ಹುನಗುಂದಕ್ಕೆ, ಜಮೀರ್ ಅಹಮದ್ ಖಾನ್ ಮುಸ್ಲಿಂ ಬಾಂಧವರಿಂದ – ಅದ್ದೂರಿ ಸ್ವಾಗತ.
ಹುನಗುಂದ ಏಪ್ರಿಲ್.29

ಲೋಕಸಭೆಯ ಚುನಾವಣೆ ನಿಮಿತ್ಯ ಬಾಗಲಕೋಟ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಬೀಳಗಿ ಮತ್ತು ಜಮಖಂಡಿ ಭಾಗದಲ್ಲಿ ಮತ ಯಾಚನೆ ಮತ್ತು ಪ್ರಚಾರ ಕಾರ್ಯ ಮುಗಿಸಿ ರವಿವಾರ ಹುನಗುಂದ ಮಾರ್ಗವಾಗಿ ಬೆಂಗಳೂರಗೆ ಹೋಗುವ ಮಾರ್ಗ ಮಧ್ಯದಲ್ಲಿ ರಾಜ್ಯ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಪಟ್ಟಣದ ಮುಸ್ಲಿಂರು ಮಹಾಂತ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಹೂವು ಮಾಲೆ ಹಾಕಿ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡು. ನಂತರ ವಿಜಯ ಮಹಾಂತ ಸ್ವಾಮಿಗಳ ಪುತ್ಥಳಿಗೆ ಜಮೀರ ಅಹ್ಮದ್ ಖಾನ್ ಅವರು ಹಾರ ಹಾಕಿದರು. ಈ ವೇಳೆ ಮುಖಂಡರಾದ ಅಬ್ದುಲ್ ಜಬ್ಬಾರ ಕಲಬುರ್ಗಿ, ಮಹಿಬೂಬ ಧನ್ನೂರ, ಮಹಿಬೂಬ ಸರಕಾವಸ್, ಯುಸೂಫ್ ನಾಯಕ್, ಅಲ್ತಾಪ್ ಕಲಬುರ್ಗಿ, ಸೇರಿದ್ದಂತೆ ಅನೇಕ ಮುಸ್ಲಿಂ ಬಾಂಧವರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.