ಹಾಕ್ಕೋಂಡಿ ಮತ್ತ ಖಡ್ಗನೂ ಹಿಡದಿ. ಎಲ್ಲಾ ಮಾಡಿ ಈಗ ಬ್ಯಾಡಗೈತಿ, ಅವರಿಗೆ ಓಟ್ ಹಾಕಬೇಡ ಇವರಿಗೆ ಓಟ್ ಹಾಕಬೇಡಿ ಅಂತಾ ಒದರಕತ್ತಿ, ಎಮ್ಮಿ ಕರ ಒದರಿ ಒದರಿ ಸಾಯತಂತ ಅದೇ ರೀತಿ ನಿನ್ನ ಪರಸ್ಥಿತಿ ಆಗುತೈತಿ ಎಂದು ಯತ್ನಾಳ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗ ಲ್ಲ ಹುನಗುಂದ.