ನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಕಾರ್ಮಿಕ ಚೀಟಿ ನೀಡುವಂತೆ ಉಸ್ತುವಾರಿ ಸಚಿವರಿಗೆ ಮನವಿ.

ಹೊಸಪೇಟೆ ಆಗಷ್ಟ.16

ವಿಜಯನಗರ ಜಿಲ್ಲೆಯ ಹೊಸಪೇಟೆ,ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವತಿಯಿಂದ 15/08/2023 ರಂದು ಪುನೀತ್ ಕ್ರೀಡಾಂಗಣದಲ್ಲಿ ಆಚರಿಸಿದ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ಮನೆ ಪತ್ರವನ್ನು ನೀಡಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಸಚಿವರು ಇದರ ಬಗ್ಗೆ ನಾನು ಗಮನಹರಿಸುತ್ತೇನೆ ಎಂದು ಹೇಳಿದರು.ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಪೌಷ್ಟಿಕಾಂಶದ ಕೊರತೆ ನೀಗುವುದಕ್ಕಾಗಿ ಆಯಾ ಪ್ರದೇಶಕ್ಕನುಗುಣವಾಗಿ ಅಕ್ಕಿಯೊಂದಿಗೆ ಪ್ರತೀ ವ್ಯಕ್ತಿಗೆ ರಾಗಿ ಅಥಾವಾ ಜೋಳ ಸ್ಥಳೀಯ ಆಹಾರ ಧಾನ್ಯ) ಮತ್ತು 1 ಕೆ.ಜಿ. ತೊಗರಿಬೇಳೆ ಮತ್ತು 1 ಕೆ.ಜಿ.ಎಣ್ಣೆ ಅನುಕೂಲಕರ (ಸರಿಯಾದ )ದರದಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಗುವಂತಾಗಬೇಕು. ಇದರಿಂದ ರೈತರ ಬೆಳೆಗೂ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆಯ ಲಭ್ಯತೆ ಗ್ರಾಮೀಣ ಭಾಗದಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ, ಕಾರ್ಮಿಕರಿಗೆ ವಿಶೇಷವಾಗಿ ಅಪೌಷ್ಠಿಕತೆ ಹೆಚ್ಚುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಅಪೌಷ್ಠಿಕತೆ ನೀಗಿಸುವ ಪೌಷ್ಠಿಕ ಆಹಾರವೂ ಸಿಕ್ಕಂತಾಗುತ್ತದೆ. ಆಹಾರ ಭದ್ರತೆಗೆ ಸರಿಯಾದ ಅರ್ಥ ಬರುತ್ತದೆ.ಉದ್ಯೋಗ ಖಾತರಿಯಲ್ಲಿ 90 ದಿವಸಗಳಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ BOCW ಅಡಿಯಲ್ಲಿ ಕಾರ್ಮಿಕರ ಚೀಟಿಗಳನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಇವೆರಡೂ ಅಪೌಷ್ಠಿಕತೆ ನೀಗಿಸುವ ಆಹಾರ ಭದ್ರತೆ ಮತ್ತು ಆರೋಗ್ಯ ಶಿಕ್ಷಣದಂಥ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಾಗಿದ್ದು, ರೈತರ ಮತ್ತು ಕಾರ್ಮಿಕರಿಗೆ ದೊರಕುವಂತೆ ಕೇಳಿಕೊಳ್ಳುತ್ತೇವೆ. ಏಕಕಾಲಕ್ಕೆ ಪ್ರಯೋಜನ ಜನಪರ ಬೇಡಿಕೆಗಳನ್ನು ಈಡೇರಿಸಬೇಕೆಂದು.ಹಾಗೂ ವಿಜಯನಗರ ಜಿಲ್ಲೆ, ಹೊಸಪೇಟೆ ಹಡಗಲಿ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಕೊಟ್ಟೂರು ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಬಡ ನಿರ್ಗತಿಕ ಕುಟುಂಬಗಳು ಮನೆ ಇಲ್ಲದೆ ಸುಮಾರು ವರ್ಷಗಳಿಂದ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಗುಡಿಸಲು ಹಾಗೂ ಅವಿಭಕ್ತ ಕುಟುಂಬಗಳಿಲ್ಲ ವಾಸವಾಗಿದ್ದು ನಿತ್ಯದ ಬದುಕಿಗೆ ಕೂಲಿಗೆ ಆಶ್ರಯವಾಗಿದೆ ಆದ್ದರಿಂದ ಗ್ರಾಮೀಣ ಕೂಲಿ ಕಾರ್ಮಿಕರಿಗೆ ವಸತಿ ಸೌಕರ್ಯವನ್ನು ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡರು ಸದಸ್ಯರು ಕಾರ್ಯದರ್ಶಿಗಳು ಸಮೇತ ಆಗಮಿಸಿ ಮನವಿ ಪತ್ರವನ್ನು ಜಮೀರ್ ಅಹ್ಮದ್ ಖಾನ್ ಅವರಿಗೆ ನೀಡಿದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button