“ಮನಸ್ಸು ಹೂವಿನ ತರಹ ಅರಳಲಿ”…..

ಮನಸ್ಸು ಹೂವಿನ ತರಹ ಅರಳಲಿ
ಮೊಗದ ಮನದ ಹೂವು ನಗೆ ಗೆರೆ
ಹೂವು ಬನದ ಚಂದನ ವನ
ಮಗು ಮುಖದ ಅಂದ ಹೂವು ನಗೆ
ಶುಭ ಸಮಯದ ಸರ್ವರೂ ಹರುಷದಿ
ನಲಿಯುವ ಹೂವುಗಳ ಒನಪು
ದೇವನ ಮುಡಿಗೆ ಮೀಸಲು ಮುಂಜಾವು
ಹೂವು ಕಿರಣ ಸೋಬಗು ಯೋಗಿಗಳ
ಹಸ್ತ ಸ್ಪರ್ಶದ ಫಲ ಗುರು ಅರುವಿನ
ಮುಗ್ಧ ಪುಷ್ಪ
ಶಿಷ್ಯಂದಿರ ಗುರುವಂದನೆಯ ಕುಸುಮ
ಚಲುವಿಗೆ ಹೂವು ಸಿಂಗಾರ
ಮಕ್ಕಳ ಚಿತ್ತಾರ ಪಟದಲಿ ಹೂವುಗಳ
ಬಣ್ಣಗಳ ಗೆರೆ ಹೂವುಗಳ ರಾಜ
ಸುಗಂಧರಾಜ ಹೂವು ಎಂದರೆ
ನಾಚಿಕೆ ಅಷ್ಟೇ ಅಲ್ಲ
ಹೂವು ಅಪ್ಪಟ ಸ್ತ್ರೀ ಮಾದರಿತನ
ಮಕ್ಕಳು ಸುಂದರ ಲೋಕದ ಪುಷ್ಪಗಳು
ಮಲ್ಲಿಗೆ ಹೂವು ಸುವಾಸನೆಗೆ
ಹೆಸರುವಾಸಿ ಮೈಸೂರು ಮಲ್ಲಿಗೆ
ಮನಸ್ಸು ಹೂವಿನ ತರಹ ಅರಳಲಿ
ಜಗದಿ ಹರಡುವುದು ಹೂವು
ನಗುವ ಸೊಗಸು
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..