ಸಿಡಿಲು ಬಡಿದು ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ 5₹ ಲಕ್ಷ ಚೆಕ್ ವಿತರಣೆ.
ಧೂಪದಹಳ್ಳಿ ಜೂನ್. 07

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕ ದಿ. 07 ಜೂನ್ 2024 ಶುಕ್ರವಾರ ದಂದು ಧೂಪದಹಳ್ಳಿ ಗ್ರಾಮದಲ್ಲಿ ದಿನಾಂಕ 05 ಜೂನ್ 2024 ರಂದು ಸಿಡಿಲು ಬಡಿದು ಸಾವನ್ನಪ್ಪಿದ ಮದ್ನಪ್ಪ ಎಂಬ ಯುವಕನ ಕುಟುಂಬಕ್ಕೆ 5₹ ಲಕ್ಷ ಚೆಕ್ ವಿತರಣೆಯನ್ನು ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಮತ್ತು ಅಮರೇಶ್ ಜಿ.ಕೆ ದಂಡಾಧಿಕಾರಿಗಳು ಸೇರಿ ವಿತರಣೆ ಮಾಡಿದರು.

ನಂತರ ಮಲ್ಲನಾಯಕನಹಳ್ಳಿ ಹತ್ತಿರ ಕೊಟ್ಟೂರಿನಿಂದ ಕೂಡ್ಲಿಗಿಗೆ ಹೋಗುವ ರಸ್ತೆಯ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ ಜೆ ಹರ್ಷವರ್ಧನ್ ಬೂದಿ ಶಿವಕುಮಾರ್ ಮತ್ತು ತಾಲೂಕಾ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು.