ಕಾಂಗ್ರೇಸ್ ಪಕ್ಷ ಒಂದು ಮನೆ ಮೂರು ಬಾಗಿಲು, ಹಗರಣದಲ್ಲಿ ಮುಳಿಗೆದ್ದಿದೆ ಸಿದ್ದರಾಮಯ್ಯನವರ ಸರ್ಕಾರ – ಸಂಸದ ಕಾರಜೋಳ ಆರೋಪ.
ಹುನಗುಂದ ಜು.09

ಆಡಳಿತ ರೂಢ ಕಾಂಗ್ರೇಸ್ ಪಕ್ಷ ಸಧ್ಯ ಒಂದು ಮನೆ ಮೂರು ಬಾಗಿಲುದಂತಾಗಿದೆ. ವೀರಶೈವ ಲಿಂಗಾಯತ, ದಲಿತರ ಗುಂಪು ಮತ್ತು ಸಿದ್ದರಾಮಯ್ಯನವರ ಗುಂಪು ಹೀಗೆ ಕಾಂಗ್ರೆಸ್ ಪಕ್ಷ ಸಧ್ಯ ಒಡೆದ ಮನೆಯಾಗಿದೆ ಎಂದು ಚಿತ್ರದುರ್ಗದ ನೂತನ ಸಂಸದ ಗೋವಿಂದ ಕಾರಜೋಳ ಸರ್ಕಾರದ ವಿರುದ್ದ ಲೇವಡಿ ಮಾಡಿದರು. ಇಲ್ಲಿನ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ಶಿಥಲ ಸಮರವೇ ನಡೆದಿದೆ. ಅದಕ್ಕಾಗಿ ಗುಂಪುಗಾರಕೆಯು ಕೂಡಾ ನಡೆದಿದೆ. ಸರ್ಕಾರದ ಖಜಾನೆಯ ಹಣವನ್ನು ಸರ್ಕಾರ ಓಟ್ ಬ್ಯಾಂಕ ರಾಜಕಾರಣ ಮಾಡದೆ, ಗ್ಯಾರಂಟಿಗಳಿಗೆ ಹಣ ಕೊಡಲು ಸರ್ಕಾರ ಹರಸಾಹಸ ಪಡುತ್ತಿರುವಾಗ ರಾಜ್ಯದ ಅಭಿವೃದ್ದಿ ಕಾರ್ಯಗಳಲ್ಲಿ ಖಜಾನೆಯಲ್ಲಿ ಹಣವಿಲ್ಲವಾಗಿದೆ. ಪ್ರತಿ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಹಣ ಕೊಡದೇ ಇರೋದರಿಂದ ಸ್ವಪಕ್ಷ ಕಾಂಗ್ರೆಸ್‌ನ ೪೦ ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೇನೆ ನೇರವಾಗಿ ಹೇಳುತ್ತಿದ್ದಾರೆ. ಖಜಾನೆಯ ದುಡ್ಡನ್ನು ಶೇ.೬೦ ರಷ್ಟು ಅಭಿವೃದ್ದಿ ಕಾರ್ಯಗಳಿಗೆ ಖರ್ಚು ಮಾಡಿ ಇನ್ನುಳಿದೆ ಶೇ. ೪೦ ನ್ನು ಕಾಂಟೆಜೆನ್ಸಿ, ಎಸ್ಟಾಬಿಲಿಶಮೆಂಟ್ ಮತ್ತು ಬ್ಯಾಂಕ್ ಸಾಲದ ಮರು ಪಾವತಿಗೆ ಬಳಸಬೇಕು. ಆದರೆ ಇವತ್ತಿನ ಕಾಂಗ್ರೆಸ್ ಸರ್ಕಾರವು ಯಾವುದೆ ಅಭಿವೃದ್ದಿ ಕಾರ್ಯಕ್ಕೆ ಅನುದಾನ ನೀಡಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನಕ್ಕಾಗಿ ರೂ. ೨ ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದೆವು.೨೭ ಸಾವಿರ ಎಕರೆ ಭೂಮಿಯನ್ನ ಭೂ ಸ್ವಾಧೀನ ಮಾಡಿಕೊಂಡು, ರೈತರಿಗೆ ಎಕರೆಗೆ ೨೪ ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಜೊತೆಗೆ ೨೦ ಗ್ರಾಮಗಳ ಪುನರ್ ವಸತಿ ನಿರ್ಮಾಣಕ್ಕೆ ಬೇಕಾದಂತ ಭೂ ಸ್ವಾದೀನ ಮಾಡಿಕೊಂಡು ಲೇಔಟ್ ಫರ‍್ಮೇಶನ್ ಕೂಡಾ ಮಾಡಲಾಗಿತ್ತಿದೆ ಎಂದರು. ಕಾಂಗ್ರೇಸ್ ಸರ್ಕಾರದ ಭ್ರಷ್ಠಾಚಾರ ಮುಗಿಲು ಮುಟ್ಟಿದೆ. ಸರ್ಕಾರದ ಖಜಾನೆ ಹಗಲು ದರೋಡೆಯಾಗುತ್ತಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಹೀಗೆ ಹಲವಾರು ಹಗರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿ.ಮ ಸಂಘದ ಕಾರ್ಯಾಧ್ಯಕ್ಷ ಬಾಗಲಕೋಟ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ವಿ.ಮ ಸಂಘದ ಗೌರ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಬಸವರಾಜ ಕೆಂದೂರ, ಡಾ.ದೇಸಾಯಪ್ಪ ಹವಾಲ್ದಾರ, ಅರುಣೋದಯ ದುದ್ಗಿ, ವೀರಣ್ಣ ಬಳೂಟಗಿ, ರವಿ ಹುಚನೂರ, ರಾಚಪ್ಪ ರಾಜಮನಿ, ಸಂಗಣ್ಣ ಚಿನಿವಾಲರ, ಡಾ.ಎಚ್.ಎಸ್. ಮುದಗಲ್ಲ, ಎಂ.ಎಸ್.ಮಠ ಮತ್ತು ಮಹಾಂತೇಶ ಕತ್ತಿ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.