ಮರೋಳ ಗ್ರಾಮದಲ್ಲಿ, 133 ನೇ ಡಾ. ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ.
ಹುನಗುಂದ ಏಪ್ರಿಲ್.29

ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ತಮ್ಮ ಆಯುಷ್ಯದ 10 ವರ್ಷ ಈ ದೇಶದ ಸಂವಿಧಾನ ರಚನೆ ಮಾಡಲು ಮೀಸಲಿಟ್ಟು ಜಗತ್ತು ಪ್ರಸಿದ್ದ ಸಂವಿಧಾನ ನೀಡಿದ ಮಹಾನಾಯಕರು ಎಂದು ಕರ್ನಾಟಕ ಸತ್ಯ ಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.ಸೋಮವಾರ ತಾಲೂಕಿನ ಮರೋಳ ಗ್ರಾಮದ ಭೀಮ ಘರ್ಜನೆ ಯುವಕ ಸಂಘದಿಂದ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 133. ನೆಯ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಈ ದೇಶದ ಆರ್ಥಿಕ ಸುಭದ್ರತೆಗಾಗಿ ರಸರ್ವ್ ಬ್ಯಾಂಕ್ ಪರಿಕಲ್ಪನೆಯನ್ನು ನೀಡಿದವರು, ಮೊದಲ ಸಂಸತ್ತಿನಲ್ಲಿ ಕಾರ್ಮಿಕ ಸಚಿವರಾಗಿದ್ದ ವೇಳೆಯಲ್ಲಿ ದೇಶದ ಆಣೆಕಟ್ಟುಗಳ ಪರಿಕಲ್ಪನೆಯನ್ನು ನೀಡಿ ಬಾಕ್ರಾನಂಗಲ್, ಹೊರಾಕುಡ್, ಕೃಷ್ಣಾ ಮೇಲ್ದಂಡೆ ಸೇರಿದ್ದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದವರು ಡಾ.ಬಾಬಾಸಾಹೇಬರು, ಪ್ರತ್ಯೇಕ ಮೀಸಲು ಕ್ಷೇತ್ರದಲ್ಲಿ ದಲಿತರು ದಲಿತರಿಗೆ ಮತ ಹಾಕುವ ಕಾನೂನು ಜಾರಿಗೆ ತರಲು ಬ್ರಟಿಷ್ ಅವಧಿಯಲ್ಲಿ ಪ್ರಯತ್ನಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಸಮುದಾಯದ ಯುವಕರು ದುಶ್ಛಟಗಳಿಗೆ ದಾಸರಾಗದೇ ಅದೇ ಹಣವನ್ನು ಕ್ರೋಢೀಕರಿಸಿ ಸಮುದಾಯ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೀಡಿಬೇಕು ಎಂದರು.ಪತ್ರಕರ್ತ ಮಲ್ಲಿಕಾರ್ಜುನ ಹೊಸಮನಿ ಉಪನ್ಯಾಸ ನೀಡಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂವಿಧಾನವೇ ಆಧಾರವಾಗಿದೆ. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋದಕ್ಕೆ ಎನ್ನುವರನ್ನೇ ಈ ಬಾರಿ ಬದಲಾಯಿಸಿರಿ. ಅದು ಡಾ.ಬಾಬಾಸಾಹೇಬರ ಸಂವಿಧಾನ ಶಕ್ತಿ. ಪ್ರತಿನಿತ್ಯ ದೇಶದಲ್ಲಿ 28 ಜನ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗುತ್ತಿದ್ದರೂ ಯಾರೊಬ್ಬ ರಾಜಕಾರಣಿಗಳು ಮಾತನಾಡುತ್ತಿಲ್ಲ. ಅಂದರೆ ಭಾರತದಲ್ಲಿ ದಲಿತರು ಅತಂತ್ರ ಸ್ಥಿತಿಯಲ್ಲಿ ಇರುವಂತಾಗಿದೆ. ಭಾರತದ ಇತಿಹಾಸದಲ್ಲಿ ರಾಜ ಮಹಾರಾಜರು ಕತ್ತಿ, ಗುರಾಣಿಗಳಿಂದ ದೇಶವನ್ನು ಬದಲಾಯಿಸಲು ಸಾಧ್ಯವಾಗದ್ದಂತನ್ನು ಕೇವಲ ಒಂದು ಪೆನ್ನಿನಿಂದ ಈ ಭಾರತದ ಚರಿತ್ರೆಯನ್ನೇ ಬದಲಾಯಿಸಿದ ಏಕೈಕ ವ್ಯಕ್ತಿ ಡಾ. ಬಾಬಾ ಸಾಹೇಬರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜ ಸಂಘಟಕರಾಗಿ, ನಮ್ಮ ಪಾಲಿನ ಹಕ್ಕುಗಳಿಗಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದರು.ಡಾ.ಬಾಬಾಸಾಹೇಬ ಅಂಬೇಡ್ಕರ ಹಿತ ರಕ್ಷಣೆ ಸಂಘದ ಅಧ್ಯಕ್ಷ ಶರಣಪ್ಪ ಆಮದಿಹಾಳ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.ಮುಖಂಡ ಯಲ್ಲಪ್ಪ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಇಳಕಲ್ಲ ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಯುವರಾಜ ಚಲವಾದಿ, ಅಂಬಣ್ಣ ಚಲವಾದಿ, ಮಹಾಂತೇಶ ನೀಲನಾಯಕ, ಮಹಿಬೂಬು ಡೊಣೂರ, ನಿವೃತ್ತ ಶಿಕ್ಷಕ ಎಚ್.ವಾಯ್.ಘಂಟಿ, ಸಿತಿಮಾ ವಜ್ಜಲ,ಶಿಕ್ಷಕ ಎಸ್.ಡಿ.ಮಾದರ.ಅರುಣ ಗರಸಂಗಿ,ಭೀಮ ಘರ್ಜನೆ ಯುವಕ ಸಂಘದ ಅಧ್ಯಕ್ಷ ಉಮೇಶ ಕೊಂಡೇಕಾರ,ಉಪಾಧ್ಯಕ್ಷ ದ್ಯಾಮಣ್ಣ ಮೆಂಟಿಗೇರಿ,ಕಾರ್ಯದರ್ಶಿ ಶಿವರಾಜ ಕೊಪ್ಪದ,ಖಜಾಂಚಿ ಶಿವರಾಜ ಕೊಂಡೇಕಾರ,ಸಂಗಪ್ಪ ಕೊಂಡೇಕರ,ಮಹಾಂತೇಶ ಕೊಂಡೇಕಾರ,ವಿನೋಧ ಮೆಂಟಿಗೇರಿ,ಮಾರುತಿ ಚಲವಾದಿ,ಮೌನೇಶ ಮೆಂಟಿಗೇರಿ,ಯಮನೂರ ಚಲವಾದಿ,ರವಿ ಕೊಂಡೇಕಾರ,ಬಸವರಾಜ ಚಲವಾದಿ,ಬಸವರಾಜ ಪಾಟ್ನಾಯಕ,ಪರಶುರಾಮ ಕೊಂಡೇಕಾರ,ರಮೇಶ ಪಾಟ್ನಾಯಕ,ಸಿದ್ದಪ್ಪ ಚಲವಾದಿ,ಕನಕಪ್ಪ ಕೊಂಡೇಕಾರ,ಯಲ್ಲಪ್ಪ ಮೆಂಟಿಗೇರಿ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.