ನಾಡ ಬಾಂಬ್ ಸ್ಪೋಟಕ್ಕೆ ಹಸು ಬಾಯಿ ಛಿದ್ರ.
ಹರವದಿ ಅಕ್ಟೋಬರ್.7

ಕೂಡ್ಲಿಗಿ ತಾಲೂಕಿನ ಹರವದಿ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಹತ್ತಿರ ಶನಿವಾರ ಮಧ್ಯಾಹ್ನ 3:30ಕ್ಕೆ ರೈತ ಮಲಿಯಪ್ಪ ಎತ್ತುಗಳನ್ನು ಅಡವಿಯಲ್ಲಿ ಮೇಯಿಸಿಕೊಂಡು ಬರುವುದಕ್ಕೆ ಹೋದಾಗ ಹೊಲದಲ್ಲಿ ಎತ್ತನ್ನು ಬಿಟ್ಟು ಮರದ ಕೆಳಗೆ ಕುಳಿತಿರುವಾಗ ಏಕಾಏಕಿ ಶಬ್ದ ಕೇಳಿದ್ದು ಆಗ ರೈತ ಹೋಗಿ ನೋಡಿದಾಗ ಎತ್ತಿನ ಬಾಯಲ್ಲಿ ರಕ್ತ ಆಗಿತ್ತು. ಅರಣ್ಯದಲ್ಲಿ ಯಾರೊ ದುಷ್ಕರ್ಮಿಗಳು ಹಂದಿಯನ್ನ ಭೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ಅನ್ನು ತಿಂದು ಹಸು ಬಾಯಿ ಸ್ಪೋಟಗೊಂಡಿದೆ. ಹರವದಿ ಗ್ರಾಮದ ರೈತ ಮಲಿಯಪ್ಪ ಜಮೀನಿನ ಪಕ್ಕದ ಅರಣ್ಯ ಪ್ರದೇಶದಲ್ಲಿ ಹಸುವನ್ನು ಮೇಯಿಸಲು ಬಿಟ್ಟಿದ್ದರು. ಹುಲ್ಲು ಮೇಯಿತ್ತಿದ್ದ ಹಸು, ಕಾಡು ಹಂದಿಗಾಗಿ ಅಕ್ರಮ ಬೇಟೆಗಾರರು ಇರಿಸಿದ್ದ ನಾಡ ಬಾಂಬ್ ಅಗೆದು ಅದು ಸ್ಫೋಟಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದೆ. ಸ್ಫೋಟದಲ್ಲಿ ಬಾಯಿ, ನಾಲಿಗೆ, ದವಡೆ ಹಾಗೂ ಅನ್ನನಾಳ ಛಿದ್ರಗೊಂಡಿದ್ದ ಹಸು, ನೋವಿನಿಂದ ನರಳುತ್ತಿದೆ. ಸಾಲ ಮಾಡಿ ಖರೀದಿಸಿದ್ದ ಎತ್ತುಗಳು: 80 ಸಾವಿರ ಸಾಲವನ್ನು ಪಡೆದು ಖರೀದಿಸಿದ್ದರು. ಎತ್ತು ಬಾಯಿ ಸ್ಫೋಟಗೊಂಡಿದೆ. ಸಾಲ ತೀರಿಸುವುದು ಹೇಗೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನು ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ನಮ್ಮ ಇಲಾಖೆಯವರನ್ನು ಈಗಾಗಲೇ ನಾವು ಕಳಿಸಿಕೊಟ್ಟಿದ್ದೇವೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿ ಈ ಕೃತ್ಯವನ್ನು ಯಾರು ಬೇಟೆಗಾರರು ಮಾಡಿರುತ್ತಾರೆ ಎಂದು ಶಂಕಿ ವ್ಯಕ್ತಪಡಿಸಿ ಇದನ್ನು ಮುಂದಿನ ದಿನಗಳಲ್ಲಿ ಯಾರು ಏನು ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ