ವಿಜ್ಞಾನ ಶಿಕ್ಷಕರ ಪ್ರಾಯೋಗಿಕ ತರಬೇತಿ ಕಾರ್ಯಾಗಾರ.
ಚಳ್ಳಕೆರೆ ಸ.13

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಎಸ್.ಜಿ.ಟಿ ಹೈಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಟಾಟಾ ಪವರ್ ಲ್ಯಾಬ್ ಆನ್.ಎ ಬೈಕ್( LOB) ವತಿಯಿಂದ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಚಳ್ಳಕೆರೆ ಸಹಯೋಗ ದೊಂದಿಗೆ ತಳಕು ಹೋಬಳಿಯ ಆಯ್ದು ಸರ್ಕಾರಿ ಪ್ರಾಥಮಿಕ /ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೈಯದ್ ಪಯ್ದುಲ್ಲಾ ಮುಖ್ಯ ಶಿಕ್ಷಕರು ಎಸ್. ಜಿ. ಟಿ ಸರ್ಕಾರಿ ಪ್ರೌಢಶಾಲೆ ತಳಕು ಇವರು ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ಅಗಸ್ತ್ಯ ಶಿಕ್ಷಕರಾದ ಬಸವೇಶ್ವರ, ಚಂದ್ರಗೌಡ ಅಗಸ್ತ್ಯ ಫೌಂಡೇಶನ್, ಹಾಗೂ 30 ಶಾಲೆಯ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

ಈ ಶಿಕ್ಷಕರ ತರಬೇತಿ ಕಾರ್ಯಕ್ರಮವು ದಿನಾಂಕ 11/09/2024 ರಿಂದ 12/09/2024 ರವರೆಗೆ ಎರಡು ದಿನಗಳ ಕಾಲ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಹಾಗೂ ವಿಜ್ಞಾನ ಚಟುವಟಿಕೆಗಳ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನಡೆಸಲಾಯಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.