ಹನಿ ನೀರಾವರಿ ಸಮರ್ಪಕವಾಗಿ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ – ರೈತರು ಕೆ.ಬಿ.ಜೆ.ಎನ್.ಎಲ್. ಕಛೇರಿಗೆ ಬೀಗ ಜಡಿದು ಪ್ರತಿಭಟನೆ.

ಹುನಗುಂದ ಅಕ್ಟೋಬರ್.25

ಮುಂಗಾರು ಮತ್ತು ಹಿಂಗಾರು ಮಳೆಯು ಸಂಪೂರ್ಣ ಕೈ ಕೊಟ್ಟಿದ್ದರಿಂದ ಬಿತ್ತಿದ ಬೀಜ ಭೂಮಿಯಲ್ಲಿಯೇ ಕಮರುವ ಹಂತವನ್ನು ತಲುಪುತ್ತಿದ್ದರೂ ಹನಿ ನೀರಾವರಿ ನೀರನ್ನು ಸಮರ್ಪಕವಾಗಿ ರೈತರ ಭೂಮಿಗೆ ಹರಿಸುತ್ತಿಲ್ಲ ಎಂದು ತಾಲೂಕಿನ ೫೦ ಕ್ಕೂ ಅಧಿಕ ರೈತರು ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳ ಮತ್ತು ಹನಿ ನೀರಾವರಿ ಕಂಪನಿಯ ಅಧಿಕಾರಿಗಳ ವಿರುದ್ದ ಹುನಗುಂದ ಸಮೀಪದ ಹನಿ ನೀರಾವರಿ ಪಂಪ ಹೌಸ್‌ನಲ್ಲಿ ಪ್ರತಿಭಟನೆ ನಡೆಸಿ ನಂತರ ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿಯ ಕಾರ್ಯಾಲಯಕ್ಕೆ ಬೀಗ ಜಡಿದು ಕೆಲಹೊತ್ತು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಎಂಟು ಹತ್ತು ದಿನಗಳಿಂದ ಹನಿ ನೀರಾವರಿಯ ನೀರನ್ನು ಸಮರ್ಪಕವಾಗಿ ರೈತರ ಭೂಮಿಗಳಿಗೆ ಬಿಡುತ್ತಿಲ್ಲ ಬೆಳೆ ಒಣಗುತ್ತಿವೆ ನೀರು ಬಿಡಿ ಎಂದು ಸಾಕಷ್ಟು ಮನವಿ ಮಾಡಿದ್ದರೂ ಕೂಡಾ ಕೆಬಿಜೆಎನ್‌ಎಲ್ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳು ರೈತರ ಮನವಿಗೆ ಕ್ಯಾರೇ ಎನ್ನುತ್ತಿಲ್ಲ ಇತ್ತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಜೋಳ,ಕಡಲೆ,ಸೂರ್ಯಕಾಂತಿ,ತೊಗರಿ, ಮೆಣಸಿನಕಾಯಿ,ಈರುಳ್ಳಿ,ಅಜೀವಾನ ಸೇರಿದಂತೆ ಅನೇಕ ಬೆಳೆಗಳು ನೀರಿಲ್ಲದೇ ಮೊಳಕೆಯೊಡೆದು ಭೂಮಿಯಿಂದ ಮೇಲೆ ಬರದೇ ಅಲ್ಲಿಯೇ ಕಮರಿ ಹೋಗುವ ಸ್ಥಿತಿಯನ್ನು ಕಂಡು ಹುನಗುಂದ,ರಕ್ಕಸಗಿ,ಹುಲಿಗಿನಾಳ,ಬೇವಿನಮಟ್ಟಿ,ಇದ್ದಲಗಿ,ಬಿಸನಾಳ,ಬಿಸನಾಳ ಕೊಪ್ಪ,ಬೆಳಗಲ್ಲ,ತಿಮ್ಮಾಪೂರ ಸೇರಿದಂತೆ ಅನೇಕ ಗ್ರಾಮಗಳ ರೈತರು ಸೋಮವಾರ ಹುನಗುಂದ ಸಮೀಪದ ಹನಿ ನೀರಾವರಿ ಪಂಪ ಹೌಸ್ ನಲ್ಲಿ ನೀರು ಬಿಡುವಂತೆ ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರೂ ಆ ದಿನ ದಸರಾ ರಜೆಯ ನೆಪವನ್ನು ಮಾಡಿಕೊಂಡು ಕೆಬಿಜೆಎನ್‌ಎಲ್ ಮತ್ತು ಕಂಪನಿಯ ಅಧಿಕಾರಿಗಳು ಅತ್ತ ಸುಳಿಲೇ ಇಲ್ಲ,ರೈತರು ದೂರವಾಣಿ ಕರೆ ಮಾಡಿ ತಮ್ಮ ಗೋಳನ್ನು ತೋಡಿಕೊಂಡರೂ ಅಧಿಕಾರಿಗಳು ಮಾತ್ರ ದೇಖಿಂಗೆ ಕರಿಂಗೆ ಅಂತಾ ಪೋನ್ ಕಟ್ ಮಾಡಿದ್ರೇ ಹೊರೆತು ರೈತರ ಗೋಳು ಕೇಳದೇ ಇದ್ದಾಗ ಪಂಪ ಹೌಸ್ ನಿಂದ ನೇರವಾಗಿ ಕೆಬಿಜೆಎನ್‌ಎಲ್ ಕಚೇರಿಗೆ ಆಗಮಿಸಿದ ೫೦ ಕ್ಕೂ ಹೆಚ್ಚು ರೈತರು ಕಛೇರಿಗೆ ಬೀಗ ಜಡಿದು ಅಧಿಕಾರಿಗಳ ನಿರ್ಲಕ್ಷ್ಯತನದ ಧೋರಣೆಯ ವಿರುದ್ದ ಘೋಷಣೆಯನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ರೈತರಾದ ಕರಿಯಪ್ಪ ಬೆಳಗಲ್ಲ ಮತ್ತು ಸಂಗಪ್ಪ ಚಿಂತಕಮಲದಿನ್ನಿ ಮಾತನಾಡಿ ಮುಂಗಾರು ಮೊದಲೇ ಕೈಕೊಟ್ಟಿದೇ ಇನ್ನು ಹಿಂಗಾರು ಮಳೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ,ಹನಿ ನೀರಾವರಿಯ ನೀರನ್ನು ನಂಬಿ ಅಲ್ಪ ಸ್ವಲ್ಪ ಹಿಂಗಾರು ಬೆಳೆಗಳಾದ ಜೋಳ,ಕಡಲೆ,ಈರುಳ್ಳಿ,ಮೆನಸಿನಕಾಯಿ ಬೆಳೆಯ ಬಿತ್ತನೆ ಮಾಡಿದ್ದು ಕೆಳದ ಹತ್ತು ದಿನಗಳಿಂದ ಹನಿ ನೀರಾವರಿ ಅನೇಕ ಝೋನ್‌ಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ.ಸಾಕಷ್ಟು ಸಾರಿ ಅಧಿಕಾರಿಗಳಿಗೆ ಹೇಳಿದರೆ ಸ್ಪಂದನೆ ಮಾಡುತ್ತಿಲ್ಲ.ಇತ್ತ ಬಿತ್ತಿದ ಬೀಜ ಮೊಳೆಕೆ ಯೊಡೆದು ಭೂಮಿಯಲ್ಲಿ ಒಣಗುತ್ತಿದೆ.ಹನಿ ನೀರಾವರಿ ಮತ್ತು ಕೆಬಿಜೆಎನ್‌ಎಲ್ ಅಧಿಕಾರಿಗಳು ತಮಗಿಷ್ಟ ಬಂದ ವ್ಯಕ್ತಿಗಳಿಗೆ ನೀರು ಹರಿಸುತ್ತಿದ್ದು ಉಳಿದ ರೈತರ ಸಮಸ್ಯೆಯನ್ನು ಅರ್ಥೈಸಿಕೊಳ್ಳುತ್ತಿಲ್ಲ.ಕೇಳಿದರೆ ಇಂದು ನಾಳೆ ಅಂತಾ ದಿನ ಮುಂದಿಡುತ್ತಿದ್ದಾರೆ ರೈತರ ಬಿತ್ತಿದ ಬೀಜ ಭೂಮಿಯಲ್ಲಿ ಒಣಗಿ ಹೋಗುತ್ತಿದೆ ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ರೈತರಾದ ವೀರಣ್ಣ ಭದ್ರಶೆಟ್ಟಿ,ಶಂಕ್ರಪ್ಪ ಅಗಸಿಮುಂದಿನ,ತಿಮ್ಮಣ್ಣ ಜಾಲಿಹಾಳ,ಪರಸಪ್ಪ ಬರದೆಲಿ,ರಾಮಣ್ಣ ಚಿತ್ರನಾಳ,ಕಂಟೆಪ್ಪ ಚಲವಾದಿ,ದುರಗಪ್ಪ ಮಾದರ,ಅಮೀನಸಾಬ ನದಾಫ್,ಅಶೋಕ ಸಜ್ಜನ,ಮಲ್ಲಪ್ಪ ವಾಸನಗೇರಿ,ಮಲ್ಲಪ್ಪ ಭೋವಿ,ಮಹಾಂತೇಶ ಭದ್ರಶೆಟ್ಟಿ,ಹನಮಂತಪ್ಪ ಗೌಡರ,ಮಹಾಂತೇಶ ಹೊಸಮನಿ,ಸುರೇಶ ಭದ್ರಶೆಟ್ಟಿ,ಮೇಘಪ್ಪ ಅಗಸಿಮುಂದಿನ ಸೇರಿದಂತೆ ಅನೇಕ ರೈತರು ಸೇರಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button