ಜನರ ಪ್ರೀತಿ ವಿಶ್ವಾಸ ಪೌರ ಆಯುಕ್ತರಾಗಿ ಮಾಡಿದೆ — ಎಚ್ ಮಹಂತೇಶ್
ತರೀಕೆರೆ ಜುಲೈ.1
ಪೌರ ಕಾರ್ಮಿಕರು, ವಾಟರ್ ಮ್ಯಾನ್ ಗಳು, ಸಿಬ್ಬಂದಿ ವರ್ಗದವರ ಸಹಕಾರದಿಂದ ಹೆಚ್ಚು ಜನಪ್ರಿಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಪುರಸಭಾ ಮುಖ್ಯ ಅಧಿಕಾರಿ ಎಚ್ ಮಹಂತೇಶ್ ಹೇಳಿದರು .

ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಾ ತರೀಕೆರೆಯ ಜನರು ಹೆಚ್ಚು ಪ್ರೀತಿ-ವಿಶ್ವಾಸದಿಂದ ಸರ್ಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಯಿತು. ಇಂದಿನ ಶಾಸಕರಾದ ಡಿಎಸ್ ಸುರೇಶ್ ಹಾಗೂ ಹಾಲಿ ಶಾಸಕರಾದ ಜಿಎಚ್ ಶ್ರೀನಿವಾಸ್ ಮತ್ತು ಪತ್ರಕರ್ತ ಮಿತ್ರರು, ಊರಿನ ಜನರ ಸಹಕಾರ ಪ್ರೀತಿ ವಿಶ್ವಾಸವೇ ನನ್ನನ್ನು ಹಿರಿಯೂರಿನ ನಗರಸಭೆಯ ಪೌರಾಯುಕ್ತರಾಗಲು ಕಾರಣವಾಗಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಅನಂತ್ ನಾಡಿಗ್ ರವರು ಮಾತನಾಡಿ ಸಮಾಜ ಪೌರಕಾರ್ಮಿಕರನ್ನು ನಿರ್ಲಕ್ಷದಿಂದ ನೋಡುತ್ತಾ ಇರುವಾಗ ಅವರ ಸೇವೆಯನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಗೌರವದಿಂದ ಕಾಣುವಂತೆ ಮಾಡಿದವರು ಮಹಾಂತೇಶ್ ರವರು. ತರೀಕೆರೆ ಇತಿಹಾಸದಲ್ಲಿ ಮರೆಯದಂತ ಸಾಧನೆಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ಪೌರಕಾರ್ಮಿಕರು,ಪೋಲಿಸ್ ಸಿಬ್ಬಂದಿ, ಗೃಹರಕ್ಷಕ ದಳ,ಶಾಲಾ ಮಕ್ಕಳಂತೆ ಮಾರ್ಚ್ ಫಾಸ್ಟ್ ಮಾಡಿ ಧ್ವಜ ವಂದನೆಯನ್ನು ಸ್ವೀಕರಿಸಲು ಕಾರಣರಾದವರು ಮಹಾಂತೇಶ್ ಎಂದು ಹೇಳಿದರು. ಪುರಸಭಾ ಸದಸ್ಯರಾದ ದಾದಾಪೀರ್ ಮಾತನಾಡಿ ತರೀಕೆರೆಗೆ ಹೊಸ ಆಯಾಮ ಕೊಡುವ ಉದ್ದೇಶ ಇಟ್ಟುಕೊಂಡವರು, ರಾಜ್ಯದಲ್ಲಿ ಉತ್ತಮ ಸ್ಥಾನಮಾನ, ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಜನಸಾಮಾನ್ಯರಿಗೆ ಹತ್ತಿರವಾಗಿ ಕೆಲಸ ಮಾಡಿದ್ದಾರೆ, ಇವರಿಗೆ ಆತ್ಮೀಯ ಬಿಳ್ಕೊಡುಗೆ ಅಲ್ಲಾ ನೋವಿನ ಬಿಳ್ಕೊಡುಗೆ ಎಂದು ಹೇಳಿದರು. ಟಿ ಎಮ್ ಭೋಜರಾಜು ಮಾತನಾಡಿ ತರೀಕೆರೆ ಪುರಸಭೆ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನ ಪಡೆಯಲು ಮಹಾಂತೇಶ್ ರವರ ಸಾಧನೆ ಪ್ರಮುಖವಾದದ್ದು, ಮೌನವಾಗಿದ್ದು ಜನರೊಂದಿಗೆ ಸಹಭಾಗಿತ್ವದಿಂದ ಅನೇಕ ಸಾಧನೆ ಮಾಡಿದ್ದಾರೆ ಮಹಾಂತೇಶ್ ರವರು ಎಂದು ಹೇಳಿದರು. ಪ್ರಜಾಪಿತ ಬ್ರಹ್ಮ ಕುಮಾರೀಸ್ ನ ರಾಜ ಯೋಗಿನಿ ಭಾಗ್ಯ ಅಕ್ಕ, ಬಿಎಸ್ ಭಗವಾನ್, ಡಾ. ದೇವರಾಜ್, ಮನಸುಳಿ ಮೋಹನ್, ಮುಂತಾದವರು ಮಾತನಾಡಿದರು. ಪೌರಕಾರ್ಮಿಕರು, ವಾಟರ್ ಮ್ಯಾನ್ ಗಳು, ಇಲಾಖೆ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು, ಪುರಸಭಾ ಸದಸ್ಯರುಗಳು ಅಧ್ಯಕ್ಷರು ಮಹಾಂತೇಶ್ ರವರನ್ನು ಅಭಿನಂದಿಸಿದರು. ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ, ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ಸದಸ್ಯರಾದ ಪಾರ್ವತಮ್ಮ, ದಿವ್ಯ ರವಿ, ಯಶೋದಮ್ಮ, ಆಶಾ ಅರುಣ್ ಕುಮಾರ್, ಗಿರಿಜಾ ಪ್ರಕಾಶ್ ವರ್ಮ, ಕವಾಲಿ ಕುಮಾರ್, ರಂಗನಾಥ, ಡಾ. ಚಂದ್ರಶೇಖರ್ ಪತ್ರಕರ್ತರು ಹಾಗು ದಲಿತ ಮುಖಂಡರಾದ ಕೆ ನಾಗರಾಜ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ಬಿಕೆ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ