ಮಾಹಿತಿ ಹಕ್ಕು ಕಾಯ್ದೆಯಡಿ ರೇಲ್ವೆ ಟಿಕೆಟ್ ಹಣ ರೀಫಂಡ್.
ಬಾಗಲಕೋಟೆ ಜೂನ್.06

ರಾಜಸ್ಥಾನದ ಕೋಟಾದಿಂದ ಹೊಸದಿಲ್ಲಿಗೆ ಸುಜಿತ್ ಸ್ವಾಮಿ ಎಂಬುವರು ಜುಲೈ 2 ರಂದು ಪ್ರಯಾಣಿಸಲು 2017 ರ ಏಪ್ರಿಲ್ ಮಾಹೆಯಲ್ಲಿ ರೂ 765 ಮೊತ್ತದ ರೇಲ್ವೆ ಟಿಕೇಟ್ ಕಾಯ್ದೆರಿಸಿದ್ದರು ಬಳಿಕ ಯಾವುದೊ ವಿಚಾರದಿಂದ ಟಿಕೆಟ್ ಕ್ಯಾನ್ಸಲ್ ಮಾಡಿದರು ಟಿಕೆಟ್ ರದ್ದತಿಗಾಗಿ ರೇಲ್ವೆ ಟಿಕೆಟ್ ಕ್ಯಾಬಿನವರು ರದ್ಧತಿ ಶುಲ್ಕ ಸೇರಿ 165 ರೂ ಕಟ್ ಮಾಡಿ ಉಳಿದ ಹಣ ನೀಡಿ ಹೆಚ್ಚಾಗಿ ಸೇವಾ ಶುಲ್ಕವೆಂದು 35 ರೂ ಗಳನ್ನು ಕಡಿತ ಮಾಡಲಾಗಿತ್ತು 35 ರೂಪಾಯಿ ನಿರ್ಲಕ್ಷಿಸುವ ಮೊತ್ತವಲ್ಲವೆಂದು ಪ್ರಶ್ನಿಸಿ ಇದರ ವಿರುದ್ಧವಾಗಿ ಆರ್ ಟಿ ಆಯ್ ದಡಿಯಲ್ಲಿ ಪ್ರಧಾನಿ ಕಚೇರಿ, ಜಿ ಎಸ್ ಟಿ ಕಛೇರಿ, ಹಣಖಾಸು ಕಚೇರಿ ಇಡಿ ಕಚೇರಿಗಳ ದಾಖಲಾತಿಯನ್ನು ಟ್ಯಾಗ ಮಾಡಿ ಸುಮಾರು 50 ಅರ್ಜಿಗಳನ್ನು ದಾಖಲಿಸಿ ಪ್ರಕಾರಣವನ್ನು ಎಲ್ಲರ ಗಮನಕ್ಕೆ ತಂದು ಸಾರ್ವಜನಿಕ ವಲಯದಲ್ಲಿ 35 ರೂ ರೀಫoಡ್ ಗಾಗಿ ರೇಲ್ವೆ ಇಲಾಖೆ ವಿರುದ್ಧ ಸುಧಿರ್ಘ ಐದು ವರ್ಷದ ಹೋರಾಟದಿಂದ ಯಶಸ್ವಿಯಾಗಿದ್ದಲ್ಲದೆ.

2,98 ಲಕ್ಷ ರೇಲ್ವೆ ಗ್ರಾಹಕರಿಗೆ ನ್ಯಾಯ ಸಿಕ್ಕಿದೆ, ರೇಲ್ವೆ ಕೇಟರಿಂಗ ಮತ್ತು ಪ್ರವಾಸೋದ್ಯಮ ನಿಗಮವು 2,98 ಲಕ್ಷ ರೇಲ್ವೆ ಗ್ರಾಹಕರ 2,43 ಕೋಟಿ ಮೊತ್ತವನ್ನು ರೀಫಂಡ್ ರೂಪದಲ್ಲಿ ಮರಳಿಸಲು ಸಮ್ಮತಿ ನೀಡಿದ್ದು ಲಕ್ಷಾಂತರ ಗ್ರಾಹಕರಿಗೆ ಇದರ ಪರಿಣಾಮ ಗೊತ್ತಾಗಿದೆ, ಸರಕಾರಿ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನು, ಬೇಜವಾಬ್ದಾರಿಗಳನ್ನು ಈ ಪ್ರಕಾರಣವೂ ಹೊರ ಹಾಕಿದೆ ಕಾಮಗಾರಿಗಳ ಸ್ಥಿತಿ ಗತಿ ವೆಚ್ಚ ನಿರ್ವಹಣೆ ಅಧಿಕಾರಿಗಳ ನಿರ್ಲಕ್ಷ್ಯ ಲೋಪ ದೋಷಗಳನ್ನು ತಿದ್ದಲು ಪಾರದರ್ಶಕವಾದ ಆರ್ ಟಿ ಐ ಕಾಯ್ದೆಯಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.
ಸುದ್ದಿ ಸಂಗ್ರಹ.