ಶ್ರೀ ಬಸವ ನಗರದಲ್ಲಿ ಶ್ರೀ ಗಣೇಶ – ಚತುರ್ಥಿ ಆಚರಣೆ.
ಬಾಗಲಕೋಟೆ ಆ.28





ಶ್ರೀ ಬಸವನ ನಗರ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಶ್ರೀ ಗಣೇಶ ಉತ್ಸವ ಸೇವಾ ಸಮೀತಿ ಸಹಯೋಗ ದೊಂದಿಗೆ ಶ್ರೀ ಗಣೇಶ ಚತುರ್ಥಿ ಸಂಭ್ರಮ ಸಡಗರ ದೊಂದಿಗೆ ಆಚರಿಸಲಾಯಿತು ಮುಂಜಾನೆ ಸಕಲ ಮಂಗಳ ವಾದ್ಯಗಳೊಂದಿಗೆ ಶ್ರೀ ಗಣಪತಿ ದೇವನ ತೆರದ ವಾಹನದಲ್ಲಿ ಬಪ್ಪರೇ ಬಪ್ಪಾ ಗಣಪತಿ ಬಪ್ಪಾ ಜಯ ಗಣೇಶ ಘೋಷಗಳೊಂದಿಗೆ ಶ್ರೀ ಬಸವ ನಗರ ಸುತ್ತ ಹಾಕಿ ಭಕ್ತಾದಿಗಳು ಆರತಿ ಬೆಳಗುವ ಮುಖಾಂತರ ಪ್ರಥಮ ಪೂಜೆ ಅಧಿಪತಿಯನ್ನು ಸ್ವಾಗತಿಸಿ ಶ್ರೀಗಣೇಶ ಸೇವಾ ಸಮೀತಿ ಮಂಟಪದಲ್ಲಿ ವಿರಾಜಮಾನ ವಿದ್ಯಾ ಬುದ್ದಿ ಸಿದ್ಧಿ ರಿದ್ಧಿ ಸಾಮ್ರಾಟ ವಿನಾಯಕ ದೇವನ ರುದ್ರಾಭಿಷೇಕ ಗಣೇಶ ಅಷ್ಷೋತ್ತರ ನಾಮಸ್ಮರಣೆ ಯೊಂದಿಗೆ ಸಕಲ ಭಕ್ತ ಮಂಡಳಿ ಶ್ರೀ ಗಜಮುಖನ ಪೂಜಿಸಿ ಪುನೀತರಾದರು. ಗೋಧೂಳಿ ಸಮಯದಲ್ಲಿ ಶ್ರೀಗಣೇಶನ ಸ್ಮರಣೆ ಪೂಜೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿ ಅನ್ನ ಪ್ರಸಾದ ವಿತರಣೆ ಶ್ರೀ ಗಣೇಶನ ಪೂಜಾ ಸಾಮಗ್ರಿಗಳ ಸವಾಲು ನಂತರ ಜರುಗಿತು. ಶ್ರೀ ಬಸವ ನಗರ ಮುಖಂಡರಾದ ನಿಃಗಪ್ಪ ಕಂಕಣ ಮೇಲಿ,ಶ್ರೀ ಮಹಾಂತೇಶ ನಾಲತವಾಡ, ವಿರೇಶ ಹಡಕ್ಯಾಳ, ಗುರುಪಾದ ಹಿರೇಕುಂಬಿ, ಬಸವರಾಜ ಹುನಗುಂದ, ಪ್ರಕಾಶ ಅಲ್ದಿ ಸುರೇಶ ಅಂಗಡಿ ಕೋಟಿರಡ್ಡಿ ಡಾ, ತಾನಾಜಿ ಪಾಟೀಲ್ ಸಂಭ್ರಮಗೌಡ ಅಮಾತಿಗೌಡರ ಗುರು ವಡವಡಗಿ ಆನಂದ ಕುಲಕರ್ಣಿ, ಮಲ್ಲಪ್ಪ ಜಕ್ಕಲಿ ಶ್ರೀ ಬಸವ ನಗರ ಬಡಾವಣೆಯ ಸಹ ಕುಟುಂಬ ಪರಿವಾರದವರು ಭಾಗವಸಿ ಶ್ರೀಗಣೇಶ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.