ಜನ ಮನ ರಂಜಿಸಿದ ರಾಜ್ಯ ಮಟ್ಟದ – ತರಬಂಡಿ ಸ್ಪರ್ಧೆ.
ಬ್ಯಾಲ್ಯಾಳ ನ.20

ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದ ಗ್ರಾಮ ದೇವತೆ ಜಾತ್ರೆ ಅಂಗವಾಗಿ ನಡೆದ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯಲ್ಲಿ ರಾಜ್ಯದ ಬೆಳಗಾವಿ ರಾಯಚೂರು ಬಾಗಲಕೋಟ ವಿಜಯಪುರ ಜಿಲ್ಲೆಯ 29 ಜೊತೆ ಎತ್ತುಗಳು ಭಾಗವಹಿಸಿದ್ದವು.
ಅದರಲ್ಲಿ ಮುದೊಳ ತಾಲೂಕಿನ ಬಿದರಿ ಎತ್ತುಗಳು ಪ್ರಥಮ ಸ್ಥಾನ ಪಡೆದು HF ಬೈಕ್ ತಮ್ಮದಾಗಿಸಿ ಕೊಂಡವು ದ್ವಿತೀಯ ರೂಡಗಿ ತೃತೀಯ ರಾಯಚೂರು ಎತ್ತುಗಳು ಬಹುಮಾನ ಪಡೆದವು ಅದಕ್ಕಿಂತ ಮೊದಲ ದಿನ ನಡೆದ ರಾಷ್ಟ್ರ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ರಾಜ್ಯದ 30 ಜೊತೆ ಎತ್ತುಗಳು ಭಾಗವಹಿಸಿದ್ದವು ಅದರಲ್ಲಿ ಮಹಾರಾಷ್ಟ್ರದ ಎತ್ತುಗಳು ಪ್ರಥಮ ಸ್ಥಾನ ಪಡೆದು HF ಬೈಕ್ ತಮ್ಮದಾಗಿಸಿ ಕೊಂಡರೆ ದ್ವೀತಿಯ ಮುದ್ದೇಬಿಹಾಳ ತಾಲ್ಲೂಕಿನ ಜಟ್ಟಗಿ ಗ್ರಾಮದ ಎತ್ತುಗಳು ಪಡೆದವು ತೃತೀಯ ಸ್ಥಾನ ಮಸೂತಿ ಗ್ರಾಮದ ಪಾಲಾಯಿತು.
ಎಂದು ಜಾತ್ರಾ ಮಹೋತ್ಸವ ಮುಖ್ಯಸ್ಥ ಶ್ರೀ ಅವ್ವಣ್ಣ ಸಂಗ್ವಾತಗಿ ಪ್ರಕಟಣೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಶಾಸಕರಾದ ಶ್ರೀ ರಾಜುಗೌಡ ಪಾಟೀಲ ಮಾಜಿ ಶಾಸಕರಾದ ಶ್ರೀ ಸೋಮನಗೌಡ ಬ ಪಾಟೀಲ ಸಾಸನೂರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಆರ್ ಎಸ್ ಪಾಟೀಲ ಕುಚಬಾಳ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶ್ರೀ ಪ್ರಭುಗೌಡ ದೇಸಾಯಿ ಗ್ರಾಮದ ಪ್ರಮುಖರಾದ ಶ್ರೀ ಮಾಮಲ್ಲಪ್ಪಗೌಡ ಗೌಡರ,
ಸಂಗನಗೌಡ ಗ್ವಾತಗಿ,ಬಸನಗೌಡ ಪಾಟೀಲ, ಪ್ರಧಾನಿ ಸಜ್ಜನ್, ಮಲ್ಲಿಕಾರ್ಜುನ ಸಜ್ಜನ, ರಾಮೂ ಹಿರೆಕುರಬರ, ರಾಮನಗೌಡ ಕೊಳುರ, ಮಲ್ಲನಗೌಡ ಕೊಳುರ, ಶ್ರೀಶೈಲ ಮುತ್ತ್ಯಾ ಗೌಡರ, ಬಿ.ಡಿ ಚಲವಾದಿ, ಬಸವರಾಜ್ ಶೇಷಗಿರಿ, ಶಿವಾನಂದ ಹಳ್ಳೂರ, ರಾಮನಗೌಡ ಪಾಟೀಲ, ಶಂಕ್ರಯ್ಯ ಹಿರೇಮಠ, ಶ್ರೀಕಾಂತ ಬಜಂತ್ರಿ, ಹಣಮಂತ ಮುಂದಿನಮನಿ, ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ..ಸಂಕನಾಳ.ಮುದ್ದೇಬಿಹಾಳ