ಸರ್ಕಾರಿ ಪಾಲಿಟೆಕ್ನಿಕ್ ಬಾಲಕರ ವಸತಿ ನಿಲಯ ಕಟ್ಟಡ ಉದ್ಘಾಟನೆ – ಯಶವಂತರಾಯಗೌಡ ಪಾಟೀಲ.
ಇಂಡಿ ಜು.09

ಪ್ರಾಮಾಣಿಕತೆ ಜೀವನದ ಭಾಗವಾಗಿರಲಿ, ನಿಮ್ಮ ಪುಸ್ತಕಗಳ ಜೊತೆಯಲ್ಲಿ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆಯ ಪುಸ್ತಕ ಓದಿ, ನಿಮ್ಮ ಬದುಕು ಬದಲಾವಣೆ ಯಾಗುತ್ತದೆ. ಅವರ ಮಾನವೀಯ ಮೌಲ್ಯಗಳನ್ನು ಹಾಗೂ ಸಂಸ್ಕಾರವನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಿ ಎಂದು ವಿಧ್ಯಾರ್ಥಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಸರಕಾರಿ ಪಾಲಿಟೆಕ್ನಿಕಲ್ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಶಿಕ್ಷಣ ಕಾಶಿಯಾಗಿ ಝಳಕಿ ಗ್ರಾಮವನ್ನು ರೂಪಿಸಲಾಗಿದೆ. ಕಳೆದ ೧೦ ವರ್ಷಗಳಿಂದ ಈ ಮಹಾ ಗಡಿ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ದಿಂದ ಉನ್ನತ ಶಿಕ್ಷಣವರೆಗೆ ಶಿಕ್ಷಣ ಕೇಂದ್ರ ಸ್ಥಾಪಿಸಲಾಗಿದೆ.ಈ ಗಡಿ ಭಾಗದ ಮಕ್ಕಳು ಪ್ರಾಥಮಿಕ ಶಿಕ್ಷಣ ಹಿಡಿದು ಉನ್ನತ ಶಿಕ್ಷಣವರಿಗೆ ಕಲಿಯಲು ಸರಕಾರ ಅವಕಾಶ ಮಾಡಿ ಕೊಟ್ಟಿದೆ. ಇಲ್ಲಿ ಸರಕಾರಿ ವಸತಿ ನಿಲಯ ಮಾಡುವ ಮೂಲಕ ಇನ್ನೊಂದು ಹೊಸ ಹೆಜ್ಜೆ ಇಟ್ಟಂತಾಗಿದೆ. ಈ ಹಿಂದೆ ಝಳಕಿ ಅಂದರೆ ಆರ್.ಟಿ.ಓ ಚಕ್ ಪೋಸ್ಟ್ ಗೆ ಮಾತ್ರ ಹೆಸರು ಸೀಮಿತವಾಗಿತ್ತು. ಅದನ್ನು ಶೈಕ್ಷಣಿಕ ಕೇಂದ್ರಗಳ ಸ್ಥಾಪನೆ ಮಾಡುವ ಮೂಲಕ ಇಂಡಿ ಮತ ಕ್ಷೇತ್ರದಲ್ಲಿ ಏಕೈಕ ಶಿಕ್ಷಣ ಕಾಶಿ ಕೇಂದ್ರವಾಗಿ ಮಾಡಿದ್ದು ನನಗೆ ಸಂತಸ ತಂದಿದೆ.ಈ ಝಳಕಿ ಗ್ರಾಮದಲ್ಲಿ ಸುಮಾರು ೨ ಸಾವಿರಕ್ಕಿಂತಲೂ ಹೆಚ್ಚಿನ ಬಡ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣ ಹಿಡಿದು ಉನ್ನತ ಶಿಕ್ಷಣ ವರೆಗೆ ಸರಕಾರಿ ಶಾಲೆಗಳು ಇವೆ ಅದರ ಜೊತೆಯಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯ ಮಾಡಿದ್ದೇವೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಈ ಸರಕಾರಿ ಶಾಲಾ-ಕಾಲೇಜು ಸಾಕ್ಷಿ ಎಂದು ಹೇಳಿದರು.ಈ ಭಾಗದಲ್ಲಿ ಇನ್ನೂ ಶಿಕ್ಷಣ ಕಲಿಯುವ ಸಂಖ್ಯೆ ಹೆಚ್ಚಾಗಬೇಕು. ಅದಕ್ಕೆ ಪ್ರತಿಯೊಬ್ಬರು ಶಿಕ್ಷಕರು ತಮ್ಮ ಜವ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಶಿಕ್ಷಣ ಕಾಶಿಗೆ ಕೆಟ್ಟ ಹೆಸರು ಬರದ ಹಾಗೆ ನೋಡಿ ಕೊಳ್ಳಬೇಕು. ಸಮಯದ ಪಾಲನೆ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗ ಅಧಿಕಾರಿ ಅಭೀದ್ ಗದ್ಯಾಳ, ಸಿದ್ದಣ್ಣಗೌಡ ಬಿರಾದಾರ, ಶಿವಪುತ್ರ ಜೆವಳಿ, ನಾರಾಯನ ಜಾಗೀರದಾರ, ಸಣ್ಣಪ್ಪ ತಳವಾರ, ರುಕ್ಮುದೀನ ತದ್ದೇವಾಡಿ, ಅಣ್ಣಪ್ಪ ತಳವಾರ, ರಾಘವೇಂದ್ರ ಕಾಪಸೆ, ಶೆಬ್ಬೀರ ಮುಲ್ಲಾ, ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ವಲ್ಲಭ ಕಭಾಡೆ, ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯರು ಸಿ ಕೆ ಯಳಸಂಗಿ, ಪ್ರೌಢ ಶಾಲೆ ಮುಖ್ಯ ಗುರುಗಳು ಎಸ್ ಬಿ ನಾಗಣೆ, ಅಶೋಕ ಕಾಪಸೆ, ಈರಣ್ಣ ವಾಲಿ, ಸತೀಶ ಹತ್ತಿ, ಮೋಮಿನ್ ಜಾವೀದ್, ನೀಲಕಂಠ ರೂಗಿ, ರವಿ ಅರಳಿ, ಶಂಕರಗೌಡ ಬಿರಾದಾರ, ಹಣಮಂತ ಖಡೆಖಡೆ, ಹಣಮಂತ ಕೋಳಿ, ಭೀಮರಾಯ ಪೂಜಾರಿ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ..ಬಿ.ಹರಿಜನ.ಇಂಡಿ.ವಿಜಯಪುರ.